Asianet Suvarna News Asianet Suvarna News

ಉಪನ್ಯಾಸ ನೀಡಲು ವೇದಿಕೆ ಹತ್ತಿದ ಲೇಖಕ ಸಲ್ಮಾನ್ ರಶ್ದಿ ಚಾಕು ಇರಿತ!

ಮುಂಬೈ ಮೂಲದ ಖ್ಯಾತ ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿತ. ವೇದಿಕೆ ಮೇಲೆ ಹತ್ತಿ ಚಾಕು ಇರಿತ ಅಪರಿಚಿತ ವ್ಯಕ್ತಿ. ಸಲ್ಮಾನ್ ರಶೀದೆ ಪರಿಸ್ಥಿತಿ ಗಂಭೀರ.

Indian Author Salman Rushdie stabbed on stage before deliver a lecture in Chautauqua Institution New York ckm
Author
Bengaluru, First Published Aug 12, 2022, 9:57 PM IST

ನ್ಯೂಯಾರ್ಕ್(ಆ.12):  ಮುಂಬೈ ಮೂಲದ ಲೇಖಕ ಸಲ್ಮಾನ್ ರಶ್ದಿ ಉಪನ್ಯಾಸ ನೀಡಲು ವೇದಿಕೆ ಹತ್ತಿದ ಬೆನ್ನಲ್ಲೇ ಅಪರಿಚಿತ ವ್ಯಕ್ತಿ ಆಗಮಿಸಿ ಚಾಕು ಇರಿದ ಘಟನೆ ನ್ಯೂಯಾರ್ಕನ ಚೌಟೌಕ್ಯೂ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ. ಈ ಘಟನೆಯಿಂದ ತೀವ್ರ ಗಾಯಕ್ಕೆ ತುತ್ತಾಗಿರುವ ಸಲ್ಮಾನ್ ರಶ್ದಿಯನ್ನು ಆಸ್ಪತ್ರೆ ದಾಖಲಾಗಿಸಲಾಗಿದೆ. ಉಪನ್ಯಾಸ ನೀಡಲು ವೇದಿಕೆಗೆ ಆಗಮಿಸಿದ ಸಲ್ಮಾನ್ ರಶ್ದಿ ಪರಿಚಯವನ್ನು ಕಾರ್ಯಕ್ರಮ ಆಯೋಜಕರು ಮಾಡುತ್ತಿದ್ದರು. ವೇಳೆ ವೇದಿಕೆ ಹತ್ತಿದ ಅಪರಿಚಿತ ನೇರವಾಗಿ ಸಲ್ಮಾನ್ ರಶ್ದಿ ಬಳಿ ತೆರಳಿ ಹಲ್ಲೆ ಮಾಡಿದ್ದಾರೆ. ಬಳಿಕ ಚಾಕುವಿನಿಂದ ಇರಿದಿದ್ದಾನೆ.  ತೀವ್ರ ಗಾಯಗೊಂಡ ಸಲ್ಮಾನ್ ರಶೀದೆ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ.  ಈ ವೇಳೆ ಕಾರ್ಯಕ್ರಮ ಆಯೋಜರು ವೇದಿಕೆಗೆ ಆಗಮಿಸಿ ಸಲ್ಮಾನ್ ರಶೀದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

1980ರಿಂದ ಇರಾನಿಂದ ತೀವ್ರ ಬೆದರಿಕೆ ಎದುರಿಸುತ್ತಿದ್ದ ಸಲ್ಮಾನ್ ರಶ್ದಿ ಮೇಲೆ ಇದೀಗ ದಾಳಿಯಾಗಿದೆ. 1988ರಲ್ಲಿ ಸಲ್ಮಾನ್ ರಶ್ದಿ ಅವರ ಸೈಟಾನಿಕ್ ವರ್ಸಸ್ ಪುಸ್ತಕವನ್ನು ಇರಾನ್ ನಿಷೇಧಿಸಿತ್ತು. ಇದು ಧರ್ಮನಿಂದನೆ ಪುಸ್ತಕ ಎಂದು ಇರಾನ್ ದೇಶ ಬ್ಯಾನ್ ಮಾಡಿತ್ತು. ರಶೀದ್ ವಿರುದ್ಧ ಅಂದಿನ ಇರಾನ್ ನಾಯಕ ರುಹೊಲ್ಲಾ ಖೋಮೇನಿ ಫತ್ವಾ ಹೊರಡಿಸಿದ್ದರು. ಇಷ್ಟೇ ಅಲ್ಲ ಸಲ್ಮಾನ್ ರಶ್ದಿಯನ್ನು ಹತ್ಯೆ ಮಾಡಿದ ವ್ಯಕ್ತಿಗೆ 3 ಮಿಲಿಯನ್ ಹೆಚ್ಚು ಬಹುಮಾನ ಮೊತ್ತ ನೀಡುವುದಾಗಿ ಘೋಷಿಸಿದ್ದರು. 

ರುಹೊಲ್ಲಾ ಫತ್ವಾದಿಂದ ಇರಾನ್ ಸರ್ಕಾರ ದೂರ ಉಳಿದಿಕೊಂಡಿತ್ತು. ಆದರೆ ಕಿಚ್ಚು ಮಾತ್ರ ಆರಿರಲಿಲ್ಲ. 2012ರಲ್ಲಿ ಇರಾನ್ ಧಾರ್ಮಿಕ ಪ್ರತಿಷ್ಠಾನ ರಶಿಧೆ ತಲೆಗೆ ಘೋಷಿಸಿದ್ದ 3 ಮಿಲಿಯನ್ ಮೊತ್ತವನ್ನು 3.3 ಮಿಲಿಯನ್‌ಗೆ ಏರಿಕೆ ಮಾಡಿತ್ತು. ಆದರೆ ಈ ಬೆದರಿಕೆಗಳನ್ನು ರಶ್ದಿ ತಳ್ಳಿ ಹಾಕಿದ್ದರು. 

Follow Us:
Download App:
  • android
  • ios