ಜಾರ್ಜಿಯಾ ಚುನಾವಣೆ ಅಕ್ರಮ. ಜೈಲಾಧಿಕಾರಿಗಳ ಮುಂದೆ ಟ್ರಂಪ್ ಶರಣು. ಜೈಲಲ್ಲಿ ಟ್ರಂಪ್‌ ಫೋಟೋ ಸೆರೆ. ಕೈದಿ ನಂ. ಪಿ01135808 ಹಂಚಿಕೆ. ಜೈಲಿನಲ್ಲಿ ಫೋಟೋ ತೆಗೆಸಿಕೊಂಡ ಮೊದಲ ಮಾಜಿ ಅಧ್ಯಕ್ಷ ಟ್ರಂಪ್‌.

ವಾಷಿಂಗ್ಟನ್‌ (ಆ.26): 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಜಾರ್ಜಿಯಾ ರಾಜ್ಯದಲ್ಲಿ ಚುನಾವಣಾ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಜಾರ್ಜಿಯಾದ ಫäಲ್ಟನ್‌ ಕೌಂಟಿ ಜೈಲಿನಲ್ಲಿ ಗುರುವಾರ ಶರಣಾಗಿದ್ದಾರೆ. ಇತರೆ ಕೈದಿಗಳಂತೆ ಟ್ರಂಪ್‌ ಅವರ ಫೋಟೋವನ್ನುಜೈಲಾಧಿಕಾರಿಗಳು ಸೆರೆ ಹಿಡಿದು, 77 ವರ್ಷದ ಟ್ರಂಪ್‌ ಅವರಿಂದ ವಿವಿಧ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ತನ್ಮೂಲಕ ಅಮೆರಿಕ ಇತಿಹಾಸದಲ್ಲೇ ಕೈದಿಯಾಗಿ ಜೈಲಲ್ಲಿ ಫೋಟೋ ತೆಗೆಸಿಕೊಂಡ ಮೊದಲ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್‌ ಪಾತ್ರರಾಗಿದ್ದಾರೆ.

ಮುಖ ಸಿಂಡರಿಸಿಕೊಂಡ ರೀತಿ ಪೋಸು ನೀಡಿರುವ ಫೋಟೋವನ್ನು ಸ್ವತಃ ಟ್ರಂಪ್‌ ಹಾಗೂ ಜಾರ್ಜಿಯಾ ಜೈಲು ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಫೋಟೋ ವೈರಲ್‌ ಆಗಿದೆ. ಜೈಲಿನ ಅಧಿಕಾರಿಗಳು ಟ್ರಂಪ್‌ಗೆ ‘ಪಿ01135808’ ಎಂಬ ಕೈದಿ ಸಂಖ್ಯೆಯನ್ನೂ ಹಂಚಿಕೆ ಮಾಡಿದ್ದಾರೆ. ತಾವು 6 ಅಡಿ, 3 ಇಂಚು ಎತ್ತರ, 97 ಕೇಜಿ ತೂಕ, ಹೊಂಬಣ್ಣ ಅಥವಾ ಸ್ಟ್ರಾಬೆರ್ರೆ ಬಣ್ಣದ ಹಾಗೂ ಕೂದಲು ನೀಲಿಗಣ್ಣನ್ನು ಹೊಂದಿರುವುದಾಗಿ ಟ್ರಂಪ್‌ ಜೈಲಲ್ಲಿ ವಿವರ ಕೊಟ್ಟಿದ್ದಾರೆ.

ಟೀವಿ ಇಲ್ಲದೆ ಚಂದ್ರಯಾನ ಲ್ಯಾಂಡಿಂಗ್‌ ವೀಕ್ಷಣೆ ತಪ್ಪಿಸಿಕೊಂಡ ಇಸ್ರೋ ವಿಜ್ಞಾನಿ!

ಇದರ ಬೆನ್ನಲ್ಲೇ 1.65 ಕೋಟಿ ರು. ಮೊತ್ತದ ಬಾಂಡ್‌ ಪಡೆದು ಟ್ರಂಪ್‌ ಅವರನ್ನುಜೈಲಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಪ್ರತಿವಾದಿಗಳು, ಸಾಕ್ಷಿಗಳು ಅಥವಾ ಸಂತ್ರಸ್ತರಿಗೆ ಯಾವುದೇ ವಿಧದಲ್ಲೂ ಬೆದರಿಕೆ ಹಾಕಬಾರದು ಎಂಬ ಷರತ್ತು ವಿಧಿಸಲಾಗಿದೆ. ಒಟ್ಟು 22 ನಿಮಿಷಗಳ ಕಾಲ ಜೈಲಿನಲ್ಲಿದ್ದ ಟ್ರಂಪ್‌ ಬಳಿಕ ತಮ್ಮ ವಿಮಾನದಲ್ಲಿ ನ್ಯೂಜೆರ್ಸಿಗೆ ತಲುಪಿದ್ದಾರೆ.

ಈ ವರ್ಷ ಈಗಾಗಲೇ 3 ಪ್ರಕರಣಗಳ ಸಂಬಂಧ ಟ್ರಂಪ್‌ ವಿಚಾರಣೆ ಎದುರಿಸಿದ್ದಾರೆ. ಆದರೆ ಜೈಲಲ್ಲಿ ಫೋಟೋ ತೆಗೆಸಿಕೊಂಡ ಮೊದಲ ಪ್ರಕರಣ ಇದಾಗಿದೆ. ಮುಂದಿನ ವರ್ಷ ನಡೆವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧೆ ಮಾಡಲು ನಿರ್ಧರಿಸಿರುವ ಟ್ರಂಪ್‌ ಅವರಿಗೆ ಈ ಪ್ರಕರಣ ಕಸಿವಿಸಿ ತಂದಿದೆ. ಆದರೆ ಅವರ ಚುನಾವಣಾ ತಂಡ ಇದನ್ನೇ ಪ್ರಚಾರ ವಿಷಯವಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

2023ರಲ್ಲಿ ಈವರೆಗೂ 9 ದೇಶಗಳ ಮಾಜಿ ಪ್ರಧಾನಿ, ಅಧ್ಯಕ್ಷರ ಬಂಧನ,

ಏನಿದು ಪ್ರಕರಣ?: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿದ್ದ ಡೊನಾಲ್ಡ್‌ ಟ್ರಂಪ್‌ ಡೆಮೊಕ್ರಟ್‌ ಪಕ್ಷದ ಜೋ ಬೈಡೆನ್‌ ಅವರಿಂದ ತುರುಸಿನ ಪೈಪೋಟಿ ಎದುರಿಸಿದ್ದರು. ಆ ಸಂದರ್ಭ ಅವರು ಜಾರ್ಜಿಯಾ ರಾಜ್ಯದ ಫಲಿತಾಂಶವನ್ನೇ ತಿರುಚಲು ಯತ್ನಿಸಿದ್ದರು ಎಂಬ ಆರೋಪವಿದೆ. ಆದಾಗ್ಯೂ ಟ್ರಂಪ್‌ ಅವರು ಜೋ ಬೈಡೆನ್‌ ಎದುರು ಪರಾಜಿತರಾಗಿದ್ದರು.

ಕಮಲಾ ಮಾತು ರೈಮ್‌ನಂತೆ- ಟ್ರಂಪ್‌

ಈ ನಡುವೆ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಬುಧವಾರ ಭಾಗಿಯಾದ ಟ್ರಂಪ್‌ ಅವರು ಅಮೆರಿಕ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅವರು ಮಾತನಾಡುವ ಶೈಲಿ ಒಂದು ರೀತಿ ‘ರೈಮ್‌’ (ಪ್ರಾಸಬದ್ಧ ಗೀತೆ) ರೀತಿ ಇರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಅಧ್ಯಕ್ಷ ಬೈಡೆನ್‌ ಅವರು ದೈಹಿಕತೆಗಿಂತ ಮಾನಸಿಕವಾಗಿ ಭೀಕರವಾಗಿದ್ದಾರೆ ಎಂದು ಮೂದಲಿಸಿದ್ದಾರೆ.