2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳಿಗೆ ಫ್ರಾನ್ಸ್ ಸ್ವಾಗತ: ಗಣತಂತ್ರ ದಿನಕ್ಕೆ ಮ್ಯಾಕ್ರನ್ ಶುಭಾಶಯ
ಫ್ರಾನ್ಸ್‌ನಲ್ಲಿ ಅಧ್ಯಯನ ಮಾಡಲು ಸುಮಾರು 30,000 ವಿದ್ಯಾರ್ಥಿಗಳನ್ನು ಆಹ್ವಾನಿಸುವ ಯೋಜನೆಯನ್ನು ಫ್ರೆಂಚ್ ನಾಯಕ ಇಮ್ಯಾನುಯೆಲ್ ಮ್ಯಾಕ್ರನ್ ಹಂಚಿಕೊಂಡಿದ್ದಾರೆ.
ನವದೆಹಲಿ (ಜನವರಿ 26, 2024): ಭಾರತದ 75ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರೋ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮಹತ್ವದ ಘೋಷಣೆ ಹೊರಡಿಸಿದ್ದಾರೆ. 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್‌ನಲ್ಲಿ ಅಧ್ಯಯನ ಮಾಡಲು ಆಹ್ವಾನಿಸುವ ಉಪಕ್ರಮಗಳನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷ ಫ್ರಾನ್ಸ್‌ನ ರಾಷ್ಟ್ರೀಯ ದಿನದ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್‌ಗೆ ಭೇಟಿ ನೀಡಿದ ಒಂದು ತಿಂಗಳ ನಂತರ ಅವರು ಈ ಬಗ್ಗೆ ಘೋಷಣೆ ಹೊರಡಿಸಿದ್ದರೂ ಈಗ ಇದಕ್ಕೆ ಸ್ಪಷ್ಟನೆ ದೊರೆತಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಬರೆದಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಫ್ರಾನ್ಸ್‌ನಲ್ಲಿ ಅಧ್ಯಯನ ಮಾಡಲು ಸುಮಾರು 30,000 ವಿದ್ಯಾರ್ಥಿಗಳನ್ನು ಆಹ್ವಾನಿಸುವ ಯೋಜನೆಯನ್ನು ಫ್ರೆಂಚ್ ನಾಯಕ ಹಂಚಿಕೊಂಡಿದ್ದಾರೆ. 2030 ರಲ್ಲಿ ಫ್ರಾನ್ಸ್‌ನಲ್ಲಿ 30,000 ಭಾರತೀಯ ವಿದ್ಯಾರ್ಥಿಗಳು. ಇದು ಬಹಳ ಮಹತ್ವಾಕಾಂಕ್ಷೆಯ ಗುರಿಯಾಗಿದೆ, ಆದರೆ ನಾನು ಅದನ್ನು ಮಾಡಲು ನಿರ್ಧರಿಸಿದ್ದೇನೆ ಎಂದು ಮ್ಯಾಕ್ರನ್ ಹೇಳಿದ್ದಾರೆ.
ಮೋದಿ ಜತೆ ಇಂದು ಫ್ರೆಂಚ್ ಅಧ್ಯಕ್ಷರ ರೋಡ್‌ಶೋ: ರಾಜಸ್ಥಾನದ ಪಾರಂಪರಿಕ ತಾಣಗಳ ಪ್ರವಾಸ
ಅಲ್ಲದೆ, ಅದು ಹೇಗೆ ಎಂಬ ಬಗ್ಗೆ ಅವರು ವಿವರಣೆಯನ್ನು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಫ್ರಾಂಚೈಸ್ ಮತ್ತು ಅಂತರರಾಷ್ಟ್ರೀಯ ವರ್ಗಗಳ ಒಕ್ಕೂಟಗಳ ಜಾಲವನ್ನು ಹೊಂದಿರುವ ಹೊಸ ಕೇಂದ್ರಗಳನ್ನು ಹೇಗೆ ದೇಶದಲ್ಲಿ ಫ್ರೆಂಚ್ ಕಲಿಯಲು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಫ್ರೆಂಚ್ ಅಧ್ಯಕ್ಷರು ವಿವರಿಸಿದರು. ಹಾಗೂ, ದೇಶದಲ್ಲಿ ಭಾರತೀಯ ಹಳೆಯ ವಿದ್ಯಾರ್ಥಿಗಳಿಗೆ ವೀಸಾ ಪ್ರಕ್ರಿಯೆಯನ್ನು ಫ್ರಾನ್ಸ್ ಸುಗಮಗೊಳಿಸುತ್ತದೆ ಎಂದೂ ಅವರು ಹೇಳಿದರು.
ಇನ್ನು, ಫ್ರಾನ್ಸ್‌ಗೆ ಬರುವುದು ಎಂದರೆ ಉತ್ಕೃಷ್ಟತೆಯನ್ನು ಹುಡುಕುವುದು ಎಂದರ್ಥ. ಎಲ್ಲರಿಗೂ ಫ್ರೆಂಚ್, ಉತ್ತಮ ಭವಿಷ್ಯಕ್ಕಾಗಿ ಫ್ರೆಂಚ್ ಜೊತೆಗೆ ಸಾರ್ವಜನಿಕ ಶಾಲೆಗಳಲ್ಲಿ ಫ್ರೆಂಚ್ ಕಲಿಯಲು ನಾವು ಹೊಸ ಮಾರ್ಗಗಳನ್ನು ಪ್ರಾರಂಭಿಸುತ್ತಿದ್ದೇವೆ. ನಾವು ಹೊಸ ಕೇಂದ್ರಗಳೊಂದಿಗೆ ಅಲೈಯನ್ಸ್ ಫ್ರಾಂಚೈಸ್‌ಗಳ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಫ್ರೆಂಚ್ ಭಾಷೆಯನ್ನು ಕಲಿಯಲು ನಾವು ಅಂತರರಾಷ್ಟ್ರೀಯ ತರಗತಿಗಳನ್ನು ರಚಿಸುತ್ತಿದ್ದೇವೆ, ಇದು ಫ್ರೆಂಚ್ ಮಾತನಾಡದ ವಿದ್ಯಾರ್ಥಿಗಳಿಗೆ ನಮ್ಮ ವಿಶ್ವವಿದ್ಯಾನಿಲಯಗಳಿಗೆ ಸೇರಲು ಅನುವು ಮಾಡಿಕೊಡುತ್ತದೆ. ಮತ್ತು, ಫ್ರಾನ್ಸ್‌ನಲ್ಲಿ ಅಧ್ಯಯನ ಮಾಡಿದ ಯಾವುದೇ ಮಾಜಿ ಭಾರತೀಯ ವಿದ್ಯಾರ್ಥಿಗಳಿಗೆ ನಾವು ವೀಸಾ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತೇವೆ ಎಂದೂ ಇಮ್ಯಾನುಯೆಲ್ ಮ್ಯಾಕ್ರನ್ ಹೇಳಿದರು.
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶ್ವದ ದೊಡ್ಡಣ್ಣ ಗೈರು: ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಭಾಗಿ!
ಮತ್ತೊಂದು ಪೋಸ್ಟ್‌ನಲ್ಲಿ, 75ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಫ್ರೆಂಚ್ ಅಧ್ಯಕ್ಷರು, ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತಕ್ಕೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.