ಕೇವಲ ಒಂದು ಕೆಜಿ ಗಾಂಜಾ ಸಾಗಣೆ ಮಾಡಿದ ತಪ್ಪಿಗೆ ಇಷ್ಟೊಂದು ದೊಡ್ಡ ಶಿಕ್ಷೆ ಬೇಡ, ಮರಣದಂಡನೆಯನ್ನು ನಿಲ್ಲಿಸಿ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳ ಮನವಿಯನ್ನು ಕೂಡ ತಿರಸ್ಕರಿಸಿದ ಸಿಂಗಾಪುರ ಕೋರ್ಟ್ ಆರೋಪಿಗೆ ಇಷ್ಟೊಂದು ದೊಡ್ಡ ಶಿಕ್ಷೆ ನೀಡಿದೆ.

ಸಿಂಗಾಪುರ: ನಮ್ಮಲ್ಲಿ ಗಾಂಜಾ, ಹೆರಾಯಿನ್, ಕೆನ್ನಬಿ ಮುಂತಾದ ಮಾದಕ ದ್ರವ್ಯಗಳನ್ನು ಆಗಾಗ ಸಾಗಣೆ ಮಾಡಿ ಸಿಕ್ಕಿ ಬೀಳುವ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ಕೆಲ ತಿಂಗಳು ವರ್ಷಗಳ ಬಳಿಕ ಆರೋಪಿಗಳು ಜೈಲಿನಿಂದ ಹೊರಬಂದು ಮತ್ತದೇ ದಂಧೆ ಮುಂದುವರಿಸಿ ರಾಜಾರೋಷವಾಗಿ ತಿರುಗಾಡುತ್ತಿರುತ್ತಾರೆ. ಆದರೆ ಮುಂದುವರಿದ ದೇಶ ಎನಿಸಿರುವ ಸಿಂಗಾಪುರದಲ್ಲಿ ಒಂದೇ ಒಂದು ಕೆಜಿ ಡ್ರಗ್‌ ಸಾಗಣೆ ಮಾಡಿ ಸಿಕ್ಕಿಬಿದ್ದ ಯುವಕನಿಗೆ ಅಲ್ಲಿನ ಕೋರ್ಟ್ ಮರಣದಂಡಣೆ ಶಿಕ್ಷೆ ನೀಡಿ ಗಲ್ಲಿಗೇರಿಸಿಯೇ ಬಿಟ್ಟಿದೆ. ಈ ವಿಚಾರವೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು, ಸಿಂಗಾಪುರ ಕೋರ್ಟ್‌ನ ಈ ನಿರ್ಧಾರಕ್ಕೆ ಎಲ್ಲೆಡೆ ಆಕ್ಷೇಪ ವ್ಯಕ್ತವಾಗಿದೆ. 46 ವರ್ಷದ ತಂಗರಾಜು ಸುಪೈಯ ಡ್ರಗ್‌ ಸಾಗಣೆ ಮಾಡಿ ಗಲ್ಲು ಶಿಕ್ಷೆಗೊಳಗಾದ ವ್ಯಕ್ತಿ. 

ಕೇವಲ ಒಂದು ಕೆಜಿ ಗಾಂಜಾ ಸಾಗಣೆ ಮಾಡಿದ ತಪ್ಪಿಗೆ ಇಷ್ಟೊಂದು ದೊಡ್ಡ ಶಿಕ್ಷೆ ಬೇಡ, ಮರಣದಂಡನೆಯನ್ನು ನಿಲ್ಲಿಸಿ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳ ಮನವಿಯನ್ನು ಕೂಡ ತಿರಸ್ಕರಿಸಿದ ಸಿಂಗಾಪುರ ಕೋರ್ಟ್ ಆರೋಪಿಗೆ ಇಷ್ಟೊಂದು ದೊಡ್ಡ ಶಿಕ್ಷೆ ನೀಡಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ಮನವಿಗೂ ಬೆಲೆ ಕೊಡದೇ ಗಾಂಜಾ ಅಪರಾಧಿಗೆ ಮರಣದಂಡನೆ ಶಿಕ್ಷೆ ನೀಡಲಾಗಿದೆ. ಸಿಂಗಾಪುರದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ಈ ಮರಣದಂಡನೆ ಶಿಕ್ಷೆಯನ್ನು ತುರ್ತಾಗಿ ಮರುಪರಿಶೀಲಿಸುವಂತೆ ಮನವಿ ಮಾಡಿತ್ತು. ಜೊತೆಗೆ ಬ್ರಿಟಿಷ್ ಉದ್ಯಮಿ ರಿಚರ್ಡ್ ಬ್ರಾನ್ಸನ್‌ ಕೂಡ ಈ ಶಿಕ್ಷೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದರು. ಆದರ ಈ ಯಾವ ಮನವಿಗೂ ತಲೆಕೆಡಿಸಿಕೊಳ್ಳದ ಕೋರ್ಟ್‌ ಅಪರಾಧಿಯನ್ನು ಗಲ್ಲಿಗೇರಿಸಿಯೇ ಬಿಟ್ಟಿದೆ.

ಉಗಾಂಡದಲ್ಲಿ ಇನ್ನು ಸಲಿಂಗಕಾಮದ ಅಪರಾಧಕ್ಕೆ ಗಲ್ಲು ಶಿಕ್ಷೆ!

ಛಂಗಿ ಜೈಲಿನ ಕಟ್ಟಡದಲ್ಲಿ ಸಿಂಗಾಪುರದ 46 ವರ್ಷದ ತಂಗರಾಜು ಸುಪ್ಪಯ್ಯ (Tangaraju Suppiah) ಅವರಿಗೆ ಇಂದು ಮರಣದಂಡನೆ ಶಿಕ್ಷೆ ವಿಧಿಸಲಾಯ್ತು ಎಂದು ಸಿಂಗಾಪುರ ಜೈಲು ಪ್ರಾಧಿಕಾರದ ವಕ್ತಾರರು ಹೇಳಿದ್ದಾಗಿ ಎಎಫ್‌ಪಿ ನ್ಯೂಸ್ ವರದಿ ಮಾಡಿದೆ. 2017ರಲ್ಲಿ ತಂಗರಾಜುವಿಗೆ 1,017.9 ಗ್ರಾಂ ಗಾಂಜಾ ಸಾಗಣೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿತ್ತು. (ಸಿಂಗಾಪುರದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲು ಬೇಕಾಗುವ ಕನಿಷ್ಠ ಪ್ರಮಾಣಕ್ಕಿಂತ 2 ಪಟ್ಟು ಹೆಚ್ಚು ಗಾಂಜಾವನ್ನು ಅವರು ಸಾಗಿಸಿದ ಆರೋಪವಿತ್ತು) 2018ರಲ್ಲಿ ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು, ಕೋರ್ಟ್ ಕೂಡ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. 

 ಡ್ರಗ್‌ ಪಾಲಿಸಿಗೆ ಸಂಬಂಧಿಸಿದಂತೆ ಜೆನೆವಾ (Geneva) ಮೂಲದ ಜಾಗತಿಕ ಕಮಿಷನ್‌ನ ಸದಸ್ಯ ಬ್ರಾನ್ಸನ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದು, ತಂಗರಾಜು ನಿರಪರಾಧಿ, ಆತನ ಬಂಧನವಾದ ವೇಳೆ ಆತನ ಸಮೀಪದಲ್ಲಿ ಎಲ್ಲೂ ಡ್ರಗ್ಸ್‌ ಇರಲಿಲ್ಲ. ಸಿಂಗಾಪುರ ಓರ್ವ ನಿರಪರಾಧಿಯನ್ನು ಗಲ್ಲಿಗೇರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 

Gorakhnath Temple Attack: ಐಐಟಿ ಪದವೀಧರ ಅಹ್ಮದ್‌ ಮುರ್ತುಜಾಗೆ ಮರಣದಂಡನೆ!

ಇತ್ತ ಸಿಂಗಾಪುರದ ಗೃಹ ವ್ಯವಹಾರಗಳ ಸಚಿವಾಲಯವೂ (Home Affairs Ministry) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತಂಗರಾಜುವಿನ ಅಪರಾಧ ಸಾಬೀತಾಗಿದೆ ಎಂದು ಹೇಳಿದ್ದಾರೆ. ಆತನಿಗೆ ಸೇರಿದ ಎರಡು ಮೊಬೈಲ್ ಫೋನ್‌ ನಂಬರ್‌ಗಳನ್ನು ಆತ ಈ ಡ್ರಗ್ ಪೂರೈಕೆಗೆ ಬಳಸಿದ್ದು ಸಾಬೀತಾಗಿದೆ ಎಂದು ಸರ್ಕಾರಿ ಅಭಿಯೋಜಕರು ಹೇಳಿದ್ದಾರೆ. 

ನೆರೆಯ ಥೈಲ್ಯಾಂಡ್ (Thailand) ಸೇರಿದಂತೆ ಪ್ರಪಂಚದ ಅನೇಕ ಭಾಗಗಳಲ್ಲಿ ಗಾಂಜಾ ಸೇವನೆ, ಸಾಗಣೆ ಪೂರೈಕೆ ಅಪರಾಧವಾಗಿದ್ದು, ಕಠಿಣ ಶಿಕ್ಷೆ ಇದೆ. ಆದರೆ ಈ ಅಪರಾಧಕ್ಕೆ ಮರಣದಂಡನೆ ಶಿಕ್ಷೆಯನ್ನು ನಿಲ್ಲಿಸುವಂತೆ ಕೆಲವು ಮಾನವ ಹಕ್ಕುಗಳ ಆಯೋಗ ಹಾಗೂ ಸಂಘಟನೆಗಳು ಸಿಂಗಾಪುರ ಸರ್ಕಾರದ ಮೇಲೆ ಒತ್ತಡ ಹಾಕಿವೆ. ಗಾಂಜಾವನ್ನು ಅಪರಾಧೀಕರಿಸಲಾಗಿದೆ, ಅಧಿಕಾರಿಗಳು ಜೈಲು ಶಿಕ್ಷೆಯನ್ನು ತ್ಯಜಿಸಿದ್ದಾರೆ ಮತ್ತು ಮರಣದಂಡನೆಯನ್ನು ರದ್ದುಗೊಳಿಸುವಂತೆ ಹಕ್ಕುಗಳ ಗುಂಪುಗಳು ಸಿಂಗಾಪುರದ ಮೇಲೆ ಒತ್ತಡ ಹೇರುತ್ತಿವೆ.

ಏಷ್ಯಾದ ಹಣಕಾಸಿನ ಹಬ್ (financial hub) ಎನಿಸಿರುವ ಸಿಂಗಾಪುರದಲ್ಲಿ ಡ್ರಗ್‌ಗೆ ಸಂಬಂಧಿಸಿದಂತೆ ಬಹಳ ಕಠಿಣ ನಿಯಮಗಳಿವೆ. ಡ್ರಗ್ ಪೂರೈಕೆಯನ್ನು ಸಮರ್ಥವಾಗಿ ನಿಭಾಯಿಸುವುದಕ್ಕಾಗಿ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ಸರ್ಕಾರ ಹಾಗೆಯೇ ಉಳಿಸಿಕೊಂಡಿದೆ. ಆದರೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಕೆಲವು ದೇಶಗಳಲ್ಲಿ ಮರಣದಂಡನೆ ಇನ್ನು ಜಾರಿಯಲ್ಲಿದೆ ಅದು ಅಪರಾಧಗಳನ್ನು ತಡೆಯುತ್ತದೆ ಎಂಬ ತಪ್ಪು ನಂಬಿಕೆ ಇದೆ ಎಂದು ಮಾನವ ಹಕ್ಕುಗಳ (Human Rights) ಆಯೋಗ ಅಭಿಮತ ವ್ಯಕ್ತಪಡಿಸಿದೆ. 

ತಂಗರಾಜು ಕುಟುಂಬವೂ ಕೂಡ ಈ ಬಗ್ಗೆ ಮರು ತನಿಖೆ ಮಾಡುವಂತೆ ಮನವಿ ಮಾಡಿತ್ತು. ತಂಗರಾಜುವಿನ ಮರಣದಂಡನೆ ಶಿಕ್ಷೆಯೂ ಸಿಂಗಾಪುರದಲ್ಲಿ ಕಳೆದ ಆರು ತಿಂಗಳಲ್ಲೇ ಮೊದಲ ಹಾಗೂ ಕಳೆದ ವರ್ಷದಿಂದ ಮರಣದಂಡನೆ ಶಿಕ್ಷೆಯ 12ನೇ ಪ್ರಕರಣವಾಗಿದೆ. 2 ವರ್ಷಗಳ ವಿರಾಮದ ನಂತರ ಮಾರ್ಚ್‌ 2022ರಲ್ಲಿ ಸಿಂಗಾಪುರ ಮತ್ತೆ ಮರಣದಂಡನೆ ಶಿಕ್ಷೆಯನ್ನು ಮತ್ತೆ ಜಾರಿಗೆ ತಂದಿತ್ತು. ನ ನಗೈನತ್ರನ್ ಕೆ ಧರ್ಮಲಿಂಗಮ್ (Nagaenthran K. Dharmalingam) ಎಂಬುವವರಿಗೆ ನೀಡಿದ ಮರಣದಂಡನೆ ಶಿಕ್ಷೆಯೂ ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಏಕೆಂದರೆ ಆತ ಮಾನಸಿಕ ಸ್ಥಿರತೆ ಹೊಂದಿರಲಿಲ್ಲ ಎಂದು ವಿಶ್ವಸಂಸ್ಥೆ (United Nation) ಇದನ್ನು ತೀವ್ರವಾಗಿ ಖಂಡಿಸಿತ್ತು.