ಬರ್ನ್(ಆ.19): ಸ್ವಿಜರ್ಲೆಂಡ್‌ನಲ್ಲಿ ಸದಾ ಹಿಮಪಾತ ಸಾಮಾನ್ಯ. ಆದರೆ, ಚಾಕ್ಲೆಟ್‌ಗೆ ಬಳಸುವ ಕೋಕೊ ಪೌಡರ್‌ ಹಿಮದ ರೀತಿ ಆಗಸದಿಂದ ಹಾರಿಬಂದ ಘಟನೆಯೊಂದು ನಡೆದಿದೆ.

ಬರ್ಲಿನ್‌ನಲ್ಲಿರುವ ಚಾಕ್ಲೆಟ್‌ ತಯಾರಿಕಾ ಕಂಪನಿಯೊಂದರಲ್ಲಿ ಒಣಗಿಸಿ ರೋಸ್ಟ್‌ ಮಾಡಿದ ಕೋಕೊ ಪುಡಿಯನ್ನು ತಂಪಾಗಿಸುವ ಯಂತ್ರ ಕೆಟ್ಟುಹೋಗಿತ್ತು. ಹೀಗಾಗಿ ಕಂಟೇನರ್‌ಗಳಲ್ಲಿ ತುಂಬಿಟ್ಟಿದ್ದ ನುಣುಪಾದ ಪೌಡರ್‌ ಜೋರಾಗಿ ಬೀಸಿದ ಗಾಳಿಗೆ ಧೂಳಿನ ರೀತಿ ಹಾರಿ ಹೋಗಿದ್ದು, ಸುತ್ತಮುತ್ತಲಿನ ಪ್ರದೇಶದ ಮೇಲೆಲ್ಲಾ ಹಬ್ಬಿದೆ.

ಅಡುಗೆ ಮಾಡೋರಿಗೆ ಗೊತ್ತಿರಲೇಬೇಕಾದ ವಿಷಯ ಇದು!

ಬಳಿಕ ಯಂತ್ರ ಸರಿಪಡಿಸಿ ಕೋಕೊ ಪೌಡರ್‌ ಹಾರಿಹೊಗದಂತೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕಾರೊಂದರ ಮೇಲೆ ಕೊಕೋ ಪೌಡರ್‌ ಅಂಟಿಕೊಂಡಿದ್ದು, ಅದನ್ನೂ ತಾನೇ ಸ್ವಚ್ಛಗೊಳಿಸುವುದಾಗಿ ಕಂಪನಿ ಭರವಸೆ ನೀಡಿದೆಯಂತೆ.