ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ 1940ರ ದಶಕದ ಚಡ್ಡಿಯೊಂದು 7.5 ಲಕ್ಷ ರೂಪಾಯಿಗಳಿಗೆ ಹರಾಜಾಗಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಕೆನಡಿಗೆ ನೀಡಲಾಗಿದ್ದ ಈ ಬಾಕ್ಸರ್ ಶಾರ್ಟ್ಸ್, ಜೂಲಿಯನ್ಸ್ ಆಕ್ಷನ್ಸ್‌ನಲ್ಲಿ ಭರ್ಜರಿ ಬೆಲೆಗೆ ಮಾರಾಟವಾಗಿದೆ.
ಅಮೆರಿಕಾದ 35ನೇ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರಿಗೆ ಸೇರಿದ ಚಡ್ಡಿಯೊಂದು ಅವರು ಸಾವನ್ನಪ್ಪಿದ ಬರೋಬ್ಬರಿ 63 ವರ್ಷಗಳ ನಂತರ ಹರಾಜಾಗಿದೆ. ಅದು ಲಕ್ಷಾಂತರ ರೂಪಾಯಿ ಮೊತ್ತಕ್ಕೆ. ಹೌದು ಅಚ್ಚರಿ ಎನಿಸಿದರು ನಿಜ.
1940ರ ದಶಕದ ಚಡ್ಡಿ
ಅಮೆರಿಕಾದಲ್ಲಿ ನಡೆದ ಹರಾಜು ಪ್ರಕ್ರಿಯೆಯೊಂದರಲ್ಲಿ ಜಾನ್ ಎಫ್ ಕೆನಡಿ ಅವರಿಗೆ ಸೇರಿದ 1940ರ ದಶಕದ ಚಡ್ಡಿಯೊಂದು ಬರೋಬ್ಬರಿ 9,100 ಅಮೆರಿಕನ್ ಡಾಲರ್‌ಗೆ ಹರಾಜಾಗಿದೆ, 9,100 ಡಾಲರ್ ಎಂದರೆ ಭಾರತದಲ್ಲಿನ 7.5 ಲಕ್ಷ ರೂಪಾಯಿ ಮೊತ್ತ ಆಗಿದ್ದು, ಈ ದುಬಾರಿ ಮೊತ್ತಕ್ಕೆ ಹರಾಜಾಗಿ ಅಚ್ಚರಿ ಮೂಡಿಸಿದೆ. ಈ ಚಡ್ಡಿಯಲ್ಲಿ ಜಾನ್ ಎಫ್ ಕೆನಡಿ ಅವರ ಅಡ್ಡ ಹೆಸರಾದ ಜಾಕ್ ಅನ್ನು ಕಸೂತಿಯಿಂದ ಮಾಡಲಾಗಿದೆ.
2ನೇ ಮಹಾಯುದ್ಧದ ವೇಳೆ ಕೆನಡಿಗೆ ನೀಡಲಾಗಿದ್ದ ಬಾಕ್ಸರ್ ಶಾರ್ಟ್ಸ್
ಎರಡನೇ ಮಹಾಯುದ್ಧದ ಸಮಯದಲ್ಲಿ ಅವರು ಅಮೆರಿಕಾದ ನೇವಿ ಮೀಸಲಿನಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅವರಿಗೆ ನೀಡಲಾಗಿತ್ತು. ದಂತದ ಬಣ್ಣದ ಹತ್ತಿ ಬಟ್ಟೆಯಿಂದ ಮಾಡಿದ ಈ ಬಾಕ್ಸರ್ ಶಾರ್ಟ್ಸ್ ಈಗ 9,100 ಅಮೆರಿಕನ್ ಡಾಲರ್‌ಗೆ ಹರಾಜಾಗಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಕೆನಡಿ ಸೊಲೊಮನ್ ದ್ವೀಪಗಳಲ್ಲಿ PT-109 ಟಾರ್ಪಿಡೊ ದೋಣಿಯ ಕಮಾಂಡರ್ ಆಗಿ ಪ್ರಸಿದ್ಧವಾಗಿ ಸೇವೆ ಸಲ್ಲಿಸಿದರು. ಅಲ್ಲದೇ ಜಪಾನಿನ ವಿಧ್ವಂಸಕ ನೌಕೆಯಿಂದ ಡಿಕ್ಕಿ ಹೊಡೆದ ನಂತರ ಸಾವಿನ ದವಡೆಯಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದರು.
ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ..! ಅಮೆರಿಕವನ್ನೇ ನಡುಗಿಸಿದ್ದವು ಆ 5 ಹತ್ಯೆಗಳು..
ಬಾಕ್ಸರ್ ಶಾರ್ಟ್ಸ್ ಎಂದು ಕರೆಯಲ್ಪಡುವ ಈ ಚಡ್ಡಿಯೂ ಜೂಲಿಯನ್ಸ್ ಆಕ್ಷನ್ಸ್‌ನ 'ಸ್ಪಾಟ್‌ಲೈಟ್ ಆನ್ ಹಿಸ್ಟರಿ & ಟೆಕ್' ಕಾರ್ಯಕ್ರಮದ ಭಾಗವಾಗಿತ್ತು. ಮತ್ತು ಕೆನಡಿಯವರ ಮಾಜಿ ಕಾರ್ಯದರ್ಶಿ ಮೇರಿ ಬರೆಲ್ಲಿ ಗಲ್ಲಾಘರ್ ಅವರು ಸಹಿ ಮಾಡಿದ ದೃಢೀಕರಣ ಪ್ರಮಾಣಪತ್ರದೊಂದಿಗೆ ಇದು ಹರಾಜಿಗೆ ಬಂದಿತ್ತು. ಈ ಲಾಟ್‌ನಲ್ಲಿ ಜಾನ್ ಎಫ್ ಕೆನಡಿ ಮುಖಪುಟದಲ್ಲಿ ಕಾಣಿಸಿಕೊಂಡ 1961 ರ 'ದಿ ಸ್ಯಾಟರ್ಡೇ ಈವ್ನಿಂಗ್ ಪೋಸ್ಟ್' ಆವೃತ್ತಿಯೂ ಇತ್ತು.
ಸ್ಟೀವ್ ಜಾಬ್ ಟೈ, ಜುಕರ್‌ಬರ್ಗ್ ಹೂಡಿ ಕೂಡ ಭರ್ಜರಿ ಮೊತ್ತಕ್ಕೆ ಹರಾಜು
ಅಮೆರಿಕದಲ್ಲಿ ನಡೆದ ಈ ಹರಾಜಿನಲ್ಲಿ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಈ ಬಾಕ್ಸರ್ ಚಡ್ಡಿಯೂ ಸೇರಿದಂತೆ, ಅಮೆರಿಕಾದ ಇನ್ನೊರ್ವ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಸೇರಿದ ಗಾಲ್ಫ್ ಶೂ, ಮತ್ತೊಬ್ಬ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಸಹಿ ಮಾಡಿದ ಸನ್ ಗ್ಲಾಸ್, ಫೇಸ್‌ಬುಕ್ ಸಹ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಸೇರಿದ ಹೂಡಿ, ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಬೋ ಟೈ ಕೂಡಾ ಹರಾಜಿನಲ್ಲಿತ್ತು. ಇದರಲ್ಲಿ ಜುಕರ್‌ಬರ್ಗ್ ಅವರಿಗೆ ಸೇರಿದ ಹೂಡಿ ಬರೋಬ್ಬರಿ 15,875 ಡಾಲರ್‌ಗೆ ಅಂದರೆ 13,82,868(ಲಕ್ಷ) ಭಾರತೀಯ ರೂಪಾಯಿಗೆ ಸೇಲ್ ಆಗಿದ್ದರೆ, ಇತ್ತ ಸ್ಟೀವ್ ಜಾಬ್ ಅವರು ಧರಿಸಿದ್ದ ಬೋ ಟೈ 35,750 ಡಾಲರ್ ಎಂದರೆ ಬರೋಬ್ಬರಿ 31,14,209(ಲಕ್ಷ) ರೂಪಾಯಿಗಳಿಗೆ ಹರಾಜಾಗಿದೆ.
ಜಾಕ್ವಲಿನ್ ಕೆನಡಿ ಜೊತೆ ಹೋಳಿ ಆಡಿದ್ದ ನೆಹರು: ಫೋಟೋ ಹರಿಬಿಟ್ಟ ಅಮೆರಿಕ
