* ಸಾಯುವ ಮುನ್ನ ಗೆಳತಿಯೊಂದಿಗೆ ಕೆಲ ದಿನ ಬಾಳಲು ಬಯಸಿದ್ದ* ಮದುವೆಗೆ ಕೆಲವೇ ಕ್ಷಣ ಇದ್ದಾಗ ವರ ನಿಧನ* ಕ್ಯಾನ್ಸರ್ ಗೆ ಬಲಿಯಾದ,  ಹಳೆ ಪತ್ನಿಯ ಕಣ್ಣೀರು

ಸ್ಕಾಟ್ಲೆಂಡ್‌(ಜು. 01) ಸ್ಕಾಟ್ಲೆಂಡ್‌ನ ನಾರ್ತ್ ಐರ್‌ಶೈರ್‌ನ ವರ ಡ್ಯಾಡ್ ಆಫ್ ಇಲೆವನ್ ಪಾಲ್ ವೈಯನ್ ಬಲಿಪೀಠದ ಮೇಲೆಯೇ ಕುಸಿದು ಬಿದ್ದಿದ್ದ. ಆತನ ಕುಟುಂಬ ಉಳಿಸಿಕೊಳ್ಳಲು ಎಷ್ಟೊಂದು ಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

57 ವರ್ಷದ ವರ 21 ವರ್ಷ ಜತೆಗೆ ಇದ್ದ ಗೆಳತಿಯನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಬಯಸಿದ್ದ. ಅನಾರೋಗ್ಯದ ಲಕ್ಷಣಗಳು ಆತನನ್ನು ಕಾಡುತ್ತಿದ್ದರೂ ಸಾವು ಎದುರಾಗುತ್ತದೆ ಎಂದು ಭಾವಿಸಿರಲಿಲ್ಲ.

38 ವರ್ಷದ ಗೆಳತಿಯೊಂದಿಗೆ 21 ವರ್ಷ ಜತೆಗೆ ಇದ್ದ ಪರಿಣಾಮ ಅವರಿಗೆ ಐವರು ಮಕ್ಕಳು. ತನ್ನ ಮಕ್ಕಳೊಂದಿಗೆ ಹಾಜರಿದ್ದಳು ಗಂಡನ ಜತೆಯೇ ಅಧಿಕೃತ ಮದುವೆ ಆಗನಬೇಕಿತ್ತು. ಗೆಳತಿಗೆ ಐದು ಮಕ್ಕಳನ್ನು ನೀಡಿದ್ದವ ಮದುವೆಗೆ ಸಿದ್ಧವಾಗಿದ್ದ. ಆದರೆ ಸಾವು ಬರಮಾಡಿಕೊಂಡಿತ್ತು. ಮಕ್ಕಳು ಅಗಲಿದ ತಂದೆಗೆ ಅಲ್ಲಿಂದಲೇ ಅಂತಿಮ ನಮನ ಸಲ್ಲಿಸಿದರು.

ಮದುವೆ ಗೋರಂಟಿ ಮಾಸುವ ಮುನ್ನವೇ ಹತ್ಯೆಯಾಗಿದ್ದಳು 

ಕೆಲ ದಿನಗಳ ಹಿಂದಷ್ಟೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಸಾಯುವ ಮುನ್ನ ಗೆಳತಿಯನ್ನು ಮದುವೆಯಾಗಬೇಕೆಂದು ಬಯಸಿದ್ದ ಪವಿತ್ರ ಪ್ರೇಮ ಅವರದ್ದು. ಆತನ ಶ್ವಾಸಕೋಶ ಮತ್ತು ಲೀವರ್ ಸಂಪೂರ್ಣವಾಗಿ ಕ್ಯಾನ್ಸರ್ ಗೆ ಆಹಾರವಾಗಿತ್ತು. ಎರಡು ವಾರದಿಂದ ಆರು ವಾರ ಆತ ಬದುಕಬಹುದು ಎಂದು ವೈದ್ಯರು ತಿಳಿಸಿದ್ದ ಕಾರಣಕ್ಕೆ ಎಂಟನೇ ದಿನಕ್ಕೆ ಮದುವೆ ಫಿಕ್ಸ್ ಮಾಡಿಕೊಳ್ಳಲಾಗಿತ್ತು.

ವರ ಅಲಿಸನ್ ತನ್ನ ಸರ್ ನೇಮ್ ಬದಲಾಯಿಸಿಕೊಳ್ಳುವ ತೀರ್ಮಾನ ಮಾಡಿದ್ದಳು. ಅತಿ ಸಣ್ಣ ಸಮಯದಲ್ಲಿಯೇ ಅಲಿಸನ್ ಮತ್ತು ವೈಯನ್ ಒಂದಾಗುವ ನಿರ್ಧಾರಕ್ಕೆ ಬಂದಿದ್ದರು ಆದರೆ ವಿಧಿ ಆಟ ಬೇರೆಯದೇ ಆಗಿತ್ತು ಮದುವೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾಗಲೇ ಕ್ಯಾನ್ಸರ್ ವರನ ಬಲಿಪಡೆದಿದೆ. ಗೆಳತಿ ಆತನ ಮಕ್ಕಳು ಕಣ್ಣೀರು ಹಾಕಿದ್ದಾರೆ.