ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ 'ಕಚ್ಚೆ' ಹರಿದುಕೊಂಡು ಪರದಾಡಿದ ಗಾಂಜಾ ವ್ಯಸನಿ!
ಗಾಂಜಾ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹಸುವಿನಿಂದಲೇ ಘಾಸಿಗೊಂಡ ಘಟನೆ ನಡೆದಿದೆ. ಈ ವ್ಯಕ್ತಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಾಮಾನ್ಯವಾಗಿ ಹಸುಗಳನ್ನು ನಾವೆಲ್ಲರೂ ದೇವರಂತೆ ಪೂಜಿಸುವ ಹಸುವಿನ ಮೇಲೆ ಕಾಮುಕನೊಬ್ಬ ಗಾಂಜಾ ಸೇವನೆ ಮಾಡಿದ ಅಮಲಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ, ಹಸು ಆ ವ್ಯಕ್ತಿಯನ್ನು ತೀವ್ರವಾಗಿ ಘಾಸಿಗೊಳಿಸಿದ ಘಟನೆ ನಡೆದಿದೆ.
ರಷ್ಯಾದಿಂದ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿ ಕಾರಿನಲ್ಲಿ ಬೆತ್ತಲೆಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದನು. ಇದನ್ನು ನೋಡಿದ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ, ಈ ವೇಳೆ ತನಗೆ ಚರ್ಮದ ಅಲರ್ಜಿಯಿದ್ದು, ಬಿಸಿಲನ್ನು ಕಾಯಿಸಲು ತಾನು ಬೆತ್ತಲೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ನಂತರ, ಥಾಯ್ ಪೊಲೀಸರು ಆತನನ್ನು ಬಿಡುಗಡೆ ಮಾಡಿದ್ದಾರೆ. ನಂತರ ಆತ ಕಾಡಂಚಿನಲ್ಲಿ ಮೇಯಲು ಕಟ್ಟಿ ಹಾಕಿದ್ದ ಹಸುವಿನ ಮೇಲೆ ಅತ್ಯಾಚಾರ ಮಾಡಲು ಹೋಗಿದ್ದಾನೆ. ಆದರೆ, ಹಸು ಅಪರಿಚಿತ ಬಂದು ತನಗೇನೋ ಮಾಡುತ್ತಿದ್ದಾನೆ ಎಂದರಿತು ಆತನ ಮೇಲೆ ದಾಳಿ ಮಾಡಿದೆ.
ಬೆಂಗಳೂರು ವಿದ್ಯಾರ್ಥಿನಿ ರೇಪ್ ಕೇಸ್‌ಗೆ ಟ್ವಿಸ್ಟ್; ಬೈಕ್‌ನಲ್ಲಿ ಡ್ರಾಪ್ ಕೊಡೋದಾಗಿ ಶೆಡ್‌ಗೆ ಕರೆದೊಯ್ದ ಕಾಮುಕ
ಕಾರಿನಲ್ಲಿ ಬೆತ್ತಲೆಯಾಗಿ ಹೋಗುತ್ತಿದ್ದ ವ್ಯಕ್ತಿ ಹಸುವಿನ ಕರುಗಳು ಕಾಣಿಸಿಕೊಂಡಿವೆ. ಈ ವೇಳೆ ಮೊದಲು ರಸ್ತೆಯ ಬಳಿಯಿದ್ದ ಕರುಗಳ ಜೊತೆಗೆ ಆಟವಾಡಲು ಹೋಗಿದ್ದಾನೆ. ಅಲ್ಲಿ ಬೆತ್ತಲೆಯಾಗಿದ್ದ ವ್ಯಕ್ತಿಯ ವರ್ತನೆಯಿಂದ ಹಸು ಬೆದರಿದ್ದು, ಆತನನ್ನು ತಿವಿಯಲು ಹಗ್ಗ ಬಿಚ್ಚಿಕೊಂಡು ಬರಲು ಯತ್ನಿಸಿದೆ. ಆದರೆ, ಹಗ್ಗ ಕಟ್ಟಿದ್ದರಿಂದ ಅದು ಸಾಧ್ಯವಾಗಿಲ್ಲ. ನಂತರ ಈತ ಹಸುವಿನ ಬಳಿ ಹೋಗಿದ್ದಾನೆ. ಅಲ್ಲಿ ಗಾಂಜಾದ ಮತ್ತಿನಲ್ಲಿ ಮರಕ್ಕೆ ಕಟ್ಟಿಹಾಕಿದ್ದ ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಈತ ತನ್ನ ಕರುಗಳಿಗೆ ಹಾನಿ ಮಾಡಿ ಬಂದಿದ್ದಾನೆಂಬ ಕೋಪದಿಂದ ದಾಳಿ ಮಾಡಿದೆ.
ಇನ್ನು ಹಸುವಿನ ದಾಳಿಯಿಂದ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದುದನ್ನು ನೋಡಿದ ಸ್ಥಳೀಯರು ಪುನಃ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಜೊತೆಗೆ ವೈದ್ಯರನ್ನೂ ಕರೆದುತಂದಿದ್ದರು. ನಂತರ, ಹಸುವಿನ ದಾಳಿಗೆ ಸಿಕ್ಕು ಒದ್ದಾಡುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ, ಅತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಪೊಲೀಸರು ಆತನ ಕಾರನ್ನು ಪರಿಶೀಲನೆ ಮಾಡಿದಾಗ ಗಾಂಜಾ ಪ್ಯಾಕೆಟ್‌ಗಳು ಹಾಗೂ ರಷ್ಯಾದ ಪಾಸ್‌ಪೋರ್ಟ್ ಇರುವುದು ಕಂಡುಬಂದಿದೆ. ಗಾಂಜಾ ಮತ್ತಿನಲ್ಲಿ ಹಸುವಿನ ಬಳಿ ಹೋಗಿ ದಾಳಿಗೆ ಒಳಗಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಪಿಕಪ್ ವ್ಯಾನ್ ಬಸ್ ಮಧ್ಯೆ ಭೀಕರ ಅಪಘಾತ: 10 ಜನರ ದಾರುಣ ಸಾವು
ಹಸುವಿನ ದಾಳಿಗೆ ಸಿಲುಕಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಸ್ಥಳೀಯ ಬಾನ್ ನಾ ಡೋಮ್ ಫೌಂಡೇಶನ್‌ನ ಅರೆವೈದ್ಯಕೀಯ ಸಿಬ್ಬಂದಿ, ಇವರು ಹಸುವಿನ ಮೇಲೆ ಅತ್ಯಾಚಾರ ಪ್ರಯತ್ನ ಮಾಡಿರಬಹುದು. ಹೀಗಾಗಿ, ಹಸು ಆತನ ಮೇಲೆ ದಾಳಿ ಮಾಡಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಹಸು ದಾಳಿ ಮಾಡಿ ತಿವಿಯುವಾಗ ಆತ ಬೆತ್ತಲೆಯಾಗಿದ್ದರಿಂದ ಅವನ ವೃಷಣ ಭಾಗ, ಹಿಂಭಾಗಕ್ಕೂ ಗಾಯಗಳಾಗಿವೆ. ದೇಹದ ಇತರೆ ಭಾಗಗಳಲ್ಲಿಯೂ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಈ ಘಟನೆ ಥೈಲ್ಯಾಂಡ್‌ನ ಸೂರತ್ ಥಾನಿ ಎಂಬ ಗ್ರಾಮದಲ್ಲಿ ನಡೆದಿದ್ದು, ಅಲ್ಲಿನ ಸ್ಥಳೀಯರು ವಿಡಿಯೋ ಹಾಗೂ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈಗ ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ, ಈತ ಅತ್ಯಾಚಾರ ಮಾಡಿದ್ದಾನೆಯೋ ಅಥವಾ ಇಲ್ಲವೋ ಎಂಬುದು ಖಚಿತವಾಗಿ ತಿಳಿದುಬಂದಿಲ್ಲ ಎಂದು ಮೇಲ್ ಆನ್‌ಲೈನ್ (Mailonline) ಎಂಬ ವೆಬ್‌ಸೈಟ್ ಪ್ರಕಟಿಸಿದೆ.