ಸಂಗಾತಿಯ ಕಾಂಡೋಮ್‌ಗಳಲ್ಲಿ ರಂಧ್ರ ಮಾಡಿದ್ದ ಯುವತಿಗೆ ಜೈಲು ಶಿಕ್ಷೆ!

ನ್ಯಾಯಾಧೀಶರು "ಐತಿಹಾಸಿಕ" ಪ್ರಕರಣವೆಂದು ವಿವರಿಸಿದ ಪ್ರಕರಣದಲ್ಲಿ, ಮಹಿಳೆಯೊಬ್ಬಳು ತನ್ನ ಸಂಗಾತಿಯ ಕಾಂಡೋಮ್‌ಗಳಲ್ಲಿ ಅವನ ಅರಿವಿಲ್ಲದೆ ಅಥವಾ ಒಪ್ಪಿಗೆಯಿಲ್ಲದೆ ರಂಧ್ರಗಳನ್ನು ಮಾಡಿದ್ದಳು. ಈಕೆಯನ್ನು ಕೋರ್ಟ್ ಲೈಂಗಿಕ ದೌರ್ಜನ್ಯದ ಅಪರಾಧಿ ಎಂದು ಕರೆದಿದೆ.
 

German Woman Secretly Poked Holes in Partners Condom sentenced san

ನವದೆಹಲಿ (ಮೇ.6): ಸೆಕ್ಸ್ ಗೆ (Sex) ಒಪ್ಪಿಯಾಗಿದೆ, ಸೆಕ್ಸ್ ಮಾಡಿದ ಬಳಿಕ ಗೆಳೆಯ ಗಾಯಬ್ ಆಗಿಬಿಟ್ಟರೆ ಏನ್ ಮಾಡೋದು.. ಅಂತಾ ಯೋಚನೆ ಮಾಡಿದ ಯುವತಿಯೊಬ್ಬಳು, ಇದಕ್ಕಾಗಿ ಸಖತ್ ಪ್ಲ್ಯಾನ್ ಮಾಡಿದ್ದಳು. ಗೆಳೆಯನಿಗೆ ಗೊತ್ತಿಲ್ಲದೆ ಆತ ತಂದಿದ್ದ ಕಾಂಡಮ್ ನಲ್ಲಿ (condom) ತೂತು ಮಾಡಿದ್ದಳು. ಆದರೆ, ನ್ಯಾಯಾಲಯ (Court) ಮಾತ್ರ ಈಕೆಯನ್ನು ಸುಮ್ಮನೆ ಬಿಟ್ಟಿಲ್ಲ. ಆಕೆಯನ್ನು ಲೈಂಗಿಕ ದೌರ್ಜನ್ಯದ ಅಪರಾಧಿ (guilty of sexual assault) ಎಂದು ಜೈಲು ಶಿಕ್ಷೆ ವಿಧಿಸಿದೆ.

ಈ ಪ್ರಕರಣ ನಡೆದಿರುವುದು ಜರ್ಮನಿಯಲ್ಲಿ. ಪಶ್ಚಿಮ ಜರ್ಮನಿಯ ನ್ಯಾಯಾಲಯ (western Germany ) ಈಕೆಯನ್ನು ತಪ್ಪಿತಸ್ಥರೆಂದು ಘೋಷಣೆ ಮಾಡಿದೆ. ತನ್ನ ಸಂಗಾತಿಯ ಕಾಂಡಮ್ ಗಳಲ್ಲಿ ಉದ್ದೇಶಪೂರ್ವಕವಾಗಿ ರಂಧ್ರಮಾಡಿದ್ದಕ್ಕಾಗಿ ಆರು ತಿಂಗಳ ಅಮಾನತಿಲ್ಲಿರುವ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ ಎಂದು ಜರ್ಮನಿಯ ಮಾಧ್ಯಮಗಳು ವರದಿ ಮಾಡಿದೆ.
ತೀರ್ಪನ್ನು ಪ್ರಕಟಿಸುವ ವೇಳೆ, ನ್ಯಾಯಾಧೀಶರು ಅಸಾಮಾನ್ಯ ಪ್ರಕರಣವು ಜರ್ಮನಿಯ ಕಾನೂನು ಇತಿಹಾಸ ಪುಸ್ತಕಗಳಲ್ಲಿ ಒಂದಾಗಿದೆ ಎಂದು ಹೇಳಿದರು . ಇದು ಕ್ರಿಮಿನಲ್ ಕಳ್ಳತನದ ನಿದರ್ಶನ, ಆದರೆ, ಈ ಬಾರಿ ಅದು ಮಹಿಳೆಯಿಂದ ಆಗಿದೆ ಎಂದು ಕೋರ್ಟ್ ಹೇಳಿದೆ.

ಪಶ್ಚಿಮ ಜರ್ಮನಿಯ ನಗರವಾದ ಬೈಲೆಫೆಲ್ಡ್‌ನಲ್ಲಿರುವ ಪ್ರಾದೇಶಿಕ ನ್ಯಾಯಾಲಯದಲ್ಲಿ ಈ ತೀರ್ಪನ್ನು ನೀಡಲಾಯಿತು ಎಂದು ಸ್ಥಳೀಯ ಪತ್ರಿಕೆ ನ್ಯೂ ವೆಸ್ಟ್‌ಫಾಲಿಸ್ಚೆ ಮತ್ತು ಬಿಲ್ಡ್ ಪತ್ರಿಕೆ ಇದನ್ನು ಬುಧವಾರ ವರದಿ ಮಾಡಿದೆ. ಈ ಪ್ರಕರಣವು 39 ವರ್ಷದ ಮಹಿಳೆಗೆ ಸಂಬಂಧಿಸಿದ್ದಾರೆ. ಅವರು 42 ವರ್ಷ ವಯಸ್ಸಿನ ಪುರುಷನೊಂದಿಗೆ ಸ್ನೇಹ ಹಾಗೂ ಸೆಕ್ಸ್ ನ ಸಂಬಂಧವನ್ನೂ ಹೊಂದಿದ್ದರು. 2021ರ ಆರಂಭದಲ್ಲಿ ಆನ್ ಲೈನ್ ನಲ್ಲಿ ಭೇಟಿಯಾಗಿದ್ದ ಇವರು ಬಳಿಕ ಮಾತುಕತೆ ಆರಂಭಿಸಿ ಅದನ್ನು ಲೈಂಗಿಕ ಸಂಬಂಧದವರೆಗೆ ಬೆಳೆಸಿದ್ದರು.

ವರದಿಗಳ ಪ್ರಕಾರ, ಮಹಿಳೆ ತನ್ನ ಸಂಗಾತಿಯ ಬಗ್ಗೆ ಆಳವಾದ ಪ್ರೀತಿ ಹೊಂದಿದ್ದಳು. ಆದರೆ ಅವರಿಗೆ ಈ ಸಂಬಂಧದಲ್ಲಿರಲು ಇಷ್ಟವಿಲ್ಲ ಎನ್ನುವುದನ್ನು ಆಕೆ ಅರಿತಿದ್ದಳು. 39 ವರ್ಷದ ಮಹಿಳೆ ನಂತರ ರಹಸ್ಯವಾಗಿ ತನ್ನ ಸಂಗಾತಿ ತನ್ನ ನೈಟ್‌ಸ್ಟ್ಯಾಂಡ್‌ನಲ್ಲಿ ಇಟ್ಟುಕೊಂಡಿದ್ದ ಕಾಂಡಮ್ ಗಳ ಪ್ಯಾಕ್ ನಲ್ಲಿದ್ದ ಒಂದೊಂದೆ ಕಾಂಡಮ್ ಗೆ ರಂಧ್ರ ಮಾಡಿದ್ದಳು. ಆ ಮೂಲಕ ಆತನಿಂದ ಗರ್ಭಿಣಿಯಾಗಬೇಕು ಎಂದು ಬಯಸಿದ್ದಳಾದರೂ ಅದರಲ್ಲಿ ಆಕೆ ವಿಫಲವಾಗಿದ್ದಾರೆ ಎಂದು ವರದಿಯಾಗಿದೆ.

ಇದರ ನಡುವೆಯೂ 42 ವರ್ಷದ ಪುರುಷನಿಗೆ ವಾಟ್ಸ್ ಆಪ್ ನಲ್ಲಿ ಮೆಸೇಜ್ ಮಾಡಿದ್ದ ಆಕೆ, ತಾನು ಗರ್ಭಿಣಿಯಾಗಿರಬಹುದು ಎಂದು ಹೇಳಿದ್ದಾಳೆ. ಅಲ್ಲದೆ, ಉದ್ದೇಶಪೂರ್ವಕವಾಗಿ ನಾನು ಕಾಂಡಮ್ ನಲ್ಲಿ ರಂಧ್ರವನ್ನೂ ಮಾಡಿದ್ದೆ ಎಂದು ತಿಳಿಸಿದ್ದಾಳೆ. ಇದರಿಂದ ಸಿಟ್ಟಾದ ಪುರುಷ ಆಕೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದ. ಆತ ನನ್ನನ್ನು ಬಿಟ್ಟುಹೋಗಬಹುದೆಂಬ ಭಯದಿಂದ ತಾನಿ ಹೀಗೆ ಮಾಡಿದ್ದಾಗಿ ಯುವತಿ ಒಪ್ಪಿಕೊಂಡಿದ್ದಾಳೆ.

ಈ ಹಕ್ಕಿಗೂ ಅದೆಂಥಾ ಜವಾಬ್ದಾರಿ: ತನ್ನ ಹೆಣ್ಣಿಗೆ ಆಹಾರ ತಂದು ತಿನ್ನಿಸುವ ಗಂಡು ಹಾರ್ನ್‌ಬಿಲ್‌

ಈ ಪ್ರಕರಣದಲ್ಲಿ ಅಪರಾಧ ಎಸಗಲಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಮತ್ತು ನ್ಯಾಯಾಲಯವು ಒಪ್ಪಿಕೊಂಡರೂ, 39 ವರ್ಷ ವಯಸ್ಸಿನವರ ವಿರುದ್ಧ ಯಾವ ನಿರ್ದಿಷ್ಟ ಆರೋಪಗಳನ್ನು ವಿಧಿಸಬೇಕೆಂದು ಆರಂಭದಲ್ಲಿ ಯಾರಿಗೂ ತಿಳಿದಿರಲಿಲ್ಲ. "ನಾವು ಇಂದು ಇಲ್ಲಿ ಕಾನೂನು ಇತಿಹಾಸವನ್ನು ಬರೆದಿದ್ದೇವೆ" ಎಂದು ನ್ಯಾಯಾಧೀಶ ಆಸ್ಟ್ರಿಡ್ ಸಲೆವ್ಸ್ಕಿ ನ್ಯಾಯಾಲಯದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಫೈರ್‌ ಬುಲ್ ಫೆಸ್ಟಿವಲ್‌: ಯುವಕನ ಎತ್ತಿ ಬಿಸಾಕಿದ ಹೋರಿ, ವಿಡಿಯೋ ವೈರಲ್

ಇದನ್ನು ರೇಪ್ ಎನ್ನುವುದಕ್ಕಿಂತ ಲೈಂಗಿಕ ದೌರ್ಜನ್ಯದ ಅಪರಾಧಿ ಎಂದು ಕರೆಯುವುದೇ ಸೂಕ್ತ ಎಂದು ನ್ಯಾಯಾಧೀಶರು ಹೇಳಿದದ್ದಾರೆ. ಇದನ್ನು ಕ್ರಿಮಿನಲ್ ಬುದ್ಧಿನ ಕಳ್ಳತನ ಎಂದೂ ಹೇಳಬಹುದಾಗಿದೆ. ತನ್ನ ಸಂಗಾತಿಗೆ ಗೊತ್ತಿಲ್ಲದೆ, ಕಾಂಡಮ್ ನಲ್ಲಿ ರಂಧ್ರ ಮಾಡುವುದು ಕೂಡ ಕಳ್ಳತನ ಎನಿಸಿಕೊಳ್ಳುತ್ತದೆ ಎಂದ್ದಾರೆ.

Latest Videos
Follow Us:
Download App:
  • android
  • ios