Prophet Row: ನೂಪುರ್ ಶರ್ಮಾ ಹೇಳಿಕೆ ವಿರೋಧಿಸಿ ಭಾರತದ ಮೇಲೆ ಸೈಬರ್ ದಾಳಿಗೆ ಮುಂದಾದ ಹ್ಯಾಕರ್ಸ್ ಗ್ರೂಪ್
Nupur Sharma Prophet Row: ನೂಪುರ್ ಶರ್ಮಾ ಹೇಳಿಕೆಯನ್ನು ವಿರೋಧಿಸಿ ಭಾರತದ ಮೇಲೆ ಸೈಬರ್ ದಾಳಿ ಮಾಡಲು ಮುಸ್ಲಿಂ ಹ್ಯಾಕರ್ಸ್ ಗ್ರೂಪ್ ನಿರ್ಧರಿಸಿದೆ. ಈಗಾಗಲೇ ಹಲವು ಸರ್ಕಾರಿ ವೆಬ್‌ಸೈಟ್‌ಗಳನ್ನು ಡ್ರ್ಯಾಗನ್ ಫೋರ್ಸ್ ಗ್ರೂಪ್ ಹ್ಯಾಕ್ ಮಾಡಿದ್ದು, ದಾಳಿ ಮುಂದುವರೆಸುವಂತೆ ತಿಳಿಸಿದೆ.
ನವದೆಹಲಿ: ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್‌ರ (Nupur Sharma Prophet remark) ವಿರುದ್ಧ ನೀಡಿದ್ದ ಹೇಳಿಕೆ ಸಂಬಂಧ ವಾದ ಪ್ರತಿವಾದಗಳು, ಪ್ರತಿಭಟನೆಗಳು ಮುಂದುವರೆದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹತ್ತಕ್ಕೂ ಹೆಚ್ಚು ಮುಸ್ಲಿಂ ದೇಶಗಳು ನುಪುರ್ ಹೇಳಿಕೆಯನ್ನು ಖಂಡಿಸಿದೆ. ಈ ನಡುವೆ ಅಂತಾರಾಷ್ಟ್ರೀಯ ಹ್ಯಾಕರ್‌ಗಳು ಭಾರತದ ವಿರುದ್ಧ ಸೈಬರ್ ದಾಳಿ ನಡೆಸಲು ಕರೆಕೊಟ್ಟಿದ್ದಾರೆ (Cyber attack against India). ಸಾಮಾಜಿಕ ಜಾಲತಾಣಗಳಲ್ಲಿ ಅನಾಮಧೇಯ ಹ್ಯಾಕರ್‌ಗಳ ತಂಡ ಈ ಬಗ್ಗೆ ಪೋಸ್ಟ್ ಮಾಡಿದ್ದು, "ಪ್ರಪಂಚಾದ್ಯಂತ ಇರುವ ಮುಸಲ್ಮಾನ ಹ್ಯಾಕರ್‌ಗಳಲ್ಲಿ, ಮಾನವ ಹಕ್ಕು ಸಂಘಟನೆಗಳಲ್ಲಿ ಮತ್ತು ಸಾಮಾಜಿಕ ಕಾರ್ಯಕರ್ತರಲ್ಲಿ ತುತ್ತು ಮನವಿ ಮಾಡುತ್ತಿದ್ದೇವೆ. ಎಲ್ಲರೂ ಒಗ್ಗೂಡಿ ಭಾರತದಲ್ಲಿ ನಡೆಯುತ್ತಿರುವ ಉಗ್ರಗಾಮಿ ಚಟುವಟಿಗೆ, ಯುದ್ಧಾಪರಾಧಗಳನ್ನು ಬಯಲಿಗೆಳೆಯೋಣ. ಭಾರತದ ಮೇಲೆ ಸರಣಿ ಸೈಬರ್ ದಾಳಿ ಮಾಡೋಣ," ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಡ್ರಾಗನ್ ಫೋರ್ಸ್ (Dragon Force IO) ಎಂಬ ಮಲೇಷಿಯಾ ಮೂಲದ ಹ್ಯಾಕರ್‌ಗಳ ತಂಡ ಈ ಪೋಸ್ಟ್ ಮಾಡಿದ್ದು, ಸರಣಿ ಸೈಬರ್ ದಾಳಿಗೆ ಕರೆ ಕೊಟ್ಟಿದೆ. ನುಪುರ್ ಶರ್ಮಾ ಪ್ರವಾದಿಗಳ ಬಗ್ಗೆ ಗ್ಯಾನವ್ಯಾಪಿ ಮಸೀದಿ ಸಮೀಕ್ಷೆ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದಾಗ, ಮಾಧ್ಯಮವೊಂದರಲ್ಲಿ ಅವಹೇಳನಾಕಾರಿ ಹೇಳಿಕೆ ಕೊಟ್ಟಿದ್ದರು. ಅದಾದ ನಂತರ ಟ್ವಿಟ್ಟರ್‌ನಲ್ಲಿ ಕ್ಷಮೆಯಾಚಿಸಿದ್ದರು. ಆದರೆ ಪ್ರಪಂಚಾದ್ಯಂತದ ಮುಸ್ಲಿಂ ದೇಶಗಳು ನುಪುರ್ ಶರ್ಮಾ ಹೇಳಿಕೆಯನ್ನು ಖಂಡಿಸಿದ್ದವು. ದೇಶಾದ್ಯಂತ ಪ್ರತಿಭಟನೆ, ಲಾಠಿ ಚಾರ್ಜ್ ಎಲ್ಲವೂ ನಡೆಯಿತು. ಅದಾದ ನಂತರ ಕೆಲವು ಮಂದಿ ನುಪುರ್ ಶರ್ಮಾ ಪರ ವಾದ ಮಾಡಿದರು.
ಇದನ್ನೂ ಓದಿ: ನೂಪುರ್ ಮೇಲೆ ಕ್ರಮ ಕೈಗೊಂಡಿದ್ದು ಸರಿ, ಈಗ ಆಕೆಯ ಭದ್ರತೆಯ ಬಗ್ಗೆ ಗಮನ ನೀಡಿ : ಉಮಾಭಾರತಿ
ಹ್ಯಾಕಿಂಗ್ ಗ್ರೂಪ್ ಈಗ ಭಾರತದ ವಿರುದ್ಧ ಸೈಬರ್ ದಾಳಿಗೆ ಕರೆಕೊಟ್ಟಿದ್ದು, ಇದಕ್ಕೆ OpsPatuk ಎಂದು ಕರೆಯಲಾಗಿದೆ. ಅಂದರೆ ಭಾರತ ಸರ್ಕಾರಕ್ಕೆ ವಾಪಸ್ ಕೊಡುವ ಸಮಯ ಎಂದರ್ಥ.
ಧರ್ಮಾಧಾರಿತ ಮತ್ತು ರಾಜಕೀಯ ಪ್ರೇರಿತ ಸೈಬರ್ ದಾಳಿಗಳಲ್ಲಿ ಒಂದು ದೇಶದ ಮಿಲಿಟರಿ ಸೀಕ್ರೆಟ್, ಜನರ ವೈಯಕ್ತಿಕ ಮಾಹಿತಿ, ಸರ್ಕಾರದ ಖಾಸಗಿ ವಿಚಾರಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ವೇಳೆ ಈ ರೀತಿಯ ಸೂಕ್ಷ್ಮ ಮಾಹಿತಿ ಕೆಟ್ಟ ಜನರ ಕೈ ತಲುಪಿದರೆ ದೇಶದ ಭದ್ರತೆಗೆ ಅಪಾಯಕಾರಿ. ದೇಶದ ಭದ್ರತೆ ಮೇಲೆ ಮತ್ತು ನಾಗರಿಕರ ಖಾಸಗಿತನದ ಮೇಲೆ ದಾಳಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಇದನ್ನೂ ಓದಿ: ನೂಪುರ್ ಶರ್ಮಾ ಪ್ರತಿಕೃತಿ ನಡುರಸ್ತೆಯಲ್ಲೇ ನೇತು ಹಾಕಿದ ಕಿಡಿಗೇಡಿಗಳು: ಹಿಂದೂಪರ ಸಂಘಟನೆಗಳ ಆಕ್ರೋಶ
ಸೈಬರ್ ತಜ್ಞರ ಪ್ರಕಾರ ಈ ರೀತಿಯ ಸೈಬರ್ ದಾಳಿಗಳು ಭಾರತದ ಮೇಲೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆ ಸರ್ಕಾರ ಸೈಬರ್ ಸೆಕ್ಯುರಿಟಿಯನ್ನು ಹೆಚ್ಚಿಸಬೇಕು ಮತ್ತು ಆದಷ್ಟು ಎಚ್ಚರದಿಂದಿರಬೇಕು. ಬೆಂಗಳೂರು ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ CouldSEK) ಜೂನ್ 10ರಂದಯ ಭಾರತದ ಮೇಲೆ ಸರಣಿ ದಾಳಿಗೆ ಸಿದ್ಧರಾಗಿರುವ ಮಲೇಷಿಯಾ ಮೂಲದ ಹ್ಯಾಕರ್ ಗ್ರೂಪ್ ಬಗ್ಗೆ ಮಾಹಿತಿ ಕಂಡು ಹಿಡಿದಿದೆ. ಭಾರತದ ವಿರುದ್ಧ ಜಗತ್ತಿನಾದ್ಯಂತ ಇರುವ ಮುಸ್ಲಿಂ ಹ್ಯಾಕರ್‌ಗಳು ಸರಣಿ ಸೈಬರ್ ದಾಳಿಗೆ ಮುಂದಾಗಿವೆ ಎಂಬ ಅಂಶವನ್ನು ಬಯಲಿಗೆಳೆದಿದೆ.
ಕ್ಲೌಡ್‌ಎಸ್‌ಇಸಿ ಸಂಸ್ಥೆಯ ಪ್ರಾಥಮಿಕ ಸಂಶೋಧನೆಯ ಪ್ರಕಾರ, ನುಪುರ್ ಶರ್ಮಾ ಹೇಳಿಕೆಯನ್ನು ಖಂಡಿಸಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಹ್ಯಾಕರ್‌ಗಳು ಈ ಸರಣಿ ದಾಳಿಗೆ ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಈ ನೆಲ ಹಿಂದೂಗಳಿಗೆ ಸೇರಿದ್ದು, ಸನಾತನ ಧರ್ಮ ಮಾತ್ರವೇ ಇಲ್ಲಿ ಉಳಿಯೋದು!
ಕ್ಲೌಡ್‌ಎಸ್‌ಇಸಿಯ ತನಿಖೆಯ ಪ್ರಕಾರ ಹಲವಾರು ಮುಸ್ಲಿಂ ಹ್ಯಾಕರ್ ಗ್ರೂಪ್‌ಗಳು ಭಾರತದ ಹಲವು ಸರ್ಕಾರಿ, ಖಾಸಗಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲು ಈಗಾಗಲೇ ಆರಂಭಿಸಿದ್ದಾರೆ. ಭಾರತದ ಇಸ್ರೇಲ್ ಎಂಬಸಿ, manage.gov.in, extensionmoocs.gov.in, cia.gov.in, cfa.gov.in ಸೇರಿದಂತೆ ಹಲವು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿರುವ ಬಗ್ಗೆ ಸಾಕ್ಷಿಯನ್ನೂ ಡ್ರ್ಯಾಗನ್ ಫೋರ್ಸ್ ಗ್ರೂಪ್ ನೀಡಿದೆ. ಲೆಕ್ಕಾಚಾರಗಳ ಪ್ರಕಾರ ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಸರ್ಕಾರದ ಸೈಬರ್ ಸೆಕ್ಯುರಿಟಿ ಆದಷ್ಟು ಬೇಗ ಕ್ರಮ ತೆಗೆದುಕೊಂಡು, ಫೈರ್‌ವಾಲ್‌ಗಳನ್ನು ಗಟ್ಟಿಗೊಳಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.