Asianet Suvarna News Asianet Suvarna News

ದೈತ್ಯ ನಕ್ಷತ್ರ ಸ್ಫೋಟದ ದೃಶ್ಯ ಸೆರೆ: ಖಗೋಳ ಇತಿಹಾಸದಲ್ಲೇ ಮೊದಲು

ಖಗೋಳ ವಿಜ್ಞಾನದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಶೋಧಕರು ದೂರದರ್ಶಕದ ಸಹಾಯದಿಂದ ಸೂರ‍್ಯನಿಗಿಂತ 10 ಪಟ್ಟು ದೊಡ್ಡದಾದ ದೈತ್ಯಾಕಾರದ ಕೆಂಪು ನಕ್ಷತ್ರವೊಂದು ಸ್ಫೋಟಗೊಂಡು ಚೂರು ಚೂರಾಗುವುದನ್ನು ಸೆರೆಹಿಡಿದಿದ್ದಾರೆ. 

Giant dying star explodes as scientists watch in real time a first for astronomy gvd
Author
Bangalore, First Published Jan 8, 2022, 10:06 AM IST

ನ್ಯೂಯಾರ್ಕ್ (ಜ. 08): ದೈತ್ಯ ನಕ್ಷತ್ರಗಳು ಅವುಗಳ ಅವಧಿ ಮುಗಿದ ನಂತರ ಅವನತಿಯಾಗುವ ಬಗ್ಗೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಖಗೋಳ ವಿಜ್ಞಾನದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಶೋಧಕರು ದೂರದರ್ಶಕದ ಸಹಾಯದಿಂದ ಸೂರ‍್ಯನಿಗಿಂತ 10 ಪಟ್ಟು ದೊಡ್ಡದಾದ ದೈತ್ಯಾಕಾರದ ಕೆಂಪು ನಕ್ಷತ್ರವೊಂದು ಸ್ಫೋಟಗೊಂಡು ಚೂರು ಚೂರಾಗುವುದನ್ನು ಸೆರೆಹಿಡಿದಿದ್ದಾರೆ. 

ಭೂಮಿಯಿಂದ 1.20 ಕೋಟಿ ಬೆಳಕಿನ ವರ್ಷ ದೂರದಲ್ಲಿದ್ದ ನಕ್ಷತ್ರವು ನಾಟಕೀಯ ವಿಧಾನದಲ್ಲಿ ಪ್ರಕಾಶಮಾನವಾಗಿ ಉರಿದು, ಸ್ಪೋಟಗೊಂಡಿದೆ. ನಕ್ಷತ್ರವು ಸ್ಫೋಟಕ್ಕೂ ಮೊದಲು ಸೂರ‍್ಯನಿಗಿಂತ 10 ಪಟ್ಟು ಬೃಹತ್‌ ಪ್ರಮಾಣದಲ್ಲಿತ್ತು.ಅದರಲ್ಲಿದ್ದ ಹೈಡ್ರೋಜನ್‌, ಹೀಲಿಯಂ ಮತ್ತಿತರ ಅನಿಲಗಳನ್ನು ಅಪಾರ ಪ್ರಮಾಣದಲ್ಲಿ ಹೊರಹಾಕಿದ ನಂತರ ಸ್ಪೋಟಗೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Coronavirus in Fruits: ಡ್ರ್ಯಾಗನ್‌ ಫ್ರೂಟ್‌ಗೂ ಕೊರೋನಾ: ಚೀನಾ ಮಾರ್ಕೆಟ್‌ ಬಂದ್‌!

ಈ ನಕ್ಷತ್ರದ ವಿಚಿತ್ರವಾದ ಚಟುವಟಿಕೆಯನ್ನು ಖಗೋಳ ವಿಜ್ಞಾನಿಗಳು ಕಳೆದ 130 ದಿನಗಳ ಹಿಂದಷ್ಟೇ ಪತ್ತೆ ಮಾಡಿದ್ದರು ಎಂದು ವರದಿಯಾಗಿದೆ. ಹವಾಯಿ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್‌ ಫಾರ್‌ ಆಸ್ಟೊರೕನಮಿಯ ಪ್ಯಾನ್‌-ಸ್ಟಾರ್‌ ಟೆಲಿಸ್ಕೋಪ್‌ 2020ರಲ್ಲಿ ಪ್ರಕಾಶಮಾನವಾದ ವಿಕಿರಣವೊಂದನ್ನು ಪತ್ತೆ ಮಾಡಿತ್ತು. ನಂತರ ಇದೇ ಸ್ಥಳದಲ್ಲಿ ನಕ್ಷತ್ರವೊಂದರ ಸ್ಪೋಟವನ್ನು ವಿಜ್ಞಾನಿಗಳು ಕಂಡಿದ್ದರು. ಆಗ ನಕ್ಷತ್ರ ಸುತ್ತಲೂ ವಸ್ತವಿರುವುದನ್ನು ಗುರುತಿಸಿದ್ದರು.

ಚಂದ್ರನಿಗೊಂದು ಸಂಗಾತಿ; ಭೂಮಿಗೆ ಮತ್ತೊಂದು ಮಿನಿ ಉಪಗ್ರಹ
ವಾಷಿಂಗ್ಟನ್‌: ಚಂದ್ರ, ಭೂಮಿಯ ಪಾಲಿಗೆ ಏಕಮಾತ್ರ ನೈಸರ್ಗಿಕ ಉಪಗ್ರಹ. ಆದರೆ ಇದೀಗ ಚಂದ್ರನಿಗೊಂದು ಸಂಗಾತಿ ಸಿಕ್ಕಿದೆ. ಫೆ.15 ರ ರಾತ್ರಿ ಸುಮಾರು 1.9 ರಿಂದ 3.5 ಮೀಟರ್‌ ಸುತ್ತಳತೆ ಇರಬಹುದಾದ ಭೂಮಿಯ 2ನೇ ಚಂದ್ರನನ್ನು ಅಮೆರಿಕದ ಖಗೋಳ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ. ಇದೀಗ ಪತ್ತೆಹಚ್ಚಲಾಗಿರುವ ಉಪಗ್ರಹವು ಕ್ಷುದ್ರಗ್ರಹವಾಗಿದ್ದು, ಭೂಮಿಯ ಗುರುತ್ವ ಬಲಕ್ಕೆ ಸಿಕ್ಕಿದ್ದು, ಅದು ಭೂಮಿಯನ್ನು ಸುತ್ತುತ್ತಿರುವ ಅಂಶವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

Bulli Bai App : ನಾನು ಮಾಡಿದ್ದು ಸರಿಯಾಗೇ ಇತ್ತು ಎಂದ ಬುಲ್ಲಿ ಬಾಯಿ ರೂವಾರಿ!

ಸಾಮಾನ್ಯವಾಗಿ ಕ್ಷುದ್ರಗ್ರಹಗಳು ಇತರ ಗ್ರಹಕಾಯಗಳಂತೆ ಸೂರ್ಯನನ್ನು ಸುತ್ತುತ್ತವೆ. ಆದರೆ ಈ ಕ್ಷುದ್ರಗ್ರಹ ಭೂಮಿಯ ಗುರುತ್ವ ಬಲದ ಪರೀಧಿಯೊಳಗೆ ಬಂದಿರುವುದು ಅಪರೂಪದ ಖಗೋಳ ವಿದ್ಯಮಾನ ಎನ್ನುತ್ತಾರೆ ವಿಜ್ಞಾನಿಗಳು. ನೂತನವಾಗಿ ಪತ್ತೆಯಾಗಿರುವ ಭೂಮಿಯ ಮತ್ತೊಂದು ನೈಸರ್ಗಿಕ ಉಪಗ್ರಹವಾದ 2020 ಸಿಡಿ-3 ಎಂಬ ಮಿನಿ ಚಂದ್ರನು ಸಿ-ಪ್ರಕಾರದ ಕ್ಷುದ್ರ ಗ್ರಹವಾಗಿರಬಹುದು ಎಂದು ವೈರ್ಜೊಕಾಸ್‌ ಎಂಬ ಸಂಶೋಧಕ ಟ್ವೀಟ್‌ ಮಾಡಿದ್ದಾರೆ. ಆದರೆ ಇದು ಭೂಮಿಯ ತಾತ್ಕಾಲಿಕ ಉಪಗ್ರಹವಾಗಿದೆ. ಏಕೆಂದರೆ ಅದು ಇರುವ ಕಕ್ಷೆ ಸ್ಥಿರವಾದುದಲ್ಲ. ಹೀಗಾಗಿ ಅದು ಯಾವುದೇ ಸಮಯದಲ್ಲಿ ಭೂಮಿಯ ಗುರುತ್ವ ಬಲದಿಂದ ದೂರ ಹೋಗಬಹುದು ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios