ಇರಾನಿನಲ್ಲಿ 2.5 ಕೋಟಿ ಜನರಿಗೆ ಸೋಂಕು: ಸ್ವತಃ ಅಧ್ಯಕ್ಷ ರೌಹಾನಿ ಹೇಳಿಕೆ| ಅಧ್ಯಕ್ಷ ರೌಹಾನಿ ಕಳವಳ| ಯಾವ ಮಾನದಂಡದಿಂದ ಈ ಲೆಕ್ಕಚಾರ ಬಹಿರಂಗವಾಗಿಲ್ಲ

ಟೆಹ್ರಾನ್(ಜು.19)‌: ಮಧ್ಯಪ್ರಾಚ್ಯದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿರುವ ಇರಾನ್‌ನಲ್ಲಿ ಈಗಾಗಲೇ 2.5 ಕೋಟಿ ಜನರಿಗೆ ಕೊರೋನಾ ಬಂದಿರಬಹುದು ಎಂದು ಸ್ವತಃ ಅಧ್ಯಕ್ಷ ಹಸನ್‌ ರೌಹಾನಿ ಬಹಿರಂಗಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನರಿಗೆ ಸ್ವಾತಂತ್ರ ಬೇಕು, ಅದಕ್ಕೆ ಅವರಿಗೆ ಮಾಸ್ಕ್‌ ತೊಡಲು ಹೇಳಲ್ಲ: ಟ್ರಂಪ್‌

ದೇಶದಲ್ಲಿ ಕೊರೋನಾ ಸೋಂಕಿನ ಕುರಿತ ಆರೋಗ್ಯ ಇಲಾಖೆ ಸಿದ್ಧಪಡಿಸಿದ ವರದಿ ಆಧರಿತಿ ಅವರು ಈ ಮಾಹಿತಿ ನೀಡಿದ್ದಾರೆ. ಆದರೆ ಯಾವ ಮಾನದಂಡದಿಂದ ಈ ಲೆಕ್ಕಚಾರ ಹಾಕಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ರೌಹಾನಿ ಅವರ ಹೇಳಿಕೆ ಪ್ರಕಾರ ಈಗಾಗಲೇ ದೇಶದಲ್ಲಿ 2.5 ಕೋಟಿ ಜನರಿಗೆ ಸೋಂಕು ಬಂದಿದೆ. ಈ ಪ್ರಮಾಣ ಮುಂದಿನ ದಿನಗಳಲ್ಲಿ 3.5 ಕೋಟಿಯವರೆಗೂ ತಲುಪಬಹುದು. ಹೀಗಾಗಿ ಜನತೆ ಹೆಚ್ಚು ನಿಗಾ ವಹಿಸಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.

ಇರಾನ್‌ನಲ್ಲಿ ಇದುವರೆಗೆ 2,70,000 ಜನರಲ್ಲಿ ಸೋಂಕು ಪತ್ತೆಯಾಗಿದೆ. 14000 ಜನರು ಬಲಿಯಾಗಿದ್ದಾರೆ.