Asianet Suvarna News Asianet Suvarna News

ಕೊರಿಯಾದಲ್ಲಿ ಹ್ಯಾಲೊವಿನ್‌ ಆಚರಣೆ ವೇಳೆ ಭೀಕರ ನೂಕುನುಗ್ಗಲು: 150 ಬಲಿ

ಹ್ಯಾಲೊವಿನ್‌ ಹಬ್ಬದಾಚರಣೆಯ ವೇಳೆಗೆ ಕಿರಿದಾದ ಬೀದಿಗಳಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ನಡೆದ ತಳ್ಳಾಟದಿಂದಾಗಿ 150 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಶನಿವಾರ ನಡೆದಿದೆ. 100ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.

Halloween tragedy in seoul, Stampede killed 150 people in south korea akb
Author
First Published Oct 30, 2022, 6:55 AM IST

ಸಿಯೋಲ್‌: ಹ್ಯಾಲೊವಿನ್‌ ಹಬ್ಬದಾಚರಣೆಯ ವೇಳೆಗೆ ಕಿರಿದಾದ ಬೀದಿಗಳಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ನಡೆದ ತಳ್ಳಾಟದಿಂದಾಗಿ 150 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಶನಿವಾರ ನಡೆದಿದೆ. 100ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.

ಹ್ಯಾಲೋವಿನ್‌ (Halloween) ಪಾರ್ಟಿ ಸ್ಥಳ ಕಿರಿದಾಗಿದ್ದು, ವೇಳೆ ಹಚ್ಚು ಜನಸಂದಣಿ ಸೇರಿತ್ತು. ಈ ವೇಳೆ ಮುನ್ನುಗ್ಗಲು ಒಬ್ಬರ ಮೇಲೊಬ್ಬರು ಮುಗಿಬಿದ್ದಾಗ ಭೀಕರ ನೂಕು ನುಗ್ಗಾಟ ಉಂಟಾಯಿತು. ಈ ವೇಳೆ ಅನೇಕರು ಉಸಿರುಗಟ್ಟಿ ಹೃದಯ ಸ್ತಂಭನದಿಂದ (Heart attack) ಮೃತಪಟ್ಟರು. 74 ಜನರ ಶವಗಳನ್ನು ಆಸ್ಪತ್ರೆಗೆ ಕಳಿಸಲಾಗಿದೆ. ಇನ್ನೂ 46 ಮಂದಿಯ ಶವ ಶನಿವಾರ ಮಧ್ಯರಾತ್ರಿಯಾದರೂ ರಸ್ತೆಯಲ್ಲೇ ಬಿದ್ದಿದ್ದವು. ಭೀಕರ ತಳ್ಳಾಟ, ಹೃದಯಸ್ತಂಭನಕ್ಕೆ ಒಳಗಾದವರ ಎದೆ ಒತ್ತಿ ಬದುಕಿಸುವ ಯತ್ನದ ದೃಶ್ಯಗಳು ಮನಕಲಕುವಂತಿದ್ದವು.

Indonesia ಫುಟ್ಬಾಲ್‌ ಪಂದ್ಯದ ವೇಳೆ ಕಾಲ್ತುಳಿತ: 174 ಜನರು ಬಲಿ

ಈ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಯುನ್‌ ಸುಕ್‌ ಯಿಯೋಲ್‌ (Yoon Suk Yeol) ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿಸಿ, ಹಬ್ಬದಾಚರಣೆ ಸ್ಥಳಗಳಲ್ಲಿ ಸುರಕ್ಷತಾ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಖತು ಶ್ಯಾಮಜಿ ದೇವಸ್ಥಾನದಲ್ಲಿ ಕಾಲ್ತುಳಿತ, ಮೂವರು ಭಕ್ತರ ಸಾವು ಹಲವರು ಗಾಯ!

Follow Us:
Download App:
  • android
  • ios