ಲಂಡನ್‌/ನವದೆಹಲಿ(ಅ.20): ಜಾಗತಿಕ ಮಟ್ಟದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸೋಮವಾರ ಬೆಳಗ್ಗೆ 4 ಕೋಟಿಯ ಗಡಿ ದಾಟಿದೆ ಎಂದು ವಿಶ್ವದೆಲ್ಲಾ ರಾಷ್ಟ್ರಗಳ ಕೊರೋನಾ ಪೀಡಿತರ ಲೆಕ್ಕ ಇಡುವ ಜಾನ್ಸ್‌ ಹಾಪ್‌ಕಿನ್ಸ್‌ ವಿವಿ ಹೇಳಿದೆ. ಆದರೆ, ಹಲವು ರಾಷ್ಟ್ರಗಳು ಕೊರೋನಾ ಲೆಕ್ಕವನ್ನು ಸರಿಯಾಗಿ ಬಹಿರಂಗಪಡಿಸುತ್ತಿಲ್ಲ. ಸೋಂಕು ಪತ್ತೆ ಪರೀಕ್ಷೆಗೆ ಒಂದೊಂದು ರಾಷ್ಟ್ರ ಒಂದೊಂದು ಮಾನದಂಡ ಅನುಸರಿಸಿದೆ. ಹಲವು ನಾಗರಿಕರಲ್ಲಿ ಕೊರೋನಾ ಸೋಂಕು ಇದ್ದರೂ, ಅವರಲ್ಲಿ ರೋಗ ಲಕ್ಷಣಗಳು ಕಂಡುಬರುತ್ತಿಲ್ಲ. ಹೀಗಾಗಿ, ಪ್ರಪಂಚದಾದ್ಯಂತ ಕೊರೋನಾ ಪೀಡಿತರ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಜಾನ್ಸ್‌ ವಿವಿ ಅಂದಾಜಿಸಿದೆ.

ಇನ್ನು ಇದೇ ವೇಳೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 75.50 ಲಕ್ಷ ದಾಟಿದ್ದರೆ, ಸಾವಿಗೀಡಾದವರ ಒಟ್ಟು ಸಂಖ್ಯೆ 1.14 ಲಕ್ಷದ ಗಡಿ ದಾಟಿದೆ. ಇದರಲ್ಲಿ 66.63 ಲಕ್ಷಕ್ಕಿಂತ ಹೆಚ್ಚು ಮಂದಿ ಕೊರೋನಾ ಗೆದ್ದಿದ್ದು, ಉಳಿದ ಸಕ್ರಿಯ ಸೋಂಕಿತರ ಸಂಖ್ಯೆ 7.72 ಲಕ್ಷ ಅಂದರೆ 8 ಲಕ್ಷಕ್ಕಿಂತ ಕಮ್ಮಿ ಎಂಬುದೇ ಸಮಾಧಾನಕರ.

ಆದರೆ ಯೂರೋಪ್‌ ರಾಷ್ಟ್ರಗಳಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದೊಂದು ವಾರದಲ್ಲಿ ಯೂರೋಪ್‌ ರಾಷ್ಟ್ರಗಳಲ್ಲಿ ಸುಮಾರು 7 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕು ನಿಯಂತ್ರಣಕ್ಕೆ ಹೊಸ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಯೂರೋಪ್‌ನ ರಾಷ್ಟ್ರಗಳು ಮಾಸ್ಕ್‌ ಕಡ್ಡಾಯ, ರೆಸ್ಟೋರೆಂಟ್‌ಗಳ ಮೇಲೆ ನಿರ್ಬಂಧ, ರಾತ್ರಿ ಕಫä್ರ್ಯ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

-----

ದೇಶದಲ್ಲಿ ಕೊರೋನಾ ಅಬ್ಬರ

2020 ಜು. 17 10 ಲಕ್ಷ

2020 ಆ. 06 20 ಲಕ್ಷ

2020 ಆ. 23 30 ಲಕ್ಷ

2020 ಸೆ. 05 40 ಲಕ್ಷ

2020 ಸೆ.16 50 ಲಕ್ಷ

2020 ಸೆ.28 60 ಲಕ್ಷ

2020 ಅ.11 70 ಲಕ್ಷ

2020 19 75 ಲಕ್ಷ