Woman attacks McDonald's employee: ಮ್ಯಾಕ್‌ಡೋನಲ್ಡ್ಸಲ್ಲಿ ಆರ್ಡರ್ ತಡವಾಗಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಸಿಬ್ಬಂದಿಯ ಮೇಲೆ ಬಿಸಿ ಟೀ ಎರಚಿದ್ದಾಳೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶದ ನಂತರ ಪೊಲೀಸರು ಮಹಿಳೆ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.
ಆನ್‌ಲೈನ್ ಆರ್ಡರ್ ವಿಳಂಬ ಆಗಿದ್ದಕ್ಕೆ ಆಕ್ರೋಶ
ಮಹಿಳೆಯೊಬ್ಬಳು ತಾನು ಮಾಡಿದ ಆರ್ಡರ್‌ನ್ನು ತಡವಾಗಿ ನೀಡಿದರು ಎಂದು ಮ್ಯಾಕ್‌ಡೋನಲ್ಡ್ ಸಿಬ್ಬಂದಿ ಮೈ ಮೇಲೆ ದೊಡ್ಡ ಲೋಟದಲ್ಲಿದ್ದ ಬಿಸಿ ಟೀ ಎರಚಿದಂತಹ ಘಟನೆ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯ ಬಂಧನಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಮಹಿಳೆ ವಿರುದ್ಧ ನೋಟೀಸ್ ಜಾರಿ ಮಾಡಲಾಗಿದೆ. ಅಮೆರಿಕಾದ ಮಿಚಿಗನ್‌ನ ಮ್ಯಾಕ್ ಡೋನಾಲ್ಡ್ ಸ್ಟೋರ್‌ನಲ್ಲಿ ಈ ಘಟನೆ ನಡೆದಿದೆ.
ಮ್ಯಾಕ್‌ಡೋನಾಲ್ಡ್ ಕೆಲಸಗಾರನ ಮೇಲೆ ಬಿಸಿ ಟೀ ಎರಚಿದ ಮಹಿಳಾ ಗ್ರಾಹಕಿ
ನಾನು ಆನ್‌ಲೈನ್ ಆರ್ಡರ್‌ಗಾಗಿ ಒಂದು ಗಂಟೆಗೂ ಹೆಚ್ಚು ಕಾಲ ಕಾದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ಆ ಮಹಿಳೆ ಸ್ಟೋರ್ ಮ್ಯಾನೇಜರ್ ಜೊತೆ ವಾಗ್ವಾದ ನಡೆಸಿದ್ದು, ನಂತರ ಅಲ್ಲಿಂದ ಹೋಗುವುದಕ್ಕೂ ಮೊದಲು ಆ ಮಹಿಳೆ ಸ್ಟೋರ್ ಮ್ಯಾನೇಜರ್ ಮೇಲೆ ಬಿಸಿ ಚಹಾವನ್ನು ಎರಚಿದ್ದಾಳೆ. ಇದರಿಂದ ಸ್ಟೋರ್ ಮ್ಯಾನೇಜರ್ ಬೆನ್ನಿನ ಮೇಲೆಲ್ಲಾ ಟೀ ಚೆಲ್ಲಿದ್ದು, ಆಕೆ ಅಲ್ಲಿಂದ ಓಡುವುದನ್ನು ನೋಡಬಹುದು. ಈ ಆತಂಕಕಾರಿ ದೃಶ್ಯವನ್ನು ಈ ವಾರದ ಆರಂಭದಲ್ಲಿ ಬ್ಯೂನಾ ವಿಸ್ಟಾ ಪೊಲೀಸ್ ಇಲಾಖೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ವೀಡಿಯೋ ವೈರಲ್: ಬಂಧನಕ್ಕೆ ಮುಂದಾದ ಪೊಲೀಸರು
ಆರೋಪಿ ಮಹಿಳೆ ಮ್ಯಾಕ್‌ಡೊನಾಲ್ಡ್ ಉದ್ಯೋಗಿಗೆ ಸುಳ್ಳುಗಾರ ಎಂದು ಕೂಗಾಡಿದ್ದಾಳೆ. ಇದಕ್ಕೆ ಮ್ಯಾನೇಜರ್ ಪ್ರತಿಕ್ರಿಯಿಸಿ ನಿಮ್ಮ ಕಾಫಿ ಬಂದಿದೆ. ನಿಮಗೆ ಶುಲ್ಕ ವಿಧಿಸಲಾಗಿದೆ ಅಷ್ಟೇ. ಅದರ ಮರುಪಾವತಿಗೆ 48 ಗಂಟೆಗಳು ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಾರೆ. ಆದರೆ, ಮ್ಯಾನೇಜರ್ ತನ್ನ ಕೆಲಸದ ಸ್ಥಳಕ್ಕೆ ಹಿಂತಿರುಗಲು ತಿರುಗಿದಾಗ, ಆ ಮಹಿಳೆ, ನೀನು ಚಡಪಡಿಸುತ್ತಿದ್ದೀಯಾ. ಈ ಬಿಸಿ ಕಾಫಿ ತಗೋ ಎಂದು ಕೂಗುತ್ತಾ, ಸುಡುತ್ತಿದ್ದ ಪಾನೀಯವನ್ನು ಅವಳ ಬೆನ್ನಿನ ಮೇಲೆ ಎರಚಿದ್ದಾಳೆ.
ಹೀಗೆ ಬಿಸಿ ಟೀಯಿಂದ ಮ್ಯಾಕ್‌ಡೋನಾಲ್ಡ್ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದ ಮಹಿಳಾ ಗ್ರಾಹಕಿಯನ್ನು 48 ವರ್ಷದ ಕ್ಯಾಶರಾ ಬ್ರೌನ್ ಎಂದು ಗುರುತಿಸಲಾಗಿದೆ. ಅಲ್ಲಿನ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಈ ಆತಂಕಕಾರಿ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಕ್ಯಾಶರಾ ಬ್ರೌನ್ ಬಂಧನಕ್ಕೆ ವ್ಯಾಪಕ ಆಗ್ರಹ ಕೇಳಿ ಬಂದಿದೆ. ಈ ಹಿನ್ನೆಲೆ ಪೊಲೀಸರು ಆಕೆಗೆ ಬಂಧನ ವಾರಂಟ್ ಹೊರಡಿಸಿದ್ದಾರೆ.
ನಮಗೆ ಕ್ಯಾಶರಾ ಬ್ರೌನ್ ಬಂಧನಕ್ಕೆ ಸುಮಾರು 100 ಸಲಹೆಗಳು ಬಂದಿರಬೇಕು. ಸುಮಾರು ಎರಡು ನಿಮಿಷಗಳಲ್ಲಿ ನಾವು ಅವಳನ್ನು ಗುರುತಿಸಿದೆವು ಎಂದು ಬ್ಯೂನಾ ವಿಸ್ಟಾ ಪತ್ತೇದಾರಿ ರಸ್ ಪಹ್ಸೆನ್ ನ್ಯೂಯಾರ್ಕ್ ಪೋಸ್ಟ್‌ಗೆ ತಿಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಬ್ರೌನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅವಳು ತನ್ನ ಹೆಸರು, ಇಮೇಲ್ ಮತ್ತು ಫೋನ್ ಡೇಟಾವನ್ನು ಲಗತ್ತಿಸಲಾದ ಆನ್‌ಲೈನ್ ಆರ್ಡರ್ ಮಾಡಿ ಬಳಿಕ ಅದೇ ಸಂಸ್ಥೆಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಳು ಬುದ್ಧಿವಂತಳು ಎಂದು ಬ್ರೌನ್ ಹೆಡ್ಡತನಕ್ಕೆ ಕೆಲವರು ವ್ಯಂಗ್ಯ ಮಾಡಿದ್ದಾರೆ. ಅವಳು ಜೈಲು ಶಿಕ್ಷೆಗೆ ಅರ್ಹಳು. ಯಾವುದೇ ರೆಸ್ಟೋರೆಂಟ್‌ನ ಯಾವುದೇ ಉದ್ಯೋಗಿ ಇಂತಹ ಘಟನೆಗಳನ್ನು ಸಹಿಸಬಾರದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ವ್ಯಕ್ತಿಯೊಂದಿಗೆ ವ್ಯವಹರಿಸಲು ಯಾವುದೇ ಮೆಕ್‌ಡೊನಾಲ್ಡ್ಸ್ ಮ್ಯಾನೇಜರ್‌ಗೆ ಸಾಕಷ್ಟು ಸಂಪಾದನೆ ಇರುವುದಿಲ್ಲ ಎಂದು ನಾನು ಭರವಸೆ ನೀಡಬಲ್ಲೆ ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.
ಬಾರ್ಬೆಕ್ಯೂ ಸಾಸ್‌ನಿಂದ ಸುಟ್ಟ ಗಾಯ ಆಗಿದ್ದಕ್ಕೆ 24 ಕೋಟಿ ಪರಿಹಾರ ಪಡೆದ ಯುವತಿ
ಜನವರಿಯಲ್ಲಿ, ಟೆಕ್ಸಾಸ್‌ನ ರೆಸ್ಟೋರೆಂಟ್ ಒಂದರ ಮೇಲೆ ಹದಿಹರೆಯದ ಯುವತಿಯೊಬ್ಬಳು ಮೊಕದ್ದಮೆ ದಾಖಲಿಸಿದ ನಂತರ ನ್ಯಾಯಾಲಯವೂ ಆ ರೆಸ್ಟೋರೆಂಟ್‌ಗೆ ಮೊಕದ್ದಮೆ ಹೂಡಿದ ಹದಿಹರೆಯದ ಮಹಿಳೆಗೆ $2.8 ಮಿಲಿಯನ್ (ರೂ.24 ಕೋಟಿ) ಪಾವತಿಸುವಂತೆ ಆದೇಶಿಸಿತ್ತು. ಆ ರೆಸ್ಟೋರೆಂಟ್‌ನಲ್ಲಿ ನೀಡಿದ ಬಾರ್ಬೆಕ್ಯೂ ಸಾಸ್‌ನಿಂದ ಸುಟ್ಟ ಗಾಯ ಆದ ನಂತರ ಆ ಯುವತಿ ರೆಸ್ಟೋರೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಳು. ಆರು ಸದಸ್ಯರ ತೀರ್ಪುಗಾರರ ತಂಡವು ಕಳೆದ ವಾರ ಈ ತೀರ್ಪು ನೀಡಿತು. ಬಿಲ್ ಮಿಲ್ಲರ್ ಬಾರ್-ಬಿ-ಕ್ಯೂ ಎಂಟರ್‌ಪ್ರೈಸಸ್ ಮಹಿಳೆಯ ವೈದ್ಯಕೀಯ ವೆಚ್ಚಗಳಿಗಾಗಿ $25,000 (ರೂ.21 ಲಕ್ಷ) ಕ್ಕಿಂತ ಹೆಚ್ಚು ಮತ್ತು ಹಿಂದಿನ ಮತ್ತು ಭವಿಷ್ಯದ ಮಾನಸಿಕ ಯಾತನೆ, ದೈಹಿಕ ನೋವು ಮತ್ತು ದೌರ್ಬಲ್ಯಕ್ಕಾಗಿ $900,000 (ರೂ.7.7 ಕೋಟಿ) ಪಾವತಿಸಲು ಆದೇಶಿಸಿತು. ಉಳಿದ $1.9 ಮಿಲಿಯನ್ (ರೂ.16.4 ಕೋಟಿ) ಅನ್ನು ದಂಡದ ಪರಿಹಾರವಾಗಿ ಯುವತಿಗೆ ನೀಡಲಾಯಿತು.
ಇದನ್ನೂ ಓದಿ: ಅವಲಕ್ಕಿ ನೀಡಿದಂತೆ ನ್ಯೂಸ್ ಪೇಪರ್‌ನಲ್ಲಿ ಬಿಸಿಯೂಟ ನೀಡಿದ ಶಾಲೆ: ವೀಡಿಯೋ ವೈರಲ್
ಇದನ್ನೂ ಓದಿ: ಒತ್ತಾಯ ಮಾಡಿ ಶಾಲೆಗೆ ಕಳುಹಿಸಿದ ಪೋಷಕರಿಗೆ ಉಸಿರಿರುವವರೆಗೂ ಕೊರಗುವಂತೆ ಮಾಡಿದ ಮಗಳು
