ಇಲ್ಲೊಂದು ಕಡೆ ಮಲ್ಲಿಗೆ ತೂಕದ ಹೆಂಗೆಳೆಯರು ಕುಣಿತಿರಬೇಕಾದರೆ ಅವರ ಕಾಲ ಕೆಳಗೆ ಭೂಮಿ ಕುಸಿದು ಅವರೆಲ್ಲರೂ ಹೊಂಡದೊಳಗೆ ಬಿದ್ದಂತಹ ವಿಚಿತ್ರ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ನವ ದೆಹಲಿ: ಸಾಮಾನ್ಯವಾಗಿ ಆನೆ ಮುಂತಾದ ದೊಡ್ಡ ಗಾತ್ರದ ಪ್ರಾಣಿಗಳು ಸಾಗುವ ಮಾರ್ಗ ಕೆಲವೊಮ್ಮೆ ಕುಸಿಯುವುದುಂಟು ಅದಕ್ಕೆ ಕಾರಣ ಆನೆಯ ಭಾರ. ಆದರೆ ಇಲ್ಲೊಂದು ಕಡೆ ಮಲ್ಲಿಗೆ ತೂಕದ ಹೆಂಗೆಳೆಯರು ಕುಣಿತಿರಬೇಕಾದರೆ ಅವರ ಕಾಲ ಕೆಳಗೆ ಭೂಮಿ ಕುಸಿದು ಅವರೆಲ್ಲರೂ ಹೊಂಡದೊಳಗೆ ಬಿದ್ದಂತಹ ವಿಚಿತ್ರ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಭೂಮಿ ಕುಸಿದು ಕುಣಿಯುತ್ತಿದ್ದ ಹುಡುಗಿಯರೆಲ್ಲ ಭೂಮಿಯೊಳಗೆ ಬಿದ್ದ ದೃಶ್ಯ ನೋಡುಗರನ್ನು ಒಮ್ಮೆ ಗಾಬರಿಗೊಳ್ಳುವಂತೆ ಮಾಡುತ್ತಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ನಮ್ಮ ಭಾರತದಲ್ಲಿ ಅಲ್ಲ. ಬ್ರೆಜಿಲ್‌ನ(Brazil) ಈಶಾನ್ಯ ಭಾಗದ ನಗರ ಅಲಗೋಯಿನ್ಹಾಸ್‌ನಲ್ಲಿ(Alagoinhas). ವಿಡಿಯೋದಲ್ಲಿ ಕಾಣಿಸುವಂತೆ ಏಳು ಜನ ಯುವತಿಯರು (girl) ರಸ್ತೆಯಲ್ಲಿ ಗುಂಪಾಗಿ ಸುತ್ತಲೂ ನಿಂತುಕೊಂಡು ಖುಷಿಯಿಂದ ಹಾರಿ ಹಾರಿ ಕುಣಿಯುತ್ತಿದ್ದಾರೆ. ಇದರಿಂದ ಒಮ್ಮೆಗೆ ಭೂಮಿ ಬಾಯ್ತರೆದಿದ್ದು, ಕುಣಿಯುತ್ತಿದ್ದ ಸುಂದರಿಯರೆಲ್ಲಾ ಹೊಂಡಕ್ಕೆ ಬಿದ್ದಿದ್ದಾರೆ. ಆದರೆ ಸಣ್ಣಪುಟ್ಟ ತರಚು ಗಾಯಗಳನ್ನು ಬಿಟ್ಟರೆ ಇವರ್ಯಾರಿಗೂ ಜೀವಾಪಾಯವಾಗುವಂತಹ ದೊಡ್ಡ ಹಾನಿಯೇನು ಸಂಭವಿಸಿಲ್ಲ.
ಧುತ್ತನೇ ತೆರೆದುಕೊಂಡು ಓರ್ವನ ಬಲಿ ಪಡೆದ ಈಜುಕೊಳದ ಸಿಂಕ್‌ಹೊಲ್: Terrible video
ಇವರೆಲ್ಲರೂ ಬರ್ತ್‌ಡೇ ಪಾರ್ಟಿಗೆ (Birthday Party)ಆಗಮಿಸಿದ್ದು, ಅದೇ ಖುಷಿಯಲ್ಲಿ ಎಲ್ಲರೂ ಗುಂಪಾಗಿ ಒಬ್ಬರ ಕೈಯನ್ನು ಮತ್ತೊಬ್ಬ ಹೆಗಲ ಮೇಲೆ ಇರಿಸಿಕೊಂಡು ಹಾರುತ್ತಾ ಕುಣಿಯುತ್ತ ಸುತ್ತು ಬರುತ್ತಿರಬೇಕಾದರೆ ಈ ಆಘಾತಕಾರಿ ಘಟನೆ (Shocking Incident)ನಡೆದಿದೆ. ಆದರೆ ಎಲ್ಲರೂ ಈ ಅನಾಹುತದಿಂದ ಪಾರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅನಾಹುತಕಾರಿ, ತಮಾಷೆಯಿಂದ ಕೂಡಿದ ಸಾಕಷ್ಟು ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಹಾಗೆಯೇ ಕೆಲ ದಿನಗಳ ಹಿಂದೆ ಮೇಯುತ್ತಿದ್ದ ಹಸುವನ್ನು ಕೆಣಕಲು ಹೋದ ವ್ಯಕ್ತಿಯೊಬ್ಬನನ್ನು ಹಸುಗಳು ಓಡಿಸಿದ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು.
ವಿಡಿಯೋದಲ್ಲಿ ಕಾಣಿಸುವಂತೆ ಹುಲ್ಲುಗಾವಲೊಂದರಲ್ಲಿ ಹಸುಗಳು ಆರಾಮವಾಗಿ ತಮ್ಮ ಪಾಡಿಗೆ ತಾವು ಹುಲ್ಲು ಮೇಯುತ್ತಿರುತ್ತವೆ. ಅಲ್ಲಿಗೆ ಹೋದ ವ್ಯಕ್ತಿಯೊಬ್ಬ ಕರ್ಕಶವಾಗಿ ಸದ್ದು ಮಾಡುತ್ತಾ ಹಸುಗಳನ್ನು ಕೆಣಕಲು ನೋಡಿದ್ದಾನೆ. ಸ್ವಲ್ಪ ಕಾಲ ಇವನನ್ನೇ ನೋಡಿದ ಹಸುಗಳು ಆತನನ್ನು ಓಡಿಸಿಕೊಂಡು ಬಂದಿದ್ದು, ಹಸುಗಳು ತನ್ನತ್ತ ಬರುತ್ತಿದ್ದಂತೆ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಹೀಗೆ ಹಸುಗಳಿಂದ ತಪ್ಪಿಸಿಕೊಂಡು ಓಡುವ ರಭಸದಲ್ಲಿ ಆತ ಆಯ ತಪ್ಪಿ ಸಮೀಪದ ಕೆರೆಗೆ ಬಿದ್ದಿದ್ದು, ಕೂಡಲೇ ಅಲ್ಲಿಂದ ಎದ್ದು ಬಂದು ಪಾರಾಗಿದ್ದಾನೆ.
ಪಾರ್ಕಿಂಗ್ ಬಳಿ ಏಕಾಏಕಿ ಗುಂಡಿ, ವಾಹನಗಳೆಲ್ಲವೂ ಸ್ವಾಹ: CCTV ದೃಶ್ಯ ವೈರಲ್!
ಈ ಮಧ್ಯೆ ಎಲ್ಲೋ ಇದ್ದ ಪುಟ್ಟ ನಾಯಿಯೂ ಕೂಡ ಈತನೊಂದಿಗೆ ಪುಟ್ಟ ಹೆದರಿ ಓಡಿಕೊಂಡು ಬಂದಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಹಗ್ ಎಂಬ ಪೇಜ್‌ನಿಂದ ಪೋಸ್ಟ್ ಮಾಡಲಾಗಿತ್ತು. ಆತನ ಕಾಲಿಗಿಂತ ಮೊದಲು ದೇಹ ಓಡಲು ಶುರು ಮಾಡಿದಾಗ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. ಈ ವಿಡಿಯೋವನ್ನು 40 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದಕ್ಕೆ ವಿಡಿಯೋ ನೋಡಿದವರು ಕೂಡ ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಈತ ಹಸುಗಳಿಗೆ ಏನು ಹೇಳಿರಬಹುದು ಎಂದು ನೋಡುಗರು ಕೇಳುತ್ತಿದ್ದಾರೆ. ಅಲ್ಲದೇ ನಡುವಿನಲ್ಲಿ ಬಂದ ನಾಯಿ ಮರಿ ಅಷ್ಟೊತ್ತು ಎಲ್ಲಿತ್ತು ಎಂದು ಜನ ಪ್ರಶ್ನಿಸಿದ್ದಾರೆ.
ಹಾಗೆಯೇ ಮತ್ತೊಂದು ವೈರಲ್ ವಿಡಿಯೋದಲ್ಲಿ ಹಸ್ಕಿ ತಳಿಯ ಶ್ವಾನವೊಂದಕ್ಕೆ ಅದರ ಮಾಲಕಿ ಸಿಪಿಆರ್ ತರಬೇತಿ ನೀಡುತ್ತಿದ್ದು ಅದರ ವಿಡಿಯೋ ವೈರಲ್ ಆಗಿತ್ತು. ಸಿಪಿಆರ್ ಆಪತ್ಕಾಲದಲ್ಲಿ ಜೀವರಕ್ಷಕವಾಗಿ ಕಾರ್ಯ ನಿರ್ವಹಿಸುತ್ತದೆ. ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಇತ್ತೀಚೆಗೆ ಕೆಲ ಯುವಕರು ಯುವತಿಯರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೀಗಾಗಿ ಸಿಪಿಆರ್ ಬಗ್ಗೆ ಇತ್ತೀಚೆಗೆ ಹೆಚ್ಚಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಕಾರಣಕ್ಕೆ ಇಲ್ಲೊಬ್ಬರು ಮಹಿಳೆ ಶ್ವಾನಕ್ಕೆ ಉತ್ತಮವಾಗಿ ಸಿಪಿಆರ್ ತರಬೇತಿ ನೀಡುತ್ತಿದ್ದಾರೆ. ಶ್ವಾನವೂ ಕೂಡ ತನ್ನ ಮಾಲಕಿ ಹೇಳಿದಂತೆ ಸಿಪಿಆರ್ ತರಬೇತಿ ಪಡೆಯುವುದನ್ನು ಕಾಣಬಹುದಾಗಿದೆ.