ವಾಷಿಂಗ್ಟನ್(ಮಾ.21): ದೇಶಾದ್ಯಂತ ಹೋಳಿ ಹಬ್ಬದ  ಸಂಭ್ರಮ ಮನೆ ಮಾಡಿದೆ. ಅದರಂತೆ ವಿದೇಶಗಳಲ್ಲೂ ಭಾರತೀಯರ ಬಣ್ಣದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಈ ಮಧ್ಯೆ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು, ಅಮೆರಿಕದ ಅಂದಿನ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಪತ್ನಿ ಜಾಕ್ವಲಿನ್ ಕೆನಡಿ ಅವರೊಂದಿಗೆ ಹೋಳಿ ಆಡಿದ್ದ ಫೋಟೋವೊಂದನ್ನು ಅಮೆರಿಕ ಹರಿಬಿಟ್ಟಿದೆ.

ಮುಂಬೈನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, 1962ರಲ್ಲಿ ನೆಹರು ಅವರು ಅಮೆರಿಕದ ಪ್ರಥಮ ಮಹಿಳೆ ಜಾಕ್ವಲಿನ್ ಕೆನಡಿ ಜೊತೆ ಹೋಳಿ ಆಡಿದ್ದರು ಎಂದು ಹೇಳಿದೆ.

ಭಾರತ-ಅಮೆರಿಕ ನಡುವಿನ ಸಂಬಂಧ ಹಳೆಯದಾದಷ್ಟು ಗಟ್ಟಿಯಾಗುತ್ತಿದೆ ಎಂದು ಹೇಳಿರುವ ರಾಯಭಾರ ಕಚೇರಿ, ಪರಸ್ಪರರ ಸಂಸ್ಕೃತಿಯನ್ನು ಗೌರವಿಸುವುದನ್ನು ಉಭಯ ರಾಷ್ಟ್ರಗಳು ಪಾಲಿಸಿಕೊಂಡು ಬಂದಿವೆ ಎಂದು ಹೇಳಿದೆ.