Asianet Suvarna News Asianet Suvarna News

19 ಇಂಚಿನ ಕಿವಿಯೊಂದಿಗೆ ಜನಿಸಿದ ಮೇಕೆ ಮರಿ

ಸಾಮಾನ್ಯವಾಗಿ ಪುಟ್ಟ ಮೇಕೆ ಮರಿಯ ಕಿವಿಯ ಅಂದಾಜು ಉದ್ದ ಹೆಚ್ಚೆಂದರೆ ಎರಡು ಇಂಚು. ಆದರೆ ಪಾಕಿಸ್ತಾನದಲ್ಲಿ ಮೇಕೆಯೊಂದು 19 ಇಂಚು ಉದ್ದದ ಕಿವಿಯೊಂದಿಗೆ ಜನಿಸಿದೆ. ಅಲ್ಲದೇ ಈಗ ಅದು ತನ್ನ ಕಿವಿಯ ಗಾತ್ರದಿಂದಲೇ ಗಿನ್ನೆಸ್ ಪುಟ ಸೇರುವ ಗುರಿ ಹೊಂದಿದೆ. 

goat calf born with 19 inch ears in Pakistan akb
Author
Bangalore, First Published Jun 24, 2022, 10:49 AM IST

ಸಾಮಾನ್ಯವಾಗಿ ಪುಟ್ಟ ಮೇಕೆ ಮರಿಯ ಕಿವಿಯ ಅಂದಾಜು ಉದ್ದ ಹೆಚ್ಚೆಂದರೆ ಎರಡು ಇಂಚು. ಆದರೆ ಪಾಕಿಸ್ತಾನದಲ್ಲಿ ಮೇಕೆಯೊಂದು 19 ಇಂಚು ಉದ್ದದ ಕಿವಿಯೊಂದಿಗೆ ಜನಿಸಿದೆ. ಅಲ್ಲದೇ ಈಗ ಅದು ತನ್ನ ಕಿವಿಯ ಗಾತ್ರದಿಂದಲೇ ಗಿನ್ನೆಸ್ ಪುಟ ಸೇರುವ ಗುರಿ ಹೊಂದಿದೆ. 

ಸಿಂಬಾ ಹೆಸರಿನ ಈ ಮೇಕೆ ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದೆ. ಇದರ ಕಿವಿಗಳು  9 ಇಂಚು ಉದ್ದವಿದ್ದು, ಕಿವಿಯಿಂದಲೇ ಇದು ನೋಡುಗರ ಆಕರ್ಷಣೆಗೆ ಪಾತ್ರವಾಗಿದೆ. ಸ್ಥಳೀಯ ಮಟ್ಟದಲ್ಲಿ ಇದು ಸೆಲೆಬ್ರಿಟಿಯಾಗಿದ್ದು, ದೂರ ದೂರದ ಹಳ್ಳಿಯ ಜನ ಈ ಮೇಕೆ ಮರಿಯನ್ನು ನೋಡಲು ಆಗಮಿಸುತ್ತಿದ್ದಾರೆ. 

Chikkamagaluru ಮೇಕೆ ಮರಿ ನುಂಗಿ ಗಡದ್ದಾಗಿ ನಿದ್ದೆ ಮಾಡಿದ್ದ ಹೆಬ್ಬಾವು ಸೆರೆ
 
ಕೆಲವು ವಾರಗಳ ಪ್ರಾಯದ ಈ ಆಡು ಮರಿ ಸಾಮಾನ್ಯವಾಗಿ ಉದ್ದ ಕಿವಿಗಳಿಗೆ ಹೆಸರಾದ ನ್ಯುಬಿಯನ್‌ ತಳಿಯ ಮೇಕೆಯಾಗಿದೆ. ಅವುಗಳ ಕಿವಿಗಳು ಬೇಸಿಗೆ ಕಾಲದ ಸೆಖೆಯ ದಾಹವನ್ನು ತಡೆಯಲು ಪೂರಕವಾಗಿ ರಚಿಸಲ್ಪಟ್ಟಿವೆ. ಆದರೆ ಸಿಂಬಾ ಈಗ ತನ್ನ ಕಿವಿಗಳ ಗಾತ್ರದಿಂದಲೇ ಗಿನ್ನೆಸ್ ಪುಟ ಸೇರುವ ಹುಮ್ಮಸಿನ್ನಲ್ಲಿದೆ. 

ಇಷ್ಟು ಉದ್ದವಾದ ಕಿವಿಗಳೊಂದಿಗೆ ಸಿಂಬಾ (Simba) ಜನಿಸಿದಾಗ ಅದರ ಮಾಲೀಕ ಮುಹಮ್ಮದ್ ಹಸನ್ ನರೇಜೋ ಆಘಾತಕ್ಕೊಳಗಾದರು. ಸಿಂಬಾ ಕಿವಿಗಳು ಎಷ್ಟು ಉದ್ದವಾಗಿವೆ ಎಂದರೆ ಅದು ನಡೆಯುವಾಗ ಕಿವಿಗಳು ನೆಲದ ಮೇಲೆ ಎಳೆಯಲ್ಪಡುತ್ತವೆ. ಅಲ್ಲದೇ ಅವುಗಳು ಅದರ ಮುಖದ ಎರಡೂ ಬದಿಗಳಲ್ಲಿ ತೂಗಾಡುತ್ತಿದ್ದು, ಗಾಳಿಗೆ ಅತ್ತಿತ್ತ ಹಾರಾಡುತ್ತವೆ. 

ಉದ್ದನೆಯ ಕಿವಿಯಿಂದಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿರುವ ಯಾವುದೇ ಮೇಕೆಗಳು ಪ್ರಸ್ತುತ ಇಲ್ಲ. ಆದರೆ ಉದ್ದವಾದ ಕಿವಿ ಹೊಂದಿರುವ ನಾಯಿಗಳು ಈ ಗೌರವಕ್ಕೆ ಪಾತ್ರವಾಗಿವೆ. ಸಿಂಬಾದ ಉದ್ದವಾದ ಕಿವಿಗಳು ಬಹುಶಃ ಜೀನ್ ರೂಪಾಂತರ ಅಥವಾ ಅನುವಂಶಿಕ ಅಸ್ವಸ್ಥತೆಯ (genetic disorder) ಪರಿಣಾಮ ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. 

ಗಾಯಕ ಜಸ್ಟಿನ್ ಬೀಬರ್‌ ಮುಖಕ್ಕೆ ಪಾರ್ಶ್ವವಾಯು; ನಗಲೂ ಆಗದ ವಿಚಿತ್ರ ಕಾಯಿಲೆಗೆ ಕಾರಣವಾಗೋದೇನು ?
 

ಈ ಮೇಕೆ ಸಿಂಬಾ ಶೀಘ್ರದಲ್ಲೇ ಅಧಿಕೃತ ಗಿನ್ನೆಸ್ ವಿಶ್ವ ದಾಖಲೆ (Guinness world record) ಹೊಂದಲಿದೆ ಎಂದು ಮಾಲೀಕ ನರೇಜೊ ಆಶಿಸಿದ್ದಾರೆ. ನುಬಿಯನ್ ತಳಿಯ ಆಡುಗಳು ಉತ್ತಮ ಗುಣಮಟ್ಟದ, ಹೆಚ್ಚಿನ ಬೆಣ್ಣೆಯ ಹಾಲನ್ನು (high-butterfat milk) ಉತ್ಪಾದಿಸುತ್ತವೆ. ಇದನ್ನು ಕುಡಿಯಬಹುದು ಅಥವಾ ಐಸ್ ಕ್ರೀಮ್, ಮೊಸರು, ಚೀಸ್ (cheese) ಮತ್ತು ಬೆಣ್ಣೆಯನ್ನು (butter) ತಯಾರಿಸಲು ಬಳಸಬಹುದು. ಈ ತಳಿಯ ಮೇಕೆಗಳು ತುಂಬಾ ಬಿಸಿಯ ವಾತಾವರಣದಲ್ಲಿಯೂ ವಾಸಿಸುತ್ತವೆ. ಹಾಗೆಯೇ ಇತರ ಡೈರಿ ಮೇಕೆಗಳಿಗಿಂತ ದೀರ್ಘ ಸಂತಾನವೃದ್ಧಿ ಅವಧಿಯನ್ನು ಹೊಂದಿರುತ್ತಾರೆ. ಸಿಂಧ್ ಪ್ರಾಂತ್ಯದಲ್ಲಿ ಕಂಡುಬರುವ ಕಮೋರಿ ತಳಿಯ ಮೇಕೆ ಪಾಕಿಸ್ತಾನದಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ಮೇಕೆ ತಳಿಯಾಗಿದೆ.

ಕೆಲ ದಿನಗಳ ಹಿಂದೆ ಗಂಡು ಮೇಕೆಯೊಂದು ಹಾಲು ನೀಡುತ್ತಿರುವ ವಿಚಿತ್ರ ಘಟನೆ ರಾಜ್ಯದ ಹಾವೇರಿ (Haveri) ಜಿಲ್ಲೆ ಹಾನಗಲ್ (Hanagal) ತಾಲೂಕಿನ ನರೇಗಲ್ ಗ್ರಾಮದಲ್ಲಿ  ಕಂಡು ಬಂದಿತ್ತು. ರೇಗಲ್ ಗ್ರಾಮದ ಚಮನ್ ಶಾವಲಿ ಗಲ್ಲಿಯಲ್ಲಿರುವ ಸಾದಿಕ್ ಮಕಾನದಾರ್  ಎಂಬುವವರ ಮನೆಯಲ್ಲಿರುವ ಗಂಡುಮೇಕೆ ಹಾಲು ನೀಡುತ್ತಿರುವ ಅಚ್ಚರಿಯ ಘಟನೆ ನಡೆದಿತ್ತು. ಸುಮಾರು ಒಂದೂವರೆ ವರ್ಷದ ಗಂಡು ಮೇಕೆ ಕಳೆದ ಕೆಲ ತಿಂಗಳಿಂದ ಹಾಲು ನೀಡುತ್ತಿದೆ. ಸಾದಿಕ್‌ ಈ ಹಿಂದೆ ಒಂದು ಮೇಕೆ ಸಾಕಿದ್ದರು. ಆ ಮೇಕೆ ಗಂಡು ಮರಿ ಹಾಕಿ ಸಾವನ್ನಪ್ಪಿದೆ. ಅದರ ಮರಿಯಾಗಿರುವ ಈ ಗಂಡು ಮೇಕೆಯನ್ನ ಸಾದಿಕ್ ಮನೆಯವರು ದೇವರಿಗೆ ಅಂತಾ ಬಿಟ್ಟಿದ್ದರು. ಅದು ಈಗ ಹಾಲು ನೀಡುತ್ತಿದೆ. 

Follow Us:
Download App:
  • android
  • ios