ಜೆರುಸಲೇಂ(ಜೂ.10): ಜೆರುಸಲೇಂನ Shaare Zedek Medical Centerನ ಪಾರ್ಕಿಂಗ್‌ನಲ್ಲಿ ವಿಶಾಲವಾದ ಗುಂಡಿಯೊಂದು ನಿರ್ಮಾಣವಾಗಿದ್ದು, ಅಲ್ಲಿ ನಿಲ್ಲಿಸಿದ್ದ ಮೂರು ಕಾರುಗಳನ್ನೂ ಇದು ನುಂಗಿ ಹಾಕಿದೆ.. ಸೋಶಿಯಲ್ ಮೀಡಿಯಾದಲ್ಲಿ ಪಾರ್ಕಿಂಗ್ ಲಾಟ್‌ನ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಈ ಗುಂಡಿ ಅಚಾನಕ್ಕಾಗಿ ಆಗಿದ್ದು ಎಂಬುವುದು ಸ್ಪಷ್ಟವಾಗುತ್ತದೆ. ಇದಾದ ಬಳಿಕ ಅಲ್ಲಿದ್ದ ಗೋಡೆಗಳು ಬಿದ್ದಿದ್ದು, ವಾಹನಗಳೂ ಬಿದ್ದಿವೆ. ರಕ್ಷಣಾ ತಂಡ ಕೂಡಲೇ ಸ್ಥಳಕ್ಕಾಗಮಿಸಿದೆ. ಅದೃಷ್ಟವಶಾತ್ ಈ ದುರಂತದಲ್ಲಿ ಯಾರಿಗೂ ಯಾವುದೇ ಹಾನಿಯುಂಟಾಗಿಲ್ಲ.

ಟೈಮ್ಸ್ ಆಫ್‌ ಇಸ್ರೇಲ್ ಅನ್ವಯ ಈ ಗುಂಡಿ ಬಳಿ ಸುರಂಗವೊಂದರ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಇದು ಆಸ್ಪತ್ರೆ ಹಾಗೂ ಪಾರ್ಕಿಂಗ್ ಲಾಟ್‌ ಕೆಳಗಿನಿಂದ ಹಾಧು ಹೋಗುತ್ತಿತ್ತು. ಇನ್ನು ಈ ಸುರಂಗದ ಒಂದು ಭಾಗ ಬಿದ್ದ ಪರಿಣಾಮ ಈ ಗುಂಟಿ ನಿರ್ಮಾಣವಾಗಿದೆ ಎನ್ನಲಾಗಿದೆ. ಇಲ್ಲಿ ಇತ್ತೀಚೆಗಷ್ಟೇ ನೂರಾರು ವಾಹನಗಳನ್ನು ಪಾರ್ಕ್ ಮಾಡುವಂತಹ ವಿಶಾಲವಾದ ಪಾರ್ಕಿಂಗ್ ನಿರ್ಮಿಸಲಾಗಿತ್ತು. ಗುಂಡಿ ಹಳೇ ಪಾರ್ಕಿಂಗ್ ಬಳಿ ಆಗಿರುವುದರಿಂದ ಹೆಚ್ಚಿನ ವಾಹನಗಳಿಗೆ ಹಾನಿಯಾಗಿಲ್ಲ. 

ಇನ್ನು ಈ ಗುಂಡಿಯಲ್ಲಿ ಯಾರಾದರೂ ಬಿದ್ದಿದ್ದಾರಾ ಎಂದೂ ಪರಿಶೀಲಿಸಲಾಗಿದೆ. ಆದರೆ ಅದೃಷ್ಟವಶಾತ್ ಹೀಗಾಗಿಲ್ಲ. ಸದ್ಯ ಜನರಿಗೆ ಈ ಪ್ರದೆಶದಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ.