ಪ್ಯಾರಿಸ್(ಆ. 21)  ಫ್ರಾನ್ಸ್ ಅಧ್ಯಕ್ಷ ಇಮ್ಯಾನುಲ್ ಮಾಕ್ರೋನ್ ಮತ್ತು ಜರ್ಮನಿ ಛಾನ್ಸಲರ್ ಅಂಗೆಲಾ ಮಾರ್ಕೆಲ್ ಭಾರತದ ನಮಸ್ಕಾರದ ಮೂಲಕ ಒಬ್ಬರಿಗೊಬ್ಬರು ಉಭಯಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಉಭಯ ನಾಯಕರು ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಲು ಸೇರಿದ್ದರು.

ಕೊರೋನಾ ಕಾರಣಕ್ಕೆ ಹಸ್ತಲಾಘವ ಮಾಡುವುದನ್ನು ಅನೇಕ ನಾಯಕರು ತ್ಯಜಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ. ಇದೀಗ ಇಬ್ಬರು ಪರಸ್ಪರ ನಮಸ್ಕಾರ ಮಾಡಿಕೊಳ್ಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೂರ್ಯ ನಮಸ್ಕಾರದ ಹತ್ತು ಲಾಭಗಳು

ಭಾರತೀಯರು ಈ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದು ದೇಶದ ಹಿರಿಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ರಾರಾಜಿಸಿದೆ ಎಂದಿದ್ದಾರೆ.  ಒಟ್ಟಿನಲ್ಲಿ  ಕೊರೋನಾ ಎಂಬ ಮಹಮಾರಿ ಜಗತ್ತನ್ನು ಆವರಿಸಿದ ಸಂದರ್ಭದಲ್ಲಿ ಭಾರತದ ಚಿಂತನೆಗಳು ಜಗತ್ತನ್ನೇ ಆವರಿಸುತ್ತಿದೆ.