ಲಂಡನ್(ಮೇ.14): ಸಾಲ ಮರುಪಾವತಿ ಮಾಡದೇ ವಿದೇಶಕ್ಕೆ ಹಾರಿ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಮತ್ತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಭಾರತದ ಬ್ಯಾಂಕ್‌ಗಳಿಂದ ಬರೋಬ್ಬರಿ 9,000 ಕೋಟಿ ರೂಪಾಯಿ ವಂಚನೆ ಆರೋಪ ಹೊತ್ತಿರುವ ವಿಜಯ್ ಮಲ್ಯ ಲಂಡನ್‌ನಲ್ಲಿ ನೆಲೆಸಿದ್ದಾರೆ. ಜೊತೆಗೆ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಇತ್ತ ಕೇಂದ್ರ ಸರ್ಕಾರ ಕೊರೋನಾ ವೈರಸ್‌ನಿಂದ ಕುಸಿದ ಆರ್ಥಿಕತೆಗೆ ಚೇತರಿಕೆ ನೀಡಲು 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಇದೀಗ ಮಲ್ಯ ತಾನು ಎಲ್ಲಾ ಸಾಲ ಮರುಪಾವತಿಸಲು ಸಿದ್ದ ಇಷ್ಟೇ ಅಲ್ಲ ತನ್ನ ಮೇಲಿನ ಪ್ರಕರಣಗಳಿಗೆ ಅಂತ್ಯ ಹಾಡಲು ಮನವಿ ಮಾಡಿದ್ದಾರೆ. 

ಚೋಕ್ಸಿ, ಮಲ್ಯ ಸೇರಿ 50 ಸುಸ್ತಿದಾರರ 68 ಸಾವಿರ ಕೋಟಿ ರೂ ಸಾಲ ‘ಮನ್ನಾ’!

ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಯೋಜನೆಗೆ ಅಭಿನಂದನೆ ಸಲ್ಲಿಸಿರುವ ಮಲ್ಯ, ತಾನು ಎಲ್ಲಾ ಸಾಲ ಮರುಪಾವತಿಸಲು ಸಿದ್ದನಿದ್ದೇನೆ. ತನ್ನ ಸಾಲ ಮೊತ್ತವನ್ನು ಸ್ವೀಕರಿಸಿ, ತನ್ನ ಮೇಲಿನ ಕೇಸ್‌ ಕೈಬಿಡಲು ಮನವಿ ಮಾಡಿದ್ದಾರೆ. ಈ ಕುರಿತು ತಮ್ಮ ಅಧೀಕೃತ ಟ್ವಿಟರ್ ಖಾತೆಯಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ನನಗೆ ಕೊಟ್ಟ ಸಾಲ ತೆಗೆದುಕೊಳ್ಳಿ, ಕೊರೋನಾ ಸಮರಕ್ಕೆ ಬಳಸಿ: ಮತ್ತೆ ಮಲ್ಯ ಮನವಿ!

ಕೊರೋನಾ ವೈರಸ್ ಹೊಡೆತದಿಂದ ಚೇತರಿಸಿಕೊಳ್ಳಲು 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ನಿರ್ಧಾರಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ. ಅವರು ಎಷ್ಟು ಬೇಕಾದರೂ ಹಣ ಪ್ರಿಂಟ್ ಮಾಡಬಹುದು. ಆದರೆ ಸಣ್ಣ ಕಾಣಿಕೆಯಾಗಿರುವ ನನ್ನ ಸಾಲ ಮರುಪಾವತಿ ಶೇಕಡಾ 100 ರಷ್ಟು ಮಾಡಲು ನಾನು ತಯಾರಿದ್ದೇನೆ. ಆದರೆ ನನ್ನ ಮನವಿಯನ್ನು ಕಡೆಗಣಿಸಲಾಗುತ್ತಿದೆಯೇ? ದಯವಿಟ್ಟು ನನ್ನ ಸಾಲ ಮರುಪಾವತಿ ಹಣವನ್ನು ಸ್ವೀಕರಿಸಿ ನನ್ನ ಮೇಲಿನ ಪ್ರಕರಣ ಅಂತ್ಯಗೊಳಿಸಿ ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.

 

ವಿಜಯ್ ಮಲ್ಯರನ್ನು ಹಸ್ತಾಂತರ ಮಾಡುವಂತೆ ಭಾರತ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಲಂಡನ್ ಹೈಕೋರ್ಟ್ ಪುರಸ್ಕರಿಸಿತ್ತು. ಇದರ ವಿರುದ್ದ ಲಂಡನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ವಿಜಯ್ ಮಲ್ಯ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಇತ್ತೀಚೆಗೆ ತಾನು ಸಾಲ ಮರುಪಾವತಿಸಲು ಸಿದ್ದ ಎಂದು ಟ್ವಿಟರ್ ಮೂಲಕ ಹೇಳಿದ್ದರು. ಆದರೆ ಸಾಲ ಮೊತ್ತವನ್ನು ಬ್ಯಾಂಕ್‌ಗೆ ವರ್ಗಾಯಿಸುವ ಪ್ರಯತ್ನ ಮಾಡಿಲ್ಲ.