ಕಳೆದ ಮೇ ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರಕ್ಕಿಂತ ಇಸ್ರೇಲ್‌ ಯುದ್ಧದ ಕುರಿತೇ ಪ್ರಧಾನಿ ಮೋದಿ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹರಿಹಾಯ್ದಿದ್ದಾರೆ. ಇನ್ನೊಂದೆಡೆ ಮಣಿಪುರ ಸ್ತ್ರೀಯರ ಬೆತ್ತಲೆ ಮೆರವಣಿಗೆ ಅಪ್ರಾಪ್ತ ಸೇರಿ 7 ಜನರ ವಿರುದ್ಧ ಚಾರ್ಜ್‌ಶೀಟ್‌ ದಾಖಲಿಸಲಾಗಿದೆ

ಐಜ್ವಾಲ್‌ (ಅ.17): ಕಳೆದ ಮೇ ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರಕ್ಕಿಂತ ಇಸ್ರೇಲ್‌ ಯುದ್ಧದ ಕುರಿತೇ ಪ್ರಧಾನಿ ಮೋದಿ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹರಿಹಾಯ್ದಿದ್ದಾರೆ. ಮಿಜೋರಾಂನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿ ಮಾತನಾಡಿದ ರಾಹುಲ್‌ ‘ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರು ಇಸ್ರೇಲ್‌ನಲ್ಲಿ ಏನು ನಡೆಯುತ್ತಿದೆಯೋ ಅದರ (ಹಮಾಸ್‌- ಇಸ್ರೇಲ್‌ ಯುದ್ಧ) ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ ಮತ್ತು ಮಕ್ಕಳು, ಹಲವಾರು ಜನರು ಕೊಲ್ಲಲ್ಪಟ್ಟ ಹಾಗೂ ಮಹಿಳೆಯರು ಕಿರುಕ್ಕೊಳಗಾದ ಮಣಿಪುರದ ಬಗ್ಗೆ ಆಸಕ್ತಿ ಹೊಂದಿಲ್ಲ ಎಂಬುದು ನನಗೆ ಆಶ್ಚರ್ಯ ತಂದಿದೆ’ ಎಂದಿದ್ದಾರೆ.

ಹಿಟ್ಲರ್‌ಗೆ ಉಗ್ರರ ಹೋಲಿಸಿ ಇಸ್ರೇಲ್ ಕಿಚ್ಚು; ಹಮಾಸ್ ಭಯೋತ್ಪಾದಕರ ಸರ್ವನಾಶಕ್ಕೆ ಸಜ್ಜಾಗಿ ನಿಂತ 5ಲಕ್ಷ ಸೈನಿಕರು! 

ಮಣಿಪುರ ಸ್ತ್ರೀಯರ ಬೆತ್ತಲೆ ಮೆರವಣಿಗೆ: ಅಪ್ರಾಪ್ತ ಸೇರಿ 7 ಜನರ ವಿರುದ್ಧ ಚಾರ್ಜ್‌ಶೀಟ್‌: ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ನಡೆದ ಘರ್ಷಣೆಯಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಒಬ್ಬ ಬಾಲಾರೋಪಿ ಸೇರಿ 7 ಮಂದಿಯ ಮೇಲೆ ಆರೋಪಪಟ್ಟಿ ದಾಖಲಿಸಿದೆ.

ಇಸ್ರೇಲ್ ಪ್ಯಾಲೇಸ್ತೇನ್ ಯುದ್ಧ: ಹಮಾಸ್ ಉಗ್ರರಿಗೆ ಚೀನಾದಿಂದ ಶಸ್ತ್ರಾಸ್ತ್ರ ಪೂರೈಕೆ?

ಮೇ 4ರಂದು ಶಸ್ತ್ರಸಜ್ಜಿತರಾಗಿ ಬಂದ ಯುವಕರ ಪಡೆಯೊಂದು ಮಣಿಪುರದ ಹಳ್ಳಿಯೊಂದಕ್ಕೆ ನುಗ್ಗಿ ಬುಡಕಟ್ಟು ಸಮುದಾಯಕ್ಕೆ ಸೇರಿದ್ದ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿತ್ತು. ಇವರ ಮೇಲೆ ಭಾರತೀಯ ದಂಡ ಸಂಹಿತೆಯ ಸಾಮೂಹಿಕ ಅತ್ಯಾಚಾರ, ಕೊಲೆ, ಮಹಿಳೆಯ ಘನತೆಗೆ ಕುತ್ತು ತರುವಿಕೆ ಹಾಗೂ ಕ್ರಿಮಿನಲ್‌ ಅಪರಾಧಕ್ಕೆ ಸಂಚು ರೂಪಿಸಿದ ಆರೋಪಗಳ ಮೇಲೆ ಗುವಾಹಟಿಯ ವಿಶೇಷ ಸಿಬಿಐ ನ್ಯಾಯಾಲಯ ಚಾರ್ಜ್‌ಶೀಟ್‌ ಹಾಕಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಸಿಬಿಐ ತಿಳಿಸಿದೆ.