ಫ್ಲೋರಿಡಾದಲ್ಲಿ 27 ವರ್ಷದ ಶಿಕ್ಷಕಿಯೊಬ್ಬರು ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದಾರೆ. ತಿಂಗಳುಗಟ್ಟಲೆ ನಡೆದ ಈ ಸಂಬಂಧವು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಶಿಕ್ಷಕಿಯನ್ನು ಬಂಧಿಸಲಾಗಿದೆ.

ನವದೆಹಲಿ (ಜೂ.9): ವಿದ್ಯಾರ್ಥಿ ಜೊತೆ ಸೆಕ್ಸ್‌ ಮಾಡಿದ ಕಾರಣಕ್ಕಾಗಿ ಅಮೆರಿಕದಲ್ಲಿ ಮತ್ತೊಬ್ಬ ಶಿಕ್ಷಕಿಯ ಬಂಧನವಾಗಿದೆ. ಹಿಲ್ಸ್‌ಬರೋ ಕೌಂಟಿ ಶೆರಿಫ್ ಕಚೇರಿಯ ಪ್ರಕಾರ, ಫ್ಲೋರಿಡಾದ ರಿವರ್‌ವ್ಯೂ ಹೈಸ್ಕೂಲ್‌ನಲ್ಲಿ 27 ವರ್ಷದ ಶಿಕ್ಷಕಿ ಬ್ರೂಕ್ ಆಂಡರ್ಸನ್, ಶಾಲಾ ದಿನ ಪ್ರಾರಂಭವಾಗುವ ಕೆಲ ದಿನ ಮೊದಲು ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದಾಗಿ ಬಂಧನವಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಡೈಲಿ ಸ್ಟಾರ್ ವರದಿಯ ಪ್ರಕಾರ, ಆಂಡರ್ಸನ್ ಅಪ್ರಾಪ್ತ ವಯಸ್ಕ ಬಾಲಕನೊಂದಿಗೆ ತಿಂಗಳುಗಟ್ಟಲೆ ಲೈಂಗಿಕ ಸಂಬಂಧ ಹೊಂದಿದ್ದ ಆರೋಪ ಎದುರಿಸುತ್ತಿದ್ದಾರೆ. ಎರಡು ವಾರಗಳ ಹಿಂದೆ ಆರೋಪಗಳನ್ನು ದಾಖಲಿಸಲಾಗಿದ್ದು, ಅಪ್ರಾಪ್ತ ವಯಸ್ಕ ಬಾಲಕನೊಂದಿಗೆ ಕಾನೂನುಬಾಹಿರ ಲೈಂಗಿಕ ಚಟುವಟಿಕೆ ನಡೆಸಿದ ಆರೋಪದ ಮೇಲೆ ಅವರು ಮೂರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಮೇ 16 ರ ಬೆಳಿಗ್ಗೆ, ಆಂಡರ್ಸನ್ ಬಂಧನಕ್ಕೆ ಮುಂಚಿತವಾಗಿ ರಿವರ್‌ವ್ಯೂ ಪ್ರೌಢಶಾಲೆಯ ವಿದ್ಯಾರ್ಥಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ. ಆಂಡರ್ಸನ್ ಮತ್ತು ವಿದ್ಯಾರ್ಥಿಯ ನಡುವೆ ಅನುಚಿತ ಸಂಬಂಧವಿದೆ ಎಂಬ ವರದಿಗಳ ನಂತರ ಹಿಲ್ಸ್‌ಬರೋ ಕೌಂಟಿ ಶೆರಿಫ್ ಕಚೇರಿ ತನಿಖೆಯನ್ನು ಪ್ರಾರಂಭಿಸಿತು. ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಯು ತಮ್ಮ ಸಂಬಂಧವು ಸೆಪ್ಟೆಂಬರ್ 2024 ರಲ್ಲಿ ಸೆಕ್ಸ್‌ ಎಸ್‌ಎಂಎಸ್‌ ಮೂಲಕ ಪ್ರಾರಂಭವಾಯಿತು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಆಂಡರ್ಸನ್ ಬಂಧನಕ್ಕೆ ಮುಂಚಿನ ವಾರಗಳಲ್ಲಿ, ಸಂಬಂಧವು ಹದಗೆಟ್ಟಿತು ಮತ್ತು "ಲೈಂಗಿಕ ಚಟುವಟಿಕೆಯ ಅನೇಕ ನಿದರ್ಶನಗಳು" ಕಂಡುಬಂದವು ಎನ್ನಲಾಗಿದೆ.

ಹಿಲ್ಸ್‌ಬರೋ ಕೌಂಟಿಯ ಸಾರ್ವಜನಿಕ ಶಾಲಾ ಶಿಕ್ಷಕರ ಡೈರೆಕ್ಟರಿಯ ಪ್ರಕಾರ, ಆಂಡರ್ಸನ್ ರಿವರ್‌ವ್ಯೂ ಹೈಸ್ಕೂಲ್‌ನಲ್ಲಿ ವಿಜ್ಞಾನ ಶಿಕ್ಷಕಿಯಾಗಿದ್ದಾರೆ, ಆದರೆ ಆಕೆಯ ಬಂಧನದ ನಂತರ ಆ ಡೈರೆಕ್ಟರಿಯಿಂದ ಅವರ ಹೆಸರನ್ನು ತೆಗೆದುಹಾಕಿದೆ. ಆನ್‌ಲೈನ್ ಜೈಲು ದಾಖಲೆಗಳ ಪ್ರಕಾರ, ಆಂಡರ್ಸನ್ ಮೇಲೆ ಅಪ್ರಾಪ್ತ ಬಾಲಕನೊಂದಿಗೆ ಕಾನೂನುಬಾಹಿರ ಲೈಂಗಿಕ ಚಟುವಟಿಕೆ ನಡೆಸಿದ ಮೂರು ಆರೋಪಗಳನ್ನು ಹೊರಿಸಲಾಗಿದೆ. ನ್ಯಾಯಾಧೀಶರು ಆಕೆಗೆ $45,000 ಜಾಮೀನು ನಿಗದಿಪಡಿಸಿದ ಮರುದಿನ ಆಕೆಯನ್ನು ಬಿಡುಗಡೆ ಮಾಡಲಾಯಿತು, ಪ್ರತಿ ಆರೋಪಕ್ಕೂ $15,000 ದಂಡದೊಂದಿಗೆ ಜಾಮೀನು ನೀಡಲಾಗಿದೆ.

ಆಂಡರ್ಸನ್ ನೇಮಕಗೊಳ್ಳುವ ಮೊದಲು ಅಗತ್ಯವಿರುವ ಎಲ್ಲಾ ತಪಾಸಣೆಗಳು ಮತ್ತು ಹಿನ್ನೆಲೆ ಪರಿಶೀಲನೆಗಳಲ್ಲಿ ಪಾಸ್‌ ಆಗಿದ್ದರು ಎಂದು ಶಾಲೆ ತಿಳಿಸಿದೆ. ಆಕೆಯನ್ನು ಈಗ ಅಮಾನತು ಮಾಡಲಾಗಿದ್ದು, ಶೀಘ್ರದಲ್ಲೇ ಸೇವೆಯಿಂದ ವಜಾ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

"ಈ ಶಿಕ್ಷಕಿ ವಿದ್ಯಾರ್ಥಿ, ಶಾಲೆ ಮತ್ತು ಇಡೀ ಸಮುದಾಯದ ನಂಬಿಕೆಗೆ ದ್ರೋಹ ಬಗೆದಿದ್ದಾಳೆ. ಕಲಿಕೆಗೆ ಸುರಕ್ಷಿತ, ಬೆಂಬಲ ನೀಡುವ ವಾತಾವರಣವಿರಬೇಕಾದ ಸ್ಥಳವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆಕೆಯ ಕ್ರಮಗಳು ಕ್ರಿಮಿನಲ್' ಎಂದು ಶೆರಿಫ್ ಚಾಡ್ ಕ್ರೋನಿಸ್ಟರ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಕ್ರಮ ಲೈಂಗಿಕ ಸಂಬಂಧಗಳಲ್ಲಿ ತೊಡಗುವ ಆತಂಕಕಾರಿ ವಿದ್ಯಮಾನವು ಹೆಚ್ಚುತ್ತಿರುವ ಕಳವಳಕಾರಿ ಸಂಗತಿಯಾಗಿದೆ. ವರದಿಗಳ ಪ್ರಕಾರ, 2014 ಮತ್ತು 2019 ರ ನಡುವೆ 500 ಕ್ಕೂ ಹೆಚ್ಚು ಶಿಕ್ಷಕರ ದುಷ್ಕೃತ್ಯ ಪ್ರಕರಣಗಳು ವರದಿಯಾಗಿವೆ, ಸುಮಾರು 10 ವಿದ್ಯಾರ್ಥಿಗಳಲ್ಲಿ 1 ಶಿಕ್ಷಕನಿಂದ ಒಂದಲ್ಲ ಒಂದು ರೀತಿಯ ಲೈಂಗಿಕ ದುಷ್ಕೃತ್ಯವನ್ನು ಅನುಭವಿಸುತ್ತಿದ್ದಾನೆ.