ಫೋನಿಕ್ಸ್(ಜು.10): ಅಪಾರ್ಟ್‌ಮೆಂಟ್‌ ಒಂದರಲ್ಲಿ ಬೆಂಕಿ ಅವಘಡ ಉಂಟಾದಾಗ ತಾಯಿಯೊಬ್ಬರು ತಮ್ಮ ಮಗುವನ್ನು ಹಿಡಿದು ಕಟ್ಟಡದ ಮೂರನೇ ಮಹಡಿಯಲ್ಲಿ ನಿಂತಿದ್ದರು.

ಬೆಂಕಿ ವ್ಯಾಪಿಸುತ್ತಿದ್ದಂತೆ ಮಗನನ್ನು ಎಸೆಯಿರಿ ಎಂದು ಜನ ಕೂಗಿಕೊಳ್ಳುತ್ತಿದ್ದರು. ಅದೇ ಏರಿಯಾದಲ್ಲಿ ತನ್ನ ಗೆಳೆಯನ ಮನೆಯಲ್ಲಿದ್ದ ಯುವಕ ಜನರ ಚೀರಾಟ ಕೇಳಿ ಹೊರಗೆ ಧಾವಿಸಿದ್ದಾನೆ. ಬರಿಗಾಲಲ್ಲಿ ಓಡಿ ಬಂದ ಯುವಕ ತಾಯಿ ಮಗುವನ್ನು ಕಟ್ಟಡದ ಮೇಲಿಂದ ಎಸೆಯುವಾಗ ಸರಿಯಾದ ಸಮಯಕ್ಕೆ ಬಂದು ಮಗುವನ್ನು ಹಿಡಿದುಕೊಂಡಿದ್ದಾನೆ.

ಉತ್ತರಾಖಂಡ್‌ನಲ್ಲಿನ್ನು ಚೈನೀಸ್ ವಸ್ತು ಬಳಕೆ ಇಲ್ಲ..!

ಕಲಮಾಝೂ ಸೆಂಟ್ರಲ್ ಹೈಸ್ಕೂಲ್‌ನಲ್ಲಿದ್ದಾಗ ಉತ್ತಮ ಫುಟ್ಬಾಲ್ ಆಟಗಾರನಾಗಿದ್ದ ಫಿಲಿಪ್ ಬ್ಲಾಂಕ್ಸ್ ತಮ್ಮ ಫುಟ್‌ಬಾಲ್ ಟ್ರಿಕ್‌ನ್ನು ನಿಜಜೀವನದಲ್ಲಿ ಬಳಸಿಕೊಂಡು ಒಂದು ಜೀವ ಉಳಿಸಿದ್ದಾರೆ. ವಿಡಿಯೋ ವೈರಲ್ಲ ಆಗಿದ್ದು ಯುವಕನನ್ನು ಜನ ಶ್ಲಾಘಿಸಿದ್ದಾರೆ.

28 ವರ್ಷದ ಫಿಲಿಪ್ ಅಮೆರಿಕ ಮೆರೈನ್‌ನಲ್ಲಿ ಕೆಲಸ ಮಾಡುತ್ತಿದ್ದ. ಮಗು ಬೀಳುತ್ತಿರುವ ದೇಶ್ಯ ನೋಡಿ ಹೇಗೋ ಆತನನ್ನು ರಕ್ಷಿಸುವುದಕ್ಕೆ ಸಾಧ್ಯವಾಯಿತು ಎಂದು ಯುವಕ ಹೇಳಿದ್ದಾನೆ.

ಕೊರೋನಾ ಔಷಧ ಕಂಡು ಹಿಡಿಯುವ ಪೈಪೋಟಿ ಮಧ್ಯೆ ಸಿಕ್ತು ಏಡ್ಸ್‌ಗೆ ಮದ್ದು!

ಮೊಬೈಲ್ ಫೋನ್‌ನಲ್ಲಿ ವಿಡಿಯೋ ಶೂಟ್ ಮಾಡಲಾಗಿದ್ದು, ಇದರಲ್ಲಿ ಫಿಲಿಪ್ ಓಡಿ ಬಂದು ಮಗುವನ್ನು ಹಿಡಿಯುವುದು ಕಾಣಬಹುದು. ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿರುವುದರಿಂದ ಅಪಾಯ ಬಂದಾಗ ಇತರರನ್ನು ರಕ್ಷಿಸುವುದಕ್ಕೆ ಮುಂದಾಗುತ್ತೇನೆ. ತಕ್ಷಣ ಮನಸು ಹಾಗೆಯೇ ಯೋಚಿಸುತ್ತದೆ ಎಂದಿದ್ದಾರೆ.