ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ 2025 ರ ಪ್ರಕಾರ, ಸಿಂಗಾಪುರವು ವಿಶ್ವದ ಅತ್ಯಂತ ಪ್ರಬಲ ಪಾಸ್‌ಪೋರ್ಟ್ ಹೊಂದಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ಎರಡನೇ ಸ್ಥಾನದಲ್ಲಿವೆ. ಭಾರತ ಯಾವ ಸ್ಥಾನದಲ್ಲಿದೆ? ಎಷ್ಟು ದೇಶಗಳಿಗೆ ವಿಸಾ ಇಲ್ಲದೇ ಹೋಗಬಹುದು ಎಂದು ನೀವೇ ವರದಿ ನೋಡಿ..
ಪ್ರಪಂಚದ ಅತಿ ಪವರ್‌ಫುಲ್ ಪಾಸ್‌ಪೋರ್ಟ್ ಯಾವುದು ಗೊತ್ತಾ? ಪ್ರತಿ ವರ್ಷ, ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಶ್ರೇಯಾಂಕವನ್ನು ಬಿಡುಗಡೆ ಮಾಡುತ್ತದೆ. ವೀಸಾ ಇಲ್ಲದೆ (ವೀಸಾ-ಮುಕ್ತ ಅಥವಾ ವೀಸಾ-ಆನ್-ಅರೈವಲ್) ಎಷ್ಟು ದೇಶಗಳಿಗೆ ಪ್ರವೇಶ ಪಡೆಯಬಹುದು ಎಂಬುದರ ಆಧಾರದ ಮೇಲೆ ಶ್ರೇಯಾಂಕ ನೀಡಲಾಗುತ್ತದೆ. ಈ ಬಾರಿಯೂ ಯುರೋಪಿಯನ್ ರಾಷ್ಟ್ರಗಳು ಪಟ್ಟಿಯಲ್ಲಿ ಮೊದಲ 10 ಸ್ಥಾನಗಳಲ್ಲಿ ಹೆಚ್ಚಿನವುಗಳಾಗಿವೆ. ಶ್ರೇಯಾಂಕ ಹೇಗಿದೆ ನೋಡೋಣ.
1. ಸಿಂಗಾಪುರ
ಪ್ರಪಂಚದ ಅತಿ ಪವರ್‌ಫುಲ್ ಪಾಸ್‌ಪೋರ್ಟ್ ಎಂಬ ಹೆಗ್ಗಳಿಕೆ ಸಿಂಗಾಪುರಕ್ಕೆ ಸಂದಿದೆ. ಸಿಂಗಾಪುರ ಪಾಸ್‌ಪೋರ್ಟ್ ಹೊಂದಿರುವವರು 193 ದೇಶಗಳಿಗೆ ವೀಸಾ ಇಲ್ಲದೆ ಪ್ರವೇಶ ಪಡೆಯಬಹುದು. ಪ್ರಬಲ ರಾಜತಾಂತ್ರಿಕತೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
2. ಜಪಾನ್, ದಕ್ಷಿಣ ಕೊರಿಯಾ
ಜಪಾನ್ ಮತ್ತು ದಕ್ಷಿಣ ಕೊರಿಯಾ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿವೆ. ಜಪಾನ್ ಮತ್ತು ದಕ್ಷಿಣ ಕೊರಿಯಾದ ಪಾಸ್‌ಪೋರ್ಟ್‌ಗಳನ್ನು ಬಳಸಿ 190 ದೇಶಗಳಿಗೆ ವೀಸಾ ಇಲ್ಲದೆ ಪ್ರವೇಶ ಪಡೆಯಬಹುದು.
3. ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ಫಿನ್‌ಲ್ಯಾಂಡ್, ಡೆನ್ಮಾರ್ಕ್, ಐರ್ಲೆಂಡ್
ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ಫಿನ್‌ಲ್ಯಾಂಡ್, ಡೆನ್ಮಾರ್ಕ್, ಐರ್ಲೆಂಡ್ ಮೂರನೇ ಸ್ಥಾನವನ್ನು ಹಂಚಿಕೊಂಡಿವೆ. ಈ ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು 189 ದೇಶಗಳಿಗೆ ವೀಸಾ ಇಲ್ಲದೆ ಪ್ರವೇಶ ಪಡೆಯಬಹುದು. ಶೆಂಗೆನ್ ಪ್ರದೇಶ ಮತ್ತು ದೀರ್ಘಕಾಲದ ರಾಜತಾಂತ್ರಿಕ ಒಪ್ಪಂದಗಳು ಇದರ ಮೇಲೆ ಪ್ರಭಾವ ಬೀರಿವೆ.
4. ಆಸ್ಟ್ರಿಯಾ, ಬೆಲ್ಜಿಯಂ, ಲಕ್ಸೆಂಬರ್ಗ್, ನೆದರ್‌ಲ್ಯಾಂಡ್ಸ್, ನಾರ್ವೆ, ಪೋರ್ಚುಗಲ್, ಸ್ವೀಡನ್
ಆಸ್ಟ್ರಿಯಾ, ಬೆಲ್ಜಿಯಂ, ಲಕ್ಸೆಂಬರ್ಗ್, ನೆದರ್‌ಲ್ಯಾಂಡ್ಸ್, ನಾರ್ವೆ, ಪೋರ್ಚುಗಲ್, ಸ್ವೀಡನ್ ನಾಲ್ಕನೇ ಸ್ಥಾನದಲ್ಲಿವೆ. ಈ ಪಾಸ್‌ಪೋರ್ಟ್‌ಗಳು 188 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಖಾತ್ರಿಪಡಿಸುತ್ತವೆ.
5. ಗ್ರೀಸ್, ಸ್ವಿಟ್ಜರ್‌ಲ್ಯಾಂಡ್, ನ್ಯೂಜಿಲೆಂಡ್
ಗ್ರೀಸ್, ಸ್ವಿಟ್ಜರ್‌ಲ್ಯಾಂಡ್, ನ್ಯೂಜಿಲೆಂಡ್ ಐದನೇ ಸ್ಥಾನವನ್ನು ಹಂಚಿಕೊಂಡಿವೆ. 187 ದೇಶಗಳಿಗೆ ವೀಸಾ ಇಲ್ಲದೆ ಪ್ರವೇಶವನ್ನು ಅನುಮತಿಸುವ ಪಾಸ್‌ಪೋರ್ಟ್‌ಗಳನ್ನು ಈ ದೇಶಗಳು ಹೊಂದಿವೆ.
6. ಯುನೈಟೆಡ್ ಕಿಂಗ್‌ಡಮ್
186 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುವ ಪಾಸ್‌ಪೋರ್ಟ್ ಹೊಂದಿರುವ ಯುನೈಟೆಡ್ ಕಿಂಗ್‌ಡಮ್ ಆರನೇ ಸ್ಥಾನದಲ್ಲಿದೆ.
7. ಆಸ್ಟ್ರೇಲಿಯಾ, ಹಂಗೇರಿ, ಮಾಲ್ಟಾ, ಪೋಲೆಂಡ್
ಆಸ್ಟ್ರೇಲಿಯಾ, ಹಂಗೇರಿ, ಮಾಲ್ಟಾ, ಪೋಲೆಂಡ್ ಏಳನೇ ಸ್ಥಾನದಲ್ಲಿವೆ. ಈ ದೇಶಗಳ ಪಾಸ್‌ಪೋರ್ಟ್‌ಗಳು 185 ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಅನುಮತಿಸುತ್ತವೆ.
8: ಕೆನಡಾ, ಎಸ್ಟೋನಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್
ಎಂಟನೇ ಸ್ಥಾನದಲ್ಲಿ ಕೆನಡಾ, ಎಸ್ಟೋನಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಇವೆ. ಈ ದೇಶಗಳ ಪಾಸ್‌ಪೋರ್ಟ್‌ಗಳು 184 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತವೆ.
9. ಕ್ರೊಯೇಷಿಯಾ, ಲ್ಯಾಟ್ವಿಯಾ, ಸ್ಲೋವಾಕಿಯಾ, ಸ್ಲೊವೇನಿಯಾ
ಕ್ರೊಯೇಷಿಯಾ, ಲ್ಯಾಟ್ವಿಯಾ, ಸ್ಲೋವಾಕಿಯಾ, ಸ್ಲೊವೇನಿಯಾ ಒಂಬತ್ತನೇ ಸ್ಥಾನದಲ್ಲಿವೆ. ಈ ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು 183 ದೇಶಗಳಿಗೆ ವೀಸಾ ಇಲ್ಲದೆ ಪ್ರವೇಶ ಪಡೆಯಬಹುದು.
10. ಯುಎಸ್ಎ, ಲಿಥುವೇನಿಯಾ, ಐಸ್‌ಲ್ಯಾಂಡ್
ಐಸ್‌ಲ್ಯಾಂಡ್, ಲಿಥುವೇನಿಯಾ ಜೊತೆಗೆ ಹತ್ತನೇ ಸ್ಥಾನದಲ್ಲಿ ಯುಎಸ್ಎ ಇದೆ. ಪಾಸ್‌ಪೋರ್ಟ್ ಹೊಂದಿರುವವರು 182 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಪಡೆಯಬಹುದು.
ಪಟ್ಟಿಯಲ್ಲಿ ಚೀನಾ 60ನೇ ಸ್ಥಾನದಲ್ಲಿದ್ದರೆ, ಭಾರತ 77ನೇ ಸ್ಥಾನದಲ್ಲಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು 59 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಪಡೆಯಬಹುದು. 25 ಸ್ಥಳಗಳಿಗೆ ಮಾತ್ರ ವೀಸಾ ಮುಕ್ತ ಪ್ರವೇಶವನ್ನು ನೀಡುವ ಅಫ್ಘಾನಿಸ್ತಾನ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
