ಹಮಾಸ್ ಉಗ್ರರ ಹಿರಿಯ ರಾಜಕೀಯ ನಾಯಕ ಒಸಾಮಾನನ್ನು ಹೊಡೆದುರುಳಿಸಿದ ಇಸ್ರೇಲ್ ಸೇನೆ
ಹಮಾಸ್‌ನ ಹಿರಿಯ ನಾಯಕ, ರಾಜಕೀಯ ಬ್ಯೂರೋದ ಸದಸ್ಯ ಡಾ. ಒಸಾಮಾ ಅಲ್-ಮಝಿನಿ ಕೊಂದಿರುವುದಾಗಿ ಇಸ್ರೇಲಿ ಸೇನೆ ಹೇಳಿದೆ.

ಹಮಾಸ್‌ನ ಹಿರಿಯ ನಾಯಕ, ರಾಜಕೀಯ ಬ್ಯೂರೋದ ಸದಸ್ಯ ಡಾ. ಒಸಾಮಾ ಅಲ್-ಮಝಿನಿ ಕೊಂದಿರುವುದಾಗಿ ಇಸ್ರೇಲಿ ಸೇನೆ ಹೇಳಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಇಸ್ರೇಲ್ ವಿರುದ್ಧದ ದಾಳಿಗಳಿಗೆ ಈತ ಕೂಡ ಪ್ರಮುಖ ರೂವಾರಿ ಎನ್ನಲಾಗಿದೆ. ಈತ ಕೌನ್ಸಿಲ್ ಆಫ್ ಹಮಾಸ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಕೂಡ ಆಗಿದ್ದಾನೆ.
ಈ ಬಗ್ಗೆ ಇಸ್ರೇಲ್ ನ ಮೊಸಾದ್ ಕೂಡ ಟ್ವೀಟ್ ಮಾಡಿ ಕೊಲ್ಲಲ್ಪಟ್ಟಿದ್ದಾನೆ ಎಂದು ಸ್ಪಷ್ಟಪಡಿಸಿದೆ. ಹಮಾಸ್ ಕೈದಿಗಳಿಗೆ ಇಸ್ರೇಲ್ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ತರಬೇತಿ ನೀಡುತ್ತಿದ್ದನು. ಈತ ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರದಲ್ಲಿ ಸಚಿವನಾಗಿ ಸೇವೆ ಸಲ್ಲಿಸುತ್ತಿದ್ದನು.
ಇಸ್ರೇಲ್ ರಾಜತಾಂತ್ರಿಕನ ವಜಾ: ಗಾಜಾಪಟ್ಟಿ ಕ್ಲೀನ್ ಸ್ವಿಪ್ ಮಾಡುವ ಇಸ್ರೇಲ್ ಯತ್ನಕ್ಕೆ ಅಮೆರಿಕಾದಿಂದಲೂ ಅಸಮಾಧಾನ
ಇದಕ್ಕೂ ಮುನ್ನ ಸೋಮವಾರ, ಐಡಿಎಫ್ ಹಮಾಸ್ ಸಾಮಾನ್ಯ ಗುಪ್ತಚರ ಸೇವೆಯ ಮುಖ್ಯಸ್ಥನನ್ನು ಕೊಂದ ವೈಮಾನಿಕ ದಾಳಿಯ ತುಣುಕನ್ನು ಬಿಡುಗಡೆ ಮಾಡಿತ್ತು. ಸೋಮವಾರ ನಡೆದ ಐಡಿಎಫ್ ದಾಳಿಯಲ್ಲಿ ಹತ್ತಾರು ಮಿಲಿಟರಿ ಕಮಾಂಡ್ ಸೆಂಟರ್‌ಗಳು ಮತ್ತು ಮಾರ್ಟರ್ ಶೆಲ್ ಪೋಸ್ಟ್‌ಗಳು ನಾಶವಾದವು. ಇದಲ್ಲದೆ, ಹಲವಾರು ದಿನಗಳ ಹಿಂದೆ ಕೊಲ್ಲಲ್ಪಟ್ಟ ಹಮಾಸ್ ನ “ನುಖ್ಬಾ” ಕಮಾಂಡೋ ಪಡೆಗಳ ಕಮಾಂಡರ್‌ಗಳಲ್ಲಿ ಒಬ್ಬರಾದ ಅಲಿ ಖಾದಿಯ ಕಾರ್ಯಾಚರಣೆಯ ಕಮಾಂಡ್ ಸೆಂಟರ್ ಅನ್ನು ಹೊಡೆದುರುಳಿಸಲಾಗಿದೆ.
ಮಣಿಪುರಕ್ಕಿಂತ ಇಸ್ರೇಲ್ ಮೇಲೆ ಮೋದಿಗೆ ಕಾಳಜಿ ರಾಹುಲ್ ವಾಗ್ದಾಳಿ, ಬೆತ್ತಲೆ ಮೆರವಣಿಗೆ 7 ಜನರ ವಿರುದ್ಧ ಕೇಸ್
ಇದಲ್ಲದೆ, ಐಡಿಎಫ್ ಫೈಟರ್ ಜೆಟ್‌ಗಳು ಹಮಾಸ್ ಭಯೋತ್ಪಾದಕ ಸಂಘಟನೆಗೆ ಸೇರಿದ ಮಿಲಿಟರಿ ಆವರಣದೊಳಗೆ ಹಲವಾರು ಹಮಾಸ್ ಭಯೋತ್ಪಾದಕರನ್ನು ಕೊಂದಿವೆ.
ಇನ್ನು ಕಳೆದ ಶನಿವಾರ ಇಬ್ಬರು ಹಮಾಸ್ ಮುಖಂಡರನ್ನು (Hamas terrorists) ಇಸ್ರೇಲ್ ಹತ್ಯೆ ಮಾಡಿತ್ತು. ಇದರ ನಡುವೆಯೇ ಭಾನುವಾರ ಹಮಾಸ್ ಭಯೋತ್ಪಾದಕರ ತಂಡವನ್ನು ಮುನ್ನಡೆಸಿದ್ದ ಕಮಾಂಡರ್ ಬಿಲ್ಲಾಲ್ ಅಲ್-ಖೈದ್ರಾ ನನ್ನು ಕೊಂದಿತ್ತು. ಇಸ್ರೇಲ್ ನಗರವಾದ ಕಿಬ್ಬುಟ್ ನಿರಿಮ್ (Kibbutz Nirim) ಮೇಲಿನ ದಾಳಿಯಲ್ಲಿ ಪ್ರಮುಖನಾಗಿದ್ದ ಎಂದು ಇಸ್ರೇಲ್ ಹೇಳಿದೆ.
ನಮ್ಮ ಸಹನೆ ಪರೀಕ್ಷಿಸಬೇಡಿ: ನೆತನ್ಯಾಹು ಗುಡುಗು
ಉತ್ತರ ಗಾಜಾ ಪ್ರದೇಶದಲ್ಲಿ ತಾವು ನೀಡಿರುವ ಸೂಚನೆಯಂತೆ ನಾಗರಿಕರನ್ನು ಸ್ಥಳಾಂತರಿಸಲು ಅಡ್ಡಿ ಮಾಡುತ್ತಿರುವ ಹಮಾಸ್ ಬಂಡುಕೋರರಿಗೆ ಸಹಾಯ ಮಾಡುತ್ತಿರುವ ಹಿಜ್ಬುಲ್ಲಾ ಸಂಘಟನೆ ಹಾಗೂ ಇರಾನ್‌ಗೆ ಬೆಂಜಮಿನ್ ನೆತನ್ಯಾಹು ತಮ್ಮ ಸಹನೆ ಪರೀಕ್ಷಿಸಬೇಡಿ ಎಂದು ಎಚ್ಚರಿಸಿದ್ದಾರೆ.
ಇಸ್ರೇಲ್ ಸಂಸತ್ತು (ನೆಸೆಟ್) ಉದ್ದೇಶಿಸಿ ಮಾತನಾಡಿದ ಅವರು, ‘ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರನ್ನು ಸದೆಬಡಿಯಲು ಸಮಸ್ತ ವಿಶ್ವ ಸಮುದಾಯ ಒಂದುಗೂಡಬೇಕು. ಇದು ನಿಮ್ಮದೇ ಯುದ್ಧ. ಗಾಜಾ ಪಟ್ಟಿಯಲ್ಲಿರುವ ಅಮಾಯಕ ನಾಗರಿಕರ ಸ್ಥಳಾಂತರ ವಿಚಾರದಲ್ಲಿ ತಮ್ಮ ಸಹನೆಯನ್ನು ಪರೀಕ್ಷಿಸಿದರೆ ಹಿಜ್ಬುಲ್ಲಾ ಹಾಗೂ ಇರಾನ್‌ಗೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧರಿದ್ದೇವೆ’ ಎನ್ನುವ ಮೂಲಕ ಬೆಂಜಮಿನ್ ಹಮಾಸ್ ಬೆಂಬಲಿಗರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.