ಜಿ7 ಶೃಂಗಸಭೆಗೆ ಕೆನಡಾ ಪ್ರಧಾನಿ, ಮೋದಿಗೆ ಆಹ್ವಾನ ನೀಡಿರುವುದು ಖಲಿಸ್ತಾನಿ ಉಗ್ರರ ಕಣ್ಣು ಕೆಂಪಾಗಿಸಿದೆ. ತೀವ್ರ ಆಕ್ರೋಶ ಹೊರಹಾಕಿರುವ ಖಲಿಸ್ತಾನಿ ಉಗ್ರರು ಇದೀಗ ಪ್ರಧಾನಿ ಮೋದಿ ಮೇಲೆ ದಾಳಿಗೆ ಸಂಚು ರೂಪಿಸಿರುವುದಾಗಿ ಕೆನಡಾ ಪತ್ರಕರ್ತ ಬಹಿರಂಗಪಡಿಸಿದ್ದಾರೆ.

ಕೆನಡಾ(ಜೂ.08) ಜಿ7 ಶೃಂಗಸಭೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ಕೆನಾಡದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಮೋದಿಗೆ ಆಹ್ವಾನ ನೀಡಿರುವುದು ಯಾಕೆ ಎಂದು ಖಲಿಸ್ತಾನಿ ಉಗ್ರ ಸಂಘಟನೆ ಸದಸ್ಯರು ಸೇರಿದಂತೆ ಹಲವರು ಕೆನಡಾ ಪ್ರಧಾನಿ ಪ್ರಶ್ನಿಸಿದ್ದಾರೆ. ಇದರ ನಡುವೆ ಕೆನಡಾ ತನಿಖಾ ಪತ್ರಕರ್ತ ಮೋಚಾ ಬೆಜಿರ್ಗಾನ್ ಸ್ಪೋಟಕ ಮಾಹಿತಿ ಬಹಿರಂಗಡಿಸಿದ್ದಾರೆ. ಖಲಿಸ್ತಾನಿ ಹೋರಾಟ, ಖಲಿಸ್ತಾನಿ ನಡೆ ಕುರಿತು ಸತತ ವರದಿ ನೀಡುತ್ತಿದ್ದ ಪತ್ರಕರ್ತ ಮೋಚಾ ಬೆರ್ಜಿಗಾನ್ ಮೇಲೆ ಖಲಿಸ್ತಾನಿಗಳು ದಾಳಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಖಲಿಸ್ತಾನಿಗಳ ಮತ್ತೊಂದು ದಾಳಿ ಪ್ಲಾನ್ ಕುರಿತು ಮೋಚಾ ಬೆರ್ಜಿಗಾನ್ ಬಹಿರಂಗಪಡಿಸಿದ್ದಾರೆ. ಜಿ7 ಶೃಂಗಸಭೆಗೆ ಆಗಮಿಸುತ್ತಿರುವ ಮೋದಿಯನ್ನು ಹತ್ಯೆ ಮಾಡಬೇಕು ಎಂದು ಖಲಿಸ್ತಾನಿಗಳು ಘೋಷಣೆ ಕೂಗುತ್ತಿರುವುದಾಗಿ ಪ್ರತರ್ತ ಹೇಳಿದ್ದಾರೆ.

ಖಲಿಸ್ತಾನಿ ಪ್ರತಿಭಟನೆಗಳನ್ನು ದಾಖಲಿಸುವ ಕೆನಡಾದ ತನಿಖಾ ಪತ್ರಕರ್ತ ಮೋಚಾ ಬೆಜಿರ್ಗನ್, ಭಾರತ ಸರ್ಕಾರದ ವಿರುದ್ಧ ಬೆದರಿಕೆ ಹಾಕುತ್ತಿರುವ ಖಲಿಸ್ತಾನಿ ಉಗ್ರಗಾಮಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ಜಿ7 ಶೃಂಗಸಭೆಗೆ ಆಹ್ವಾನಿಸಿರುವುದನ್ನು ರದ್ದುಗೊಳಿಸುವಂತೆ ಹೊಸ ಪ್ರಧಾನಿ ಮಾರ್ಕ್ ಕಾರ್ನಿ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದ್ದಾರೆ.ಎರಡೂ ದೇಶಗಳ ನಡುವಿನ ಉದ್ವಿಗ್ನತೆಯ ಹೊರತಾಗಿಯೂ, ಕಾರ್ನಿ ಪ್ರಧಾನಿ ಮೋದಿಯವರನ್ನು ಜಿ7 ಶೃಂಗಸಭೆಗೆ ಆಹ್ವಾನಿಸಿರುವುದರಿಂದ ಸಂಬಂಧಗಳು ಸುಧಾರಿಸಬಹುದು ಎಂದು ಬೆಜಿರ್ಗನ್ ಹೇಳಿದ್ದಾರೆ.

ಇಂದಿರಾ ಹತ್ಯೆ ರೀತಿ ಮೋದಿ ಹತ್ಯೆ

“ಖಲಿಸ್ತಾನಿ ಉಗ್ರಗಾಮಿ ಚಳುವಳಿಯನ್ನು ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಮುನ್ನಡೆಸುತ್ತಿದೆ. ಅವರು ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದಾರೆ. ಆದರೆ ಕೆನಡಾದಲ್ಲಿ ನೆಲೆಸಿರುವ ವಿಶ್ವ ಸಿಖ್ ಸಂಸ್ಥೆಯಂತಹ ದೊಡ್ಡ ರಾಜಕೀಯ ಸಂಘಟನೆಗಳಿವೆ. ಅವರು ಕೆನಡಾದಲ್ಲಿ ರಾಜಕೀಯವಾಗಿ ಬೆಂಬಲ ನೀಡುತ್ತಾರೆ. ಕೆನಡಾ ಮತ್ತು ಭಾರತದ ನಡುವಿನ ಉದ್ವಿಗ್ನತೆಯಿಂದಾಗಿ, ಇದು ಅತ್ಯಂತ ರಾಜಕೀಯ ವಿಷಯವಾಗಿದೆ ಎಂದು ಬೆರ್ಜಿಗಾನ್ ಹೇಳಿದ್ದಾರೆ. ಈ ಜನರು ಇಂದಿರಾ ಗಾಂಧಿಯವರ ಹಂತಕರನ್ನು ಹೊಗಳುತ್ತಿದ್ದಾರೆ. ಜಿ7 ನಲ್ಲಿ ಪಾಲ್ಗೊಳ್ಳುವ ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡುವುದಾಗಿ ಹೇಳುತ್ತಿದ್ದಾರೆ. ಇಂದಿರಾ ಗಾಂಧಿ ಹತ್ಯೆ ಮಾಡಿದ ಹಂತಕರನ್ನು ತಮ್ಮ ಪೂರ್ವಜರು ಎಂದು ಉಲ್ಲೇಖಿಸುತ್ತಾರೆ. ನಾವು ಇಂದಿರಾ ಗಾಂಧಿಯವರ ಹಂತಕರ ವಂಶಸ್ಥರು ಎಂದು ಹೇಳುತ್ತಾರೆ ಬೆಜಿರ್ಗನ್ ಹೇಳಿದ್ದಾರೆ.

ಖಲಿಸ್ತಾನಿಗಳಿಂದ ಪತ್ರಕರ್ತ ಮೇಲೆ ದಾಳಿ

ವ್ಯಾಂಕೋವರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಖಲಿಸ್ತಾನಿ ಬೆಂಬಲಿಗರ ಗುಂಪೊಂದು ತನಗೆ ಹಲ್ಲೆ ನಡೆಸಿದೆ ಎಂದು ಬೆರ್ಜಿಗಾನ್ ಹೇಳಿದ್ದಾರೆ. ಖಲಿಸ್ತಾನಿಗಳ ಗುಂಪು ತನ್ನ ಮೇಲೆ ಹಲ್ಲೆ ನಡೆಸಿತ್ತು. ಖಲಿಸ್ತಾನಿಗಳು ಹಿಂಸೆಯನ್ನು ವೈಭವೀಕರಿಸುತ್ತಾರೆ ಎಂದು ಬೆರ್ಜಿಗಾನ್ ಹೇಳಿದ್ದಾರೆ.

ಜಿ7ಗೆ ಹೆಚ್ಚಿನ ಭದ್ರತೆ ಅಗತ್ಯ

ಜಿ7 ಶೃಂಗಸಭೆಗೆ ಹೆಚ್ಚಿನ ಭದ್ರತೆ ಅಗತ್ಯವಿದೆ ಎಂದು ಬೆರ್ಜಿಗಾನ್ ಹೇಳಿದ್ದಾರೆ. ಮಿಲಿಟರಿ ಹೆಲಿಕಾಪ್ಟರ್‌ಗಳು ಎಲ್ಲೆಡೆ ಹಾರುತ್ತಿವೆ. ಇದು ಪೊಲೀಸ್ ಸಂಪನ್ಮೂಲಗಳ ಪ್ರಮುಖ ಸಜ್ಜುಗೊಳಿಸುವಿಕೆಯಾಗಿದೆ. ಪ್ರಧಾನಿ ಮೋದಿ ಜೊತೆಗೆ ಹಲವು ವಿಶ್ವನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದ್ದರಿಂದ ಭದ್ರತೆ ಉನ್ನತ ದರ್ಜೆಯದ್ದಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಕ್ಯಾಲ್ಗರಿ ಪೊಲೀಸರು ವಾರಗಳವರೆಗೆ ತಮ್ಮ ಅಧಿಕಾರಿಗಳಿಗೆ ಬೆಂಗಾವಲು ತರಬೇತಿಯನ್ನು ಆಯೋಜಿಸುತ್ತಿದ್ದಾರೆ, ಸ್ಥಳೀಯ ಪೊಲೀಸರು ಸಿದ್ಧರಾಗಿದ್ದಾರೆ. ಬಹಳಷ್ಟು ತರಬೇತಿ ನಡೆಯುತ್ತಿದೆ. ಯಾರಿಗೂ ಹಾನಿಯಾಗಲು ಅವರು ಬಿಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬೆರ್ಜಿಗಾನ್ ಹೇಳಿದ್ದಾರೆ.