ಕಣ್ಣು ಸ್ಕ್ಯಾನ್ ಮಾಡಿ ಕೊರೋನಾ ಪತ್ತೆ ಹಚ್ಚುವ ಆ್ಯಪ್ ಅಭಿವೃದ್ಧಿ; 3 ನಿಮಿಷದಲ್ಲಿ ರಿಸಲ್ಟ್!

  • ಕಣ್ಣು ಸ್ಕ್ಯಾನ್ ಮಾಡಿ ಕೊರೋನಾ ಪತ್ತೆ ಹಚ್ಚುವ ಆ್ಯಪ್
  • ಫೋನ್‌ನಲ್ಲಿ ತೆಗೆದ ಕಣ್ಣಿನ ಫೋಟೋ ಕೂಡ ಸಾಕು
  • 3 ನಿಮಿಷದಲ್ಲಿ ಬರುತ್ತೆ ಕೊರೋನಾ ಫಲಿತಾಂಶ
     
German Company Develops Coronavirus Eye Scan Test app with just three minutes to identify disease ckm

ಮ್ಯೂನಿಚ್(ಮೇ.17): ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಪರೀಕ್ಷಾ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದೆ. ಇನ್ನು RT-PCR, ರ್ಯಾಪಿಡಿ ಟೆಸ್ಟ್ ಕಿಟ್ ಸೇರಿದಂತೆ ಕೆಲ ಪರೀಕ್ಷಾ ವಿಧಾನಗಳ ಕೊರೋನಾ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.  ಇದರ ಜೊತೆಗೆ ಎಕ್ಸ್‌ ರೇ, ಸಿಟಿ ಸ್ಕ್ಯಾನ್ ಕೂಡ ಬಳಸಲಾಗುತ್ತೆ.  ಕೊರೋನಾ ಪತ್ತೆ ನಿಖರವಾಗಿ ತಿಳಿಯಲು RT-PCR ಪರೀಕ್ಷೆ ಮುಖ್ಯವಾಗಿದೆ. ಆದರೆ ಈ ಎಲ್ಲಾ ಪರೀಕ್ಷೆಗಳು ನಿಗದಿತ ಸಮಯ ತೆಗೆದುಕೊಳ್ಳುತ್ತದೆ. ಒಂದು ದಿನದಿಂದ ಗರಿಷ್ಠ 3 ದಿನದವರೆಗೂ ಫಲಿತಾಂಶ ಬರಲು ಕಾಯಬೇಕು. ಆದರೆ ಈ ಸಮಸ್ಯೆಗಳಿಗೆ ಮುಕ್ತಿ ನೀಡಲು ಇದೀಗ ಕಣ್ಣಿನ ಸ್ಕ್ಯಾನ್ ಮೂಲಕ ಕೊರೋನಾ ಪತ್ತೆ ಹಚ್ಚುವ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ.

ಹೊಸ ರೂಪಾಂತರಿ ಪತ್ತೆಯಾದ ದೇಶದ ಜೊತೆ ವೈರಸ್ ಹೆಸರು ಜೋಡಿಸುವುದಿಲ್ಲ; WHO ಸ್ಪಷ್ಟನೆ!.

ಜರ್ಮನಿಯ ಮ್ಯೂನಿಚ್ ಮೂಲದ ಸೆಮಿಕ್ ಆರ್‌ಎಫ್ ಕಂಪನಿ ಈ ಆ್ಯಪ್ ಅಭಿವೃದ್ಧಿ ಪಡಿಸಿದೆ. ಈ ಆ್ಯಪ್ ವಿಶೇಷತೆ ಅಂದರೆ ಮೊಬೈಲ್‌ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಸಾಕು, ನಿಮ್ಮ ಕಣ್ಣನ್ನು ಈ ಆ್ಯಪ್ ಮೂಲಕ ಸ್ಕಾನ್ ಮಾಡಿದರೆ ಪರೀಕ್ಷೆ ಮುಗಿಯಿತು. 3 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೆಸೇಜ್ ಒಂದು ಬರಲಿದೆ. ಈ ಫಲಿತಾಂಶದಲ್ಲಿ ಕೊರೋನಾ ಪಾಸಿಟೀವ್ ಅಥವಾ ನೆಗಟೀವ್ ತಿಳಿಸಲಿದೆ. ಜೊತೆಗೆ ಬಿಪಿ, ಪಲ್ಸ್ ರೇಟ್, ಟೆಂಪರೇಚರ್ ಸೇರಿದಂತೆ ಪ್ರಮುಖ ಮಾಹಿತಿಗಳು ಲಭ್ಯವಾಗಲಿದೆ.

ಕೊರೋನಾ ಕಾಟ: ಎಲ್ಲ ಪ್ರಾಥ​ಮಿಕ ಆರೋಗ್ಯ ಕೇಂದ್ರ​ದಲ್ಲಿ RAT ಟೆಸ್ಟ್‌

ಮ್ಯೂನಿಚ್ ಮೂಲದ ಕಂಪನಿ ಈ ಆ್ಯಪನ್ನು ಅಮೆರಿಕ ಸಹದ್ಯೋಗಿಗಳಿ ಜೊತೆ ಸೇರಿ ಅಭಿವೃದ್ಧಿಪಡಿಸಿದೆ. ಶೇಕಡಾ 95 ರಷ್ಟು ನಿಖರವಾಗಿ ಫಲಿತಾಂಶ ನೀಡಲಿದೆ. ಸದ್ಯ ಈ ಆ್ಯಪ್‌ಗೆ ಅನುಮೋದನೆ ಸಿಗಬೇಕಿದೆ. ಮುಂದಿನ ತಿಂಗಳ ಅಂತ್ಯಕ್ಕೆ ನೂತನ ಆ್ಯಪ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಸೆಮಿಕ್ ಆರ್‌ಎಫ್ ಕಂಪನಿ ವ್ಯವಸ್ಥಾಪ ನಿರ್ದೇಶಕ ವೋಲ್ಪ್‌ಗ್ಯಾಂಗ್ ಗ್ರುಬರ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios