ಕಾರಿನಲ್ಲಿ ಪ್ರಯಾಣಿಸಿದ್ದ ಭಾರತೀಯ ಮೂಲದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ನಾಪತ್ತೆ ಪ್ರಕರಣದ ಬೆನ್ನಲ್ಲೇ ಹೆಲಿಕಾಪ್ಟರ್ ಮೂಲಕ ಸರ್ಚ್ ಆಪರೇಶನ್ ಮಾಡಲಾಗಿದೆ. ಈ ವೇಳೆ ಘಟನೆ ಬಯಲಾಗಿದೆ.
ನ್ಯೂಯಾರ್ಕ್ (ಆ.03) ಭಾರತೀಯ ಮೂಲದ ಕುಟುಂಬ ಕಾರು ಪ್ರಯಾಣದದಲ್ಲಿ ನಾಪತ್ತೆಯಾದ ಘಟನೆ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಕುುಟುಂಬದ ನಾಲ್ವರು ಸದಸ್ಯರ ಪತ್ತೆ ಹಚ್ಚಲು ನ್ಯೂಯಾರ್ಕ್ ಪೊಲೀಸರು ಹೆಲಿಕಾಪ್ಟರ್ ನೆರವು ಬಳಸಲಾಗಿತ್ತು. ಈ ವೇಳೆ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಧಾರ್ಮಿಕ ಕೇಂದ್ರಕ್ಕೆ ಕಾರಿನಲ್ಲಿ ತೆರಳಿದ ಕುಟುಂಬದ ನಾಲ್ವರು ಸದಸ್ಯರು ನಾಪತ್ತೆಯಾಗಿದ್ದರು. ಹೀಗಾಗಿ ಭಾರತೀಯ ಕುಟುಂಬಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಈ ಕುರಿತು ದೂರು ದಾಖಲಾಗಿತ್ತು. ಹೀಗಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ ವೇಳೆ ಶವವಾಗಿ ಪತ್ತೆಯಾಗಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದ ಭಾರತೀಯ ಕುಟುಂಬದ ನಾಲ್ವರು ಮೃತಪಟ್ಟಿರುವುದು ಖಚಿತವಾಗಿದೆ. ಮೃತರನ್ನು ಅಶಾ ದಿವನ್ (85) ಕಿಶೋರ್ ದಿವನ್ (89) ಶೈಲೇಶ್ ದಿವನ್ (86) ಗೀತಾ ದಿವನ್ (84) ಎಂದು ಗುರುತಿಸಲಾಗಿದೆ. ಈ ಕುಟುಂಬ ಸದ್ಯರು ವೆಸ್ಟ್ ವರ್ಜಿನಿಯಾದ ಬಫೆಲೋದಿಂದ ಪ್ರಯಾಣ ಬೆಳೆಸಿದ್ದರು. ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ನಾಲ್ವರು ಪ್ರಯಾಣ ಮಾಡಿದ್ದರು.
ಹೆಲಿಕಾಪ್ಟರ್ ಸರ್ಚ್‌ನಲ್ಲಿ ಬಯಲಾದ ಘಟನೆ
ನಾಪತ್ತೆ ಪ್ರಕರಣ ದಾಖಲಾದ ಬೆನ್ನಲ್ಲೇ ನ್ಯೂಯಾರ್ಕ್ ಪೊಲೀಸರು ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಗಳ ಪರಿಶೀಲಿಸಿದ್ದರು. ಆದರೆ ಹೆಚ್ಚಿನ ಸುಳಿವು ಪತ್ತೆಯಾಗಿರಲಿಲ್ಲ. ಹೀಗಾಗಿ ಕಾರು ತೆರಳಿದ ಮಾರ್ಗದಲ್ಲಿ ಹೆಲಿಕಾಪ್ಟರ್ ಸರ್ಚ್ ಆಪರೇಶನ್ ನಡೆಸಲಾಗಿತ್ತು. ಈ ವೇಳೆ ಕಾರು ಭೀಕರ ಅಪಘಾತಕ್ಕೀಡಾಗಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಘಾತದಲ್ಲಿ ನಜ್ಜುಗುಜ್ಜಾದ ಕಾರಿನಲ್ಲಿ ನಾಲ್ವರು ಮೃತಪಟ್ಟಿರುವುದು ಪತ್ತೆಯಾಗಿದೆ.
ಕಾರು ಅಪಘಾತದಲ್ಲಿ ಕುಟುಂಬದ ಎಲ್ಲರೂ ಸಾವು
ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಈ ಭಾರತೀಯ ಮೂಲದ ಕುಟುಂಬ ಇದೀಗ ಕಾರು ಅಪಘಾತದಲ್ಲಿ ದುರಂತ ಅಂತ್ಯ ಕಂಡಿದೆ. ಕುಟುಂಬದ ಎಲ್ಲಾ ಸದಸ್ಯರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಕೌನ್ಸಿಲ್ ಆಫ್ ಹೆರಿಟೇಜ್ ಆರ್ಟ್ಸ್ ಇಂಡಿಯಾ ಸಂಸ್ಥೆ ಪೊಲೀಸರ ಜೊತೆ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಭಾತೀಯ ಮೂಲದ ಎನ್‌ಜಿಒ ಸಂಘಟನೆ ಹಾಗೂ ನ್ಯೂಯಾರ್ಕ್ ಪೊಲೀಸರು ತೀವ್ರ ಕಾರ್ಯಾಚರಣೆಯಲ್ಲಿ ಕುಟುಂಬದ ಸದಸ್ಯರ ನಾಪತ್ತೆ ಪ್ರಕರಣ ಬೇಧಿಸಿದ್ದಾರೆ. ದುರಂತ ಅಂದರೆ ನಾಲ್ವರು ಮೃತಪಟ್ಟಿದ್ದಾರೆ.
ಅಪಘಾತ ಹೇಗಾಯ್ತು ಅನ್ನೋ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಹಿಟ್ ಅಂಡ್ ರನ್ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
