ಮಗುವಿನ ತೊಟ್ಟಿಲನ್ನು ಮುಂಗಾಲಿನಿಂದ ತೂಗುತ್ತಿರುವ ಗೋಲ್ಡನ್ ರಿಟ್ರೀವರ್ ನಾಯಿಯ ವಿಡಿಯೋ ವೈರಲ್ ಆಗಿದೆ. ಮಾಜಿ ಸೇನಾ ಪೈಲಟ್ ಕೆವಿನ್ ತಮ್ಮ ಥೆರಪಿ ನಾಯಿಗಳಾದ ಎಲ್ಲಿ ಮತ್ತು ಎಮ್ಮ ಜೊತೆ ಒತ್ತಡ ನಿರ್ವಹಣಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಈ ವಿಡಿಯೋ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ನಾಯಿಗಳ ತಳಿ ಮತ್ತು ಲಭ್ಯತೆಯ ಬಗ್ಗೆ ಜಿಜ್ಞಾಸೆ ಹೆಚ್ಚಿದೆ.
ಮನೆಯೊಂದರಲ್ಲಿ ನಾಯಿಯೊಂದು ಚಿಕ್ಕ ಮಗುವನ್ನು ತಾಯಿಯಂತೆ ಪೋಷಿಸುತ್ತಿದೆ. ಮಗುವನ್ನು ತೊಟ್ಟಿಲಲ್ಲಿ ಹಾಕಿದರೆ, ಮಗುವನ್ನು ತೂಗಿ ಮಲಗಿಸುವ ಕೆಲಸ ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮನೆಯಲ್ಲಿ ಸಾಕಿರುವ ನಾಯಿಗಳು ಮನೆಯ ಮಂದಿಗೆಲ್ಲಾ ಭಾರೀ ಪ್ರೀತಿ ಮತ್ತು ಅಚ್ಚುಮೆಚ್ಚು ಗಳಿಸಿರುತ್ತವೆ. ಮನೆ ಮಂದಿಯೇ ನಾಯಿಗಳಿಗೆ ಊಟ, ಉಪಚಾರ ಮಾಡಿ ಅವುಗಳನ್ನು ಮಕ್ಕಳಂತೆ ಪೋಷಣೆ ಮಾಡಬೇಕು. ಆದರೆ, ಇಲ್ಲೊಂದು ನಾಯಿ ಮನೆಯಲ್ಲಿ ಚಿಕ್ಕ ಮಗುವನ್ನು ತಾಯಿಯಂತೆ ಪೋಷಣೆ ಮಾಡುತ್ತಿದೆ. ಮಗುವನ್ನು ತೊಟ್ಟಿಲಲ್ಲಿ ಹಾಕಿದರೆ, ಮಗುವನ್ನು ತೂಗಿ ಮಲಗಿಸುವ ಕೆಲಸ ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನಾಯಿ ತಳಿ ಯಾವುದು, ಅದರ ಮರಿಗಳು ಸಿಗಬಹುದೇ ಎಂದು ಕೇಳುವವರ ಸಂಖ್ಯೆ ಹೆಚ್ಚಾಗಿದೆ.
ಮಕ್ಕಳು ಮತ್ತು ಸಾಕು ಪ್ರಾಣಿಗಳ ನಡುವಿನ ಬಾಂಧವ್ಯ ತುಂಬಾ ಆತ್ಮೀಯವಾಗಿರುತ್ತದೆ. ಅಂತಹ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ಈ ವಿಡಿಯೋ ಎಲ್ಲಾ ವಿಡಿಯೋಗಳಿಗಿಂತಲೂ ವಿಶೇಷ ಎಂದು ಜನ ಹೇಳುತ್ತಿದ್ದಾರೆ. ತೊಟ್ಟಿಲಲ್ಲಿ ಮಲಗಿರುವ ಮಗುವಿಗೆ ತೊಟ್ಟಿಲು ತೂಗುತ್ತಿರುವ ನಾಯಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗೋಲ್ಡನ್ ರಿಟ್ರೀವರ್ ಎಂಬ ನಾಯಿ ತನ್ನ ಮುಂಗಾಲಿನಿಂದ ಮಗುವಿನ ತೊಟ್ಟಿಲನ್ನು ನಿಧಾನವಾಗಿ ತೂಗುತ್ತಿದೆ. ತೊಟ್ಟಿಲಿನ ಸಣ್ಣ ಚಲನೆಯಲ್ಲಿ ಮಗು ಸುಮ್ಮನೆ ಮಲಗಿರುವುದನ್ನು ನೋಡಬಹುದು. 'ನೀವು ಮಕ್ಕಳ ವಿಶ್ವಾಸಾರ್ಹ ಆರೈಕೆಯನ್ನು ಕಂಡುಕೊಂಡಾಗ...(When you find reliable child care)' ಎಂಬ ಶೀರ್ಷಿಕೆಯೊಂದಿಗೆ ಎಲ್ಲಿ ಗೋಲ್ಡನ್ ಲೈಫ್ (Golden Retriever Life) ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕೆವಿನ್‌ಗೆ ಎಲ್ಲಿ ಮತ್ತು ಎಮ್ಮ ಎಂಬ ಎರಡು ಗೋಲ್ಡನ್ ರಿಟ್ರೀವರ್ ನಾಯಿಗಳಿವೆ. ಅವರಿಬ್ಬರಿಗಾಗಿಯೇ ಅವರು ಎಲ್ಲಿ ಗೋಲ್ಡನ್ ಲೈಫ್ ಎಂಬ ಇನ್‌ಸ್ಟಾಗ್ರಾಮ್ ಪುಟವನ್ನು ಪ್ರಾರಂಭಿಸಿದ್ದಾರೆ.
ಕೆವಿನ್ ಅಮೇರಿಕನ್ ಸೇನೆಯ ಪೈಲಟ್ ಆಗಿದ್ದರು. ಸೇನೆಯಲ್ಲಿದ್ದಾಗ ಕೆವಿನ್‌ಗೆ ಎಲ್ಲಿ ಎಂಬ ನಾಯಿ ಸಿಕ್ಕಿತು. ಅದು ಥೆರಪಿ ನಾಯಿ ಆಗಿದೆ. ಎಲ್ಲಿ ನಾಯಿಯ ಜೊತೆ ಕೆವಿನ್ ಅವರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಮುಂದಾದರು. ನಾಯಿ ಜೊತೆಗಿನ ಕಾರ್ಯಕ್ರಮದ ಮೂಲಕ ಜನರು, ಸೇನೆಯಲ್ಲಿರುವ ಸೈನಿಕರ ಒತ್ತಡ ಕಡಿಮೆ ಮಾಡುವ ಕಾರ್ಯವನ್ನು ಶುರು ಮಾಡಿದರು. ಜನ ನಾಯಿ ಜೊತೆ ಇರುವುದರಿಂದ ಅವರ ಒಂಟಿತನ ಮತ್ತು ಒತ್ತಡ ಕಡಿಮೆಯಾಗುತ್ತದೆ ಎಂಬ ಜಾಗೃತಿಯನ್ನು ಮೂಡಿಸಿದರು.
ಕೆವಿನ್ ಮತ್ತು ಎಲ್ಲಿ ಶ್ವಾನದ ಜೋಡಿ 2020ರ ಹೊತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧವಾಯಿತು. 2022ರಲ್ಲಿ ಎಲ್ಲಿ ಶ್ವಾನದ ಜೊತೆಗೆ ಎಮ್ಮ ಎಂಬ ಮತ್ತೊಂದು ಸೇರಿಕೊಂಡಿತು. 2024ರಲ್ಲಿ ತರಬೇತಿ ಪಡೆದು ಎಮ್ಮ ಕೂಡ ಥೆರಪಿ ನಾಯಿ ಎಂದು ಪರಿಗಣಿಸಲ್ಪಟ್ಟಿತು. ಇಂದು ಕೆವಿನ್ ಎರಡೂ ಶ್ವಾನಗಳನ್ನು ಇಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಒತ್ತಡದಲ್ಲಿರುವವರನ್ನು ಸಮಾಧಾನಪಡಿಸಲು ಬಳಸುತ್ತಿದ್ದಾರೆ. ಇನ್ನು ಶ್ವಾನಗಳೊಂದಿಗೆ ಹಲವು ಆಸ್ಪತ್ರೆ ಭೇಟಿ ನೀಡುತ್ತಿರುವ ವಿಡಿಯೋಗಳು ಅವರ ಇನ್‌ಸ್ಟಾಗ್ರಾಮ್ ಪುಟದಲ್ಲಿವೆ. ವಿಡಿಯೋದ ಕೆಳಗೆ ಒಬ್ಬ ವೀಕ್ಷಕರು ಗೋಲ್ಡನ್ ರಿಟ್ರೀವರ್ ಶ್ವಾನಗಳು ಪ್ರತಿಭಾವಂತ ತಳಿಗಳಾಗಿವೆ ಎಂದು ಬರೆದಿದ್ದಾರೆ. ಇನ್ನೊಬ್ಬರು ಅತ್ಯುತ್ತಮ ಮಕ್ಕಳ ಆರೈಕೆದಾರರು ಎಂದು ಬರೆದಿದ್ದಾರೆ. ಇನ್ನೊಬ್ಬರು ನಿಜಕ್ಕೂ ಇದನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


