ವಿಮಾನ ನಿಲ್ದಾಣದಲ್ಲಿ ಲಗೇಜ್ ಚಾರ್ಜ್ ಉಳಿಸಲು ಬರೋಬ್ಬರಿ 30 ಕೆಜಿ ಕಿತ್ತಳೆ ಹಣ್ಣನ್ನು ತಿನ್ನಲಾಗಿದೆ. ಹೆಚ್ಚುವರಿಯಾಗಿ ತೆರಬೇಕಾದ ಹಣ ಉಳಿಸಲು 30 ಕೆಜಿ ಹಣ್ಣು ತಿಂದಿದ್ದಾರೆ.
ಬೀಜಿಂಗ್ (ಜ.29): ವಿಮಾನ ಪ್ರಯಾಣದ ವೇಳೆ ಮಿತಿಗಿಂತ ಹೆಚ್ಚು ಲಗೇಜ್‌ಗೆ ಹಣ ಪಾವತಿಸಬೇಕೆಂಬ ಕಾರಣಕ್ಕೆ ಹಲವರು ಬೇಕಿರುವಷ್ಟುಅಗತ್ಯ ವಸ್ತುಗಳನ್ನು ಮಾತ್ರ ಕೊಂಡೊಯ್ಯುತ್ತಾರೆ.
ಆದರೆ ಒಮ್ಮೊಮ್ಮೆ ಹೆಚ್ಚು ಕೊಂಡೊಯ್ದಾಗ ಸಮಸ್ಯೆ ಆಗುತ್ತದೆ. ಇದೇ ಕಾರಣಕ್ಕೆ ನಾಲ್ವರು ಕೇವಲ ಅರ್ಧಗಂಟೆಯಲ್ಲಿ 30 ಕೇಜಿಯಷ್ಟುಕಿತ್ತಳೆ ಹಣ್ಣುಗಳನ್ನು ಗಬಗಬನೇ ತಿಂದು ಹಾಕಿದ ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ.
ಸ್ವಿಜರ್ಲೆಂಡಲ್ಲಿ ಹಿಮಪಾತದಂತೆ ಕೋಕೋ ಪೌಡರ್‌ನ ಸುರಿಮಳೆ! ...
ನಾಲ್ವರು ಉದ್ಯಮಿಗಳು ತಮ್ಮೊಂದಿಗೆ ತಂದಿದ್ದ 30 ಕೇಜಿ ಆರೆಂಜ್‌ಗೆ 3384 ರು. ಪಾವತಿಸಬೇಕೆಂದು ವಿಮಾನ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ ಅಷ್ಟುಹಣವನ್ನು ಕಿತ್ತಳೆ ಹಣ್ಣು ಖರೀದಿಗೂ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ತಿಂದು ಖಾಲಿ ಮಾಡಿ ವಿಮಾನ ಹತ್ತಿದ್ದಾರಂತೆ!
