Asianet Suvarna News Asianet Suvarna News

ನಾಲ್ಕು ಮದುವೆ, ನಾಲ್ಕು ವಿಚ್ಛೇದನ, 75 ವರ್ಷದ ಸಲ್ಮಾನ್‌ ರಶ್ದಿ ಜೀವನ!

1988ರಲ್ಲಿ ದಿ ಸೆಟಾನಿಕ್‌ ವರ್ಸಸ್‌ ಕಾದಂಬರಿ ಪ್ರಕಟಗೊಂಡ ಬೆನ್ನಲ್ಲಿಯೇ, ಲೇಖಕ ಸಲ್ಮಾನ್‌ ರಶ್ದಿ ಅವರ ಜೀವನ ಸಂಪೂಣರ್ವಾಗಿ ಬದಲಾಗಿ ಹೋಯಿತು. ಪ್ರತಿದಿನವೂ ಜೀವ ಬೆದರಿಕೆ, ಫತ್ವಾ, ನಿಷೇಧ ಹಾಗೂ ಆಶ್ರಯ ಬೇಡಿಕೊಳ್ಳುವಂಥ ಹಂತಕ್ಕೆ ಬಂದಿದ್ದರು. ಇವೆಲ್ಲದರ ನಡುವೆಯೂ 75 ವರ್ಷದ ಜೀವನದಲ್ಲಿ ನಾಲ್ಕು ಮದುವೆ, ನಾಲ್ಕು ವಿಚ್ಛೇದನವನ್ನೂ ಅವರು ಪಡೆದಿದ್ದರು.
 

Having made four marriages four divorce Salman Rushdie Life after The Satanic Verses san
Author
Bengaluru, First Published Aug 13, 2022, 2:34 PM IST

ನ್ಯೂಯಾರ್ಕ್ (ಆ.13): ದೇಶಭ್ರಷ್ಟರಾಗಿರುವ ಲೇಖಕರು ಹಾಗೂ ಕಲಾವಿದರಿಗೆ ಅಮೆರಿಕ ಆಶ್ರಯ ನೀಡುವ ಕುರಿತಾದ ವಿಚಾರದಲ್ಲಿ ಭಾಷಣ ಮಾಡಲು ಪಶ್ಚಿಮ ನ್ಯೂಯಾರ್ಕ್‌ನ ಚೌಟೌಕ್ವಾ ಇನ್‌ಸ್ಟಿಟ್ಯೂಷನ್‌ನಲ್ಲಿ ಸಲ್ಮಾನ್‌ ರಶ್ದಿ ಕಾಯುತ್ತಿದ್ದರು. ಇನ್ನೇನು ಸಲ್ಮಾನ್‌ ರಶ್ದಿ ವೇದಿಕೆ ಏರಬೇಕು ಎನ್ನುವ ವೇಳೆಗೆ ದುಷ್ಕರಮಿಯೊಬ್ಬ ಬಂದು ಅವರ ಮೇಲೆ ದಾಳಿ ಮಾಡಿದ. ರಶ್ದಿ ದೇಹದ ಮೇಲೆ 10 ರಿಂದ 15 ಬಾರಿ ಇರಿದು ಗಾಯಗೊಳಿಸಿದ್ದ. ರಕ್ತದ ಮಡುವಿನಲ್ಲಿದ್ದ ಅವರನ್ನು ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ಬಹುತೇಕ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳಲಿರುವ ರಶ್ದಿ ಅವರ ಲಿವರ್‌ಗೂ ಗಂಭೀರ ಪ್ರಮಾಣದ ಗಾಯವಾಗಿದೆ. ಕೈಗಳ ರಕ್ತನಾಳಗಳು ಕೂಡ ಕಟ್‌ ಆಗಿದೆ. ದೊಡ್ಡ ಶಸ್ತ್ರಚಿಕಿತ್ಸೆಯನ್ನೂ ಅವರಿಗೆ ಮಾಡಲಾಗಿದ್ದು, ಪ್ರಸ್ತುತ ಅವರ ಪರಿಸ್ಥಿತಿ ಗಂಭೀರವಾಗಿದೆ. ಇದರ ನಡುವೆ 33 ವರ್ಷಗಳ ಹಿಂದೆ ಅವರು ಬರೆದಿದ್ದ, ವಿಶ್ವದ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದ್ದ ದಿ ಸೆಟಾನಿಕ್‌ ವರ್ಸಸ್‌ ಕಾದಂಬರಿಯೇ ಅವರ ಮೇಲಿನ ದಾಳಿಗೆ ಪ್ರೇರಣೆ ಎಂದು ಹೇಳಲಾಗಿದೆ. ಅದೊಂದು ಕಾದಂಬರಿಯಿಂದಾಗಿ ಜೀವನಪೂರ್ತಿ ಆತಂಕದಿಂದಲೇ ಬದುಕಿದ ಸಲ್ಮಾನ್‌ ರಶ್ದಿಗೆ ಬಂದಿದ್ದ ಜೀವ ಬೆದರಿಕೆಗಳು ಲೆಕ್ಕಕ್ಕಿಲ್ಲ. ಇವೆಲ್ಲದರ ನಡುವೆಯೂ 75 ವರ್ಷದ ಸಲ್ಮಾನ್‌ ರಶ್ದಿ ತಮ್ಮ ವೈಯಕ್ತಿಕ ಜೀವನವನ್ನು ರಂಜನೀಯವಾಗಿ ಕಳೆದಿದ್ದರು. ರಶ್ದಿ ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಬಾರಿ ಚರ್ಚೆಗಳೂ ಆಗಿವೆ.

ಮುಂಬೈನಲ್ಲಿ ತಮ್ಮ ಜನನವಾದ ಬಳಿಕ ಬ್ರಿಟನ್‌ಗೆ ಸ್ಥಳಾಂತರವಾಗಿದ್ದ ಸಲ್ಮಾನ್‌ ರಶ್ದಿ ಒಟ್ಟು ನಾಲ್ಕು ಬಾರಿ ಮದುವೆಯಾಗಿದ್ದರು. ಇಂಗ್ಲೆಂಡ್‌ನ ರಗ್ಬಿ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ಅವರು, ಕೆಂಬ್ರಿಡ್ಜ್‌ ವಿವಿಯಲ್ಲಿ ಇತಿಹಾಸದ ವಿಷಯದಲ್ಲಿ ಪದವಿ ಪೂರೈಸಿದ್ದರು. ಬರಹಗಾರರಾಗುವ ಮುನ್ನ, ಜಾಹೀರಾತು ಏಜೆನ್ಸಿಗಳಲ್ಲಿ ಕಾಪಿರೈಟರ್‌ ಆಗಿ ಕೆಲಸ ಮಾಡಿದ್ದರು.

ಕ್ಲಾರಿಸ್ಸಾ ಲುವಾರ್ಡ್‌: 1969ರಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಮೊದಲ ಬಾರಿಗೆ ಸಲ್ಮಾನ್‌ ರಶ್ದಿ ಕ್ಲಾರಿಸ್ಸಾ ಲುವಾರ್ಡ್‌ ಅವರನ್ನು ಭೇಟಿ ಮಾಡಿದ್ದರು. ಅವರು 1974 ರಲ್ಲಿ ಲಂಡನ್ ಪಬ್ಲಿಷಿಂಗ್ ಹೌಸ್ ಪಾಲ್ ಎಲೆಕ್‌ಗೆ ಪ್ರಚಾರ ವ್ಯವಸ್ಥಾಪಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಹಾಗೂ ಅಪ್ರಕಟಿತ ಲೇಖಕರೊಂದಿಗೆ ವಾಸಿಸುತ್ತಿದ್ದರು. 1976ರಲ್ಲಿ ಇವರ ವಿವಾಹ ನಡೆದಿತ್ತು. 1987ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.  ಸಲ್ಮಾನ್ ಅವರಂತೆಯೇ ಕ್ಲಾರಿಸ್ಸಾ ಕಲೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದರು. ಅವರು ಆರ್ಟ್ಸ್ ಕೌನ್ಸಿಲ್ ಆಫ್ ಇಂಗ್ಲೆಂಡ್‌ ಲಿಟರೇಚರ್‌ ಅಅಧಿಕಾರಿಯೂ ಆದರು. 1979ರಲ್ಲಿ ಜಾಫರ್‌ ಹೆಸರಿನ ಪುತ್ರ ಕೂಡ ಜನಿಸಿದ್ದ. ಕ್ಯಾನ್ಸರ್‌ನ ಜೊತೆ ಹೋರಾಟ ನಡೆಸಿದ್ದ ಕ್ಲಾರಿಸ್ಸಾ 1999ರಲ್ಲಿ ನಿಧನರಾದರು.

ಮರಿಯಾನ್ನೆ ವಿಗ್ಗಿನ್ಸ್: 1988ರಲ್ಲಿ ಅಮೆರಿಕ ಮೂಲದ ಲೇಖಕಿ ಮರಿಯಾನ್ನೆ ವಿಗ್‌ಗಿನ್ಸ್‌ ಅವರನ್ನು ವಿವಾಹವಾದರು. 1989ರಲ್ಲಿ ಈ ಜೋಡಿ ಲಂಡನ್‌ನಲ್ಲಿ ವಾಸ ಮಾಡುತ್ತಿರುವಾಗಲೇ ಇರಾನ್‌ ಅಧ್ಯಕ್ಷ ಫತ್ವಾ ಹೊರಡಿಸಿದ್ದ. ದಿ ಸಾಟಾನಿಕ್‌ ವರ್ಸಸ್‌ಗಾಗಿ ಸಲ್ಮಾನ್‌ ರಶ್ದಿಯ ಹತ್ಯೆ ಮಾಡಬೇಕು ಎಂದು ಫತ್ವಾ ಹೊರಡಿಸಲಾಗಿತ್ತು. ಮರಿಯಾನ್ನೆ ಸಲ್ಮಾನ್‌ ಜೊತೆ ತಲೆಮರೆಸಿಕೊಂಡರು ಮತ್ತು ಇಬ್ಬರೂ ಅಂತಿಮವಾಗಿ 1993 ರಲ್ಲಿ ವಿಚ್ಛೇದನ ಪಡೆದರು. ಮರಿಯಾನ್ನೆ ಕೂಡ ಪ್ರಸಿದ್ಧ ಬರಹಗಾರ್ತಿಯಾಗಿದ್ದು, 1989 ರ ಜಾನೆಟ್ ಹೈಡಿಂಗರ್ ಕಾಫ್ಕಾ ಪ್ರಶಸ್ತಿಯನ್ನು ಜಯಿಸಿದ್ದಾರೆ. ಜಾನ್‌ ಡಾಲರ್‌ ಕೃತಿಗಾಗಿ ಈ ಪ್ರಶಸ್ತಿ ಜಯಿಸಿದ್ದರು. ಎವಿಡೆನ್ಸ್‌ ಆಫ್‌ ಥಿಂಗ್ಸ್‌ ಅನ್‌ಸೀನ್‌ ಪುಸ್ತಕಕ್ಕಾಗಿ ನ್ಯಾಷನಲ್‌ ಬುಕ್‌ ಅವಾರ್ಡ್ಸ್‌ನ ಫೈನಲಿಸ್ಟ್‌ ಆಗಿದ್ದರು.

ಲೇಖಕ ಸಲ್ಮಾನ್‌ ರಶ್ದಿ ಗಂಭೀರ, ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ!

ಎಲಿಜಬೆತ್‌ ವೆಸ್ಟ್‌:  ಸಲ್ಮಾನ್ ಮತ್ತೊಮ್ಮೆ ಸಹ ಲೇಖಕಿಯನ್ನು ವಿವಾಹವಾದರು, 1997 ರಲ್ಲಿ ಎಲಿಜಬೆತ್ ಅವರ ವಿವಾಹವಾಗಿದ್ದರು. ಅವರು ಗ್ರಾಮೀಣ ವೇಲ್ಸ್‌ನಲ್ಲಿ ವಾಸಿಸುವ ಅನುಭವಗಳ ಬಗ್ಗೆ ಇನ್ ದಿ ಹಿಲ್ಸ್ ಸರಣಿಯ ಪುಸ್ತಕಗಳನ್ನು ಬರೆದರು.  "ಮಿರರ್‌ವರ್ಕ್: 50 ಇಯರ್ಸ್ ಆಫ್ ಇಂಡಿಯನ್ ರೈಟಿಂಗ್ 1947-1997' ಪುಸ್ತಕವನ್ನು ಸಲ್ಮಾನ್‌ ರಶ್ದಿ ಹಾಗೂ ಎಲಿಜಬೆತ್‌ ವೆಸ್ಟ್‌ ಜೊತೆಯಾಗಿ ಬರೆದಿದ್ದರು. 1999ರಲ್ಲಿ ಇವರಿಬ್ಬರಿಗೆ ಮಿಲನ್‌ ರಶ್ದಿ ಎನ್ನುವ ಪುತ್ರ ಕೂಡ ಹುಟ್ಟಿದ್ದ. ಸಲ್ಮಾನ್ ಮತ್ತು ಎಲಿಜಬೆತ್ 2004 ರಲ್ಲಿ ವಿಚ್ಛೇದನ ಪಡೆದಿದ್ದರೂ, ಅದಕ್ಕೂ ಮುನ್ನವೇ ಸಲ್ಮಾನ್‌ ತಮ್ಮ ಭಾವಿ ಹಾಗೂ ನಾಲ್ಕನೇ ಪತ್ನಿ ಪದ್ಮ ಲಕ್ಷ್ಮಿಯ ಜೊತೆ ವಾಸ ಆರಂಭಿಸಿದ್ದರು.

ಉಪನ್ಯಾಸ ನೀಡಲು ವೇದಿಕೆ ಹತ್ತಿದ ಲೇಖಕ ಸಲ್ಮಾನ್ ರಶ್ದಿ ಚಾಕು ಇರಿತ!

ಪದ್ಮಲಕ್ಷ್ಮೀ:  ಎಲಿಜಬೆತ್‌ ಜೊತೆ ವಿಚ್ಛೇದನ ಪಡೆದ ವರ್ಷವೇ ಭಾರತೀಯ ಮೂಲಕ, ಅಮೆರಿಕನ್‌ ಮಾಡೆಲ್‌ ಪದ್ಮಲಕ್ಷ್ಮಿಯನ್ನು ವಿವಾಹವಾದರು. ಕುಕ್‌ಬುಕ್‌ ಲೇಖಕಿ ಕೂಡ ಆಗಿದ್ದ ಪದ್ಮಲಕ್ಷ್ಮೀ, 1999 ರಲ್ಲಿ Easy Exotic: A Model's Low-Fat Recipes From Around the World ಅನ್ನು ಪ್ರಕಟಿಸಿದರು. 2006 ರಲ್ಲಿ ಬ್ರಾವೋ ಅವರ ಟಾಪ್ ಚೆಫ್ ಅಡುಗೆ ಸ್ಪರ್ಧೆಯಲ್ಲಿ ಸೀಸನ್ 2 ಹೋಸ್ಟ್ ಮತ್ತು ತೀರ್ಪುಗಾರರಾಗಿ ಹೆಸರಿಸಲ್ಪಟ್ಟ ನಂತರ ಅವರು ಜನಪ್ರಿಯರಾದರು. ಇಂದಿಗೂ ಅವರು ಈ ಕೆಲಸದಲ್ಲಿದ್ದಾರೆ.  ಸಲ್ಮಾನ್‌ ಹಾಗೂ ಪದ್ಮಲಕ್ಷ್ಮಿ 2007ರಲ್ಲಿ ವಿಚ್ಛೇದನ ಪಡೆದಿದ್ದರು. ಈ ದಂಪತಿಗೆ ಮಕ್ಕಳಿಲ್ಲ. ಆದರೆ, 2010ರಲ್ಲಿ ಮಾಜಿ ಗೆಳೆಯ ಆಡಮ್‌ ಡೆಲ್‌ ಜೊತೆ ಪುತ್ರಿ ಕೃಷ್ಣಾಗೆ ಜನ್ಮ ನೀಡಿದ್ದರು.

ಇವುಗಳಲ್ಲದೆ, ಸಲ್ಮಾನ್‌ ರಶ್ದಿ ಬಾಲಿವುಡ್‌ ನಟಿ ರಿಯಾ ಸೆನ್‌ ಜೊತೆಗೂ ಅಫೇರ್‌ ಹೊಂದಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಇದನ್ನು ಸಲ್ಮಾನ್‌ ರಶ್ದಿಯಾಗಲಿ, ರಿಯಾ ಸೆನ್‌ ಆಗಲಿ ಒಪ್ಪಿಕೊಂಡಿರಲಿಲ್ಲ.

Follow Us:
Download App:
  • android
  • ios