ಖೋಟಾ ನೋಟು ಖದೀಮರ ಹಿಡಿಯಲು ಪೊಲೀಸರಿಗೆ ನೆರವಾದ ಮೇಕೆ, 85 ಲಕ್ಷ ರೂ ನಕಲಿ ಕೆರೆನ್ಸಿ ವಶ!
ಖೋಟಾ ನೋಟು ಪ್ರಿಂಟ್ ಮಾಡಿ ವ್ಯವಹಾರ ನಡೆಸುತ್ತಿದ್ದ ಖದೀಮರ ಗ್ಯಾಂಗ್ ಹಿಡಿಯಲು ಮೇಕೆಯೊಂದು ನೆರವಾದ ಘಟನೆ ಜೈಪುರದಲ್ಲಿ ನಡೆದಿದೆ. ಈ ಮೇಕೆಗಳಿಂದ ಪೊಲೀಸರು 85 ಲಕ್ಷ ರೂ ಮೌಲ್ಯದ ನಕಲಿ ನೋಟು ವಶಕ್ಕೆ ಪಡೆದಿದ್ದಾರೆ.
ಜೈಪುರ(ಆ.22) ಜೈಪುರದಲ್ಲಿ ಖೋಟಾ ನೋಟು ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.ಅದರೂ ಖದೀಮರು ನಿರಾಯಾಸವಾಗಿ ಖೋಟಾ ನೋಡು ವ್ಯವಹಾರ ನಡೆಸುತ್ತಿದ್ದಾರೆ. ಇದರ ನಡುವೆ ಕುಖ್ಯಾತ ಖೋಟಾ ನೋಟು ಖದೀಮರ ಗ್ಯಾಂಗ್ ಸೆರೆ ಹಿಡಿಯಲು ರಾಜಸ್ಥಾನದ ಜೈಪುರ ಪೊಲೀಸರಿಗೆ ಮೇಕೆಗಳು ನೆರವಾದ ಘಟನೆ ನಡೆದಿದೆ. ಈ ಮೇಕೆಗಳಿಂದ ಖೋಟಾ ನೋಡು ಅಡ್ಡಕ್ಕೆ ದಾಳಿ ನೆಡಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಷ್ಟೇ ಅಲ್ಲ ಬಂಧಿತರಿಂದ 85 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಜೈಪುರದಲ್ಲಿ ಶಿವಂ ಸಿಂಗ್ ಹಾಗೂ ಸುರೇಂದ್ರ ಸಿಂಗ್ ಗ್ಯಾಂಗ್ ಖೋಟಾ ನೋಟು ವ್ಯವಹಾರ ನಡೆಸುತ್ತಿತ್ತು. ಆದರೆ ಯಾರ ಕೈಗೂ ಸಿಕ್ಕಿ ಬೀಳದೆ ವ್ಯವಹಾರ ನಡೆಸುತ್ತಿತ್ತು. ನಗದು ವ್ಯವಹಾರಗಳು ಹೆಚ್ಚಾಗಿ ನಡೆಯುವ, ಮುಗ್ದ ಕೃಷಿಕರು, ಹೈನುಗಾರಿಕೆ ನೆಚ್ಚಿಕೊಂಡಿರುವ ರೈತರನ್ನೇ ಈ ಖದೀಮರು ಟಾರ್ಗೆಟ್ ಮಾಡುತ್ತಿದ್ದರು. ಹೀಗೆ ಜೈಪುರ ಹೊರವಲಯದಲ್ಲಿನ ಮೇಕೆ ಸಾಕುವ ರೈತನ ಸಂಪರ್ಕಿಸಿದ ಈ ಖೋಟಾ ನೋಡು ಖದೀಮರು ಮೇಕೆಗೆ ಬೇಡಿಕೆ ಇಟ್ಟಿದ್ದಾರೆ.
ಚಿಕ್ಕೋಡಿಯಲ್ಲಿ ಬರೋಬ್ಬರಿ 1 ಲಕ್ಷ 80 ಸಾವಿರ ರೂ.ಗೆ ಮಾರಾಟವಾದ ಮೇಕೆ!
ಬೆಲೆ ಮಾತುಕತೆ ಅಂತಿಮಗೊಳಿಸಿ 80 ಮೇಕೆಗಳನ್ನು ಒಟ್ಟಿಗೆ ಖರೀದಿಸಲು ಸುರೇಂದ್ರ ಸಿಂಗ್ ಹಾಗೂ ಶಿವಂ ಸಿಂಗ್ ಗ್ಯಾಂಗ್ ಮುಂದಾಗಿದೆ. ಖೋಟಾ ನೋಟು ಮೂಲಕ ಈ ಮೇಕೆಗಳನ್ನು ಖರೀದಿಸಿ, ಬಳಿಕ ಈ ಮೇಕೆಗಳನ್ನು ಮಾರಾಟ ಮಾಡಿ ನಕಲಿ ಹಣವನ್ನು ಅಸಲಿ ಹಣವಾಗಿ ಪರಿವರ್ತಿಸಲು ಪ್ಲಾನ್ ಮಾಡಿದ್ದಾರೆ. ಇದರಂತೆ 80 ಕುರಿಗಳನ್ನು 9ಲಕ್ಷ ರೂಪಾಯಿ ನೀಡಿ ಖರೀದಿಸಿದ್ದಾರೆ. ರೈತನಿಗೆ 9 ಲಕ್ಷ ರೂಪಾಯಿ ನಗದು ಹಣವನ್ನು ನೀಡಿದ್ದಾರೆ. ಈ ಪೈಕಿ 3 ರಿಂದ ನಾಲ್ಕು ಸಾವಿರ ಮೌಲ್ಯದ ನೋಟುಗಳು ಮಾತ್ರ ಅಸಲಿ. ಇನ್ನುಳಿದ ಎಲ್ಲಾ ನೋಟುಗಳು ಸಂಪೂರ್ಣ ನಕಲಿಯಾಗಿತ್ತು.
ಹಣ ನೀಡಿ 80 ಮೇಕೆಗಳನ್ನು ಟ್ರಕ್‌ನಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ಇಷ್ಟು ದುಡ್ಡು ಕೈಯಲ್ಲಿ, ಮನೆಯಲ್ಲಿ ಇಡುವುದಕ್ಕಿಂತ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿಡಲು ರೈತ ಮುಂದಾಗಿದ್ದಾನೆ. ಇದಕ್ಕಾಗಿ ಬ್ಯಾಂಕ್‌ಗೆ ತೆರಳಿದಾಗ ಆಘಾತವಾಗಿದೆ. 9 ಲಕ್ಷ ರೂಪಾಯಿ ನೋಟುಗಳೆಲ್ಲಾ ನಕಲಿ ಅನ್ನೋದು ಗೊತ್ತಾಗಿದೆ. ಆಘಾತಗೊಂಡ ರೈತ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಈ ದೂರು ನೀಡಿದ ಮಾಹಿತಿ ಆಧಾರಲ್ಲಿ ಪೊಲೀಸರು ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಇವರಿಂದ 85 ಲಕ್ಷ ರೂಪಾಯಿ ಮೌಲ್ಯದ ನಕಲಿ ಕರೆನ್ಸಿಯನ್ನು ವಶಪಡಸಿದ್ದಾರೆ.
ಮೇಕೆ ಉಚಿತ …ತೆಗೆದುಕೊಂಡು ಹೋಗಿ ಪ್ಲೀಸ್, ಯಾರು ಈ ರೀತಿ ಡಿಮ್ಯಾಂಡ್ ಮಾಡ್ತಿರೋದು?