5 ಸ್ಟಾರ್ ಹೋಟೆಲ್ ರೀತಿಯ ಮನೆ, 25ಕ್ಕೂ ಅಧಿಕ ವಾಹನ, ಪ್ರೈವೇಟ್ ಜೆಟ್ - ಹತನಾದ ಹಮಾಸ್ ನಾಯಕನ ಆಸ್ತಿ ಎಷ್ಟು?
ಫೈವ್ ಸ್ಟಾರ್ ಹೋಟೆಲ್ ಮಾದರಿಯ ಅದ್ಧೂರಿ ಬಂಗಲೆ, 25ಕ್ಕೂ ಅಧಿಕ ವಿಲಾಸಿ ವಾಹನಗಳು ಹಾಗೂ ಪ್ರೈವೇಟ್ ಜೆಟ್ ಸಹ ಇತ್ತು. ಇಸ್ಮಾಯಿಲ್ ಹಾನಿಯಾ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಅದ್ಧೂರಿಯಾಗಿ ಜೀವನ ನಡೆಸುತ್ತಿದ್ದನು.
ನವದೆಹಲಿ: ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯಾನನ್ನು ಹತ್ಯೆ ಮಾಡಲಾಗಿದೆ. ಇರಾನ್ ದೇಶದ ರಿವ್ಯೂಲಶನರಿ ಸಿಬ್ಬಂದಿ ಪ್ರಕಾರ, ರಾಷ್ಟ್ರಪತಿ ಮಸೂದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಸ್ಮಾಯಿಲ್ ಹಾನಿಯಾ ಆಗಮಿಸಿದ್ದರು. ಇರಾನ್ ಟೆಹ್ರಾನ್‌ನಲ್ಲಿರುವ ನಿವಾಸದ ಮೇಲೆ ಇಸ್ರೇಲ್ ದಾಳಿ ನಡೆಸಿ ಹಾನಿಯಾರನ್ನು ಕೊಲ್ಲಲಾಗಿದೆ ಎಂದು ಹಮಾಸ್ ಹೇಳಿಕೆ ಬಿಡುಗಡೆ ಮಾಡಿದೆ. ಆದ್ರೆ ಈವರೆಗೂ ಇಸ್ರೇಲ್‌ನಿಂದ ಯಾವುದೇ ಅಧಿಕೃತ ಹೇಳಿಕೆ ಪ್ರಕಟನೆಯಾಗಿಲ್ಲ. ಕೊಲೆಯಾಗಿರುವ ಹಮಾಸ್ ನಾಯಕ ಇಸ್ಮಾಯಿಲ್ ಹಾನಿಯಾ, ವಿಲಾಸಿ ಜೀವನ ನಡೆಸುತ್ತಿದ್ದನು. ಫೈವ್ ಸ್ಟಾರ್ ಹೋಟೆಲ್ ಮಾದರಿಯ ಅದ್ಧೂರಿ ಬಂಗಲೆ, 25ಕ್ಕೂ ಅಧಿಕ ವಿಲಾಸಿ ವಾಹನಗಳು ಹಾಗೂ ಪ್ರೈವೇಟ್ ಜೆಟ್ ಸಹ ಇತ್ತು. ಇಸ್ಮಾಯಿಲ್ ಹಾನಿಯಾ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಅದ್ಧೂರಿಯಾಗಿ ಜೀವನ ನಡೆಸುತ್ತಿದ್ದನು.
2017ರಲ್ಲಿ ಇಸ್ಮಾಯಿಲ್ ಹಾನಿಯಾ ಗಾಜಾ ಪಟ್ಟಿಗೆ ಬರದಂತೆ ಈಜಿಪ್ತ ನಿಷೇಧ ವಿಧಿಸಿತ್ತು. ಅಂದಿನಿಂದ ಇಸ್ಮಾಯಿಲ್ ಹಾನಿಯಾ ಟರ್ಕಿ ಮತ್ತು ಕತಾರಾ ರಾಜಧಾನಿ ದೋಹಾದಲ್ಲಿ ವಾಸವಾಗಿದ್ದನು. ವರದಿಗಳ ಪ್ರಕಾರ, ಇಸ್ಮಾಯಿಲ್ ಒಟ್ಟು ಆಸ್ತಿ 16,000 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ದೋಹಾದಲ್ಲಿ ಅದ್ಧೂರಿಯಾದ ಪೆಂಟ್ ಹೌಸ್ ಹೊಂದಿರುವ ಇಸ್ಮಾಯಿಲ್ ರಾಜನಂತೆ ಜೀವನ ನಡೆಸುತ್ತಿದ್ದನು. ಈ ಪೆಂಟ್‌ಹೌಸ್‌ನಲ್ಲಿ ಫೈವ್ ಸ್ಟಾರ್ ಹೋಟೆಲ್ ರೀತಿಯ ಎಲ್ಲಾ ಸೌಕರ್ಯಗಳಿದ್ದವು. 25ಕ್ಕೂ ಅಧಿಕ ಲಕ್ಷುರಿ ವಾಹನಗಳನ್ನು ಹೊಂದಿದ್ದ ಇಸ್ಮಾಯಿಲ್, ದೂರ ಪ್ರಯಾಣಕ್ಕಾಗಿ ಪ್ರೈವೇಟ್ ಜೆಟ್ ಸಹ ಹೊಂದಿದ್ದನು.
ಇಸ್ಮಾಯಿಲ್ ಹಾನಿಯಾ ಗಾಜಾಪಟ್ಟಿಯಿಂದ ದೂರವಿದ್ದರೂ, ಅದರ ಅರ್ಥವ್ಯವಸ್ಥೆ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದನು. ಗಾಜಾದಿಂದ ಈಜಿಪ್ತಗಿದ್ದ ಸುರಂಗ ಮಾರ್ಗದ ಮೂಲಕ ಅತ್ಯಧಿಕ ಹಣ ಸಂಪಾದನೆ ಮಾಡುತ್ತಿದ್ದನು. ಇದೇ ಸುರಂಗ ಮಾರ್ಗ ಬಳಸಿಯೇ ಈಜಿಪ್ತ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಈ ಸುರಂಗ ಮಾರ್ಗ ಬಳಕೆಗೆ ಇಸ್ಮಾಯಿಲ್ ಹಾನಿಯಾ ದೊಡ್ಡ ಮೊತ್ತದ ತೆರಿಗೆಯನ್ನು ವಿಧಿಸುತ್ತಿದ್ದನು.
ನೇಪಾಳದ ವಿಮಾನ ಪತನಕ್ಕೆ ಕಾರಣವಾಯ್ತಾ ಟೇಬಲ್‌ಟಾಪ್ ರನ್‌ವೇ; ಭಾರತದಲ್ಲಿಯೂ ಇವೆ ಇಂತಹ ಏರ್‌ಪೋರ್ಟ್‌ಗಳು!
2014ರಲ್ಲಿ ಪ್ರಕಟವಾದ ಇಸ್ರೇಲ್ ವರದಿ ಪ್ರಕಾರ, ಸುರಂಗ ಮೂಲಕ ನಡೆಸುವ ವ್ಯಾಪಾರದ ಮೇಲೆ ಇಸ್ಮಾಯಿಲ್ ಹಾನಿಯಾ ಮತ್ತು ಹಮಾಸ್ ನಾಯಕರು ಶೇ.20ರವರೆಗೆ ತೆರಿಗೆ ವಿಧಿಸುತ್ತಿದ್ದರು. ಈ ಸುರಂಗ ವ್ಯಾಪಾರದ ಮೂಲಕವೇ ಹಮಾಸ್‌ನ 1,700 ನಾಯಕರು ಮತ್ತು ಅಧಿಕಾರಿಗಳು ಕೋಟ್ಯಧಿಪತಿಗಳಾಗಿದ್ದಾರೆ ಎಂದು ವರದಿಯಾಗಿದೆ.
ಕೆಲ ವರದಿಗಳ ಪ್ರಕಾರ, ಇರಾನ್ ಮತ್ತು ಕತಾರ್ ಸೇರಿದಂತೆ ಕೆಲ ದೇಶಗಳಿಂದಲೇ ಹಮಾಸ್‌ಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಹಾಯ ಸಿಗುತ್ತಿತ್ತು. ಕಳೆದ ವರ್ಷ ಪ್ರಕಟವಾದ ಅಮೆರಿಕ ವಿದೇಶ ವಿಭಾಗ ಹೇಳಿಕೆ ಪ್ರಕಾರ, ಪ್ರತಿವರ್ಷ ಇರಾನ್, 100 ಮಿಲಿಯನ್ ಡಾಲರ್ ಅಂದ್ರೆ 837 ಕೋಟಿ ರೂಪಾಯಿ ಸಹಾಯವನ್ನು ಹಮಾಸ್ ಮತ್ತು ಪ್ಯಾಲೆಸ್ಟೈನ್ ಗಳಿಗೆ ಮಾಡುತ್ತದೆ. ಇಷ್ಟು ಮಾತ್ರವಲ್ಲದೇ ಹಲವು ಕಂಪನಿಗಳಿಂದಲೂ ಹಮಾಸ್‌ಗೆ ಆರ್ಥಿಕ ನೆರವು ಸಿಗುತ್ತಿತ್ತು. ಟರ್ಕಿ, ಸೌದಿ ಅರೇಬಿಯಾ ದೇಶಗಳ ಕಂಪನಿಗಳಿಂದ 500 ಮಿಲಿಯನ್ ಡಾಲರ್ ಆರ್ಥಿಕ ನೆರವು ಸಿಕ್ಕಿದೆ.
Israel–Hamas war: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಇರಾನ್‌ನಲ್ಲಿ ಹತ್ಯೆ