ಪ್ಯಾರಿಸ್(ನ.01)‌: ಶಿಕ್ಷಕರೊಬ್ಬರು ಶಾಲೆಯಲ್ಲಿ ಪ್ರವಾದಿ ಮಹಮ್ಮದ್‌ರ ಫೋಟೋ ಪ್ರದರ್ಶನದ ಬಳಿಕ ಉದ್ವಿಗ್ನಗೊಂಡಿರುವ ಫ್ರಾನ್ಸ್‌ನಲ್ಲಿ ಶನಿವಾರ ಮತ್ತೊಂದು ಶಂಕಿತ ಉಗ್ರ ದಾಳಿ ನಡೆದಿದೆ.

ಫ್ರಾನ್ಸ್‌ನ ಲ್ಯೋನ್‌ ನಗರದಲ್ಲಿ ಪಾದ್ರಿಯೊಬ್ಬರು ಚಚ್‌ರ್‍ನ ಬಾಗಿಲು ಮುಚ್ಚಿ ತೆರಳುತ್ತಿದ್ದ ವೇಳೆ ಆಗಂತುಕನೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗುಂಡೇಟಿನಿಂದ ಗಾಯಗೊಂಡ ಪಾದ್ರಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ದಿನಗಳ ಹಿಂದಷ್ಟೇ ಇದೇ ನಗರದಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ಗನ್‌ ಹಿಡಿದು ರಸ್ತೆಯಲ್ಲಿದ್ದವರ ಮೇಲೆ ದಾಳಿಯ ಬೆದರಿಕೆ ಹಾಕಿದ್ದ. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಭದ್ರತಾ ಪಡೆಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದವು. ಅಷ್ಟರಲ್ಲೇ ಮತ್ತೊಂದು ದಾಳಿಯ ಘಟನೆ ಮರುಕಳಿಸಿದೆ. ದಾಳಿಕೋರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.