ದೂರ ಸಾಗರದಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರನೋರ್ವನಿಗೆ ಭಾರಿ ಗಾತ್ರದ ಟೈಗರ್ ಶಾರ್ಕೊಂದು ಎದುರಾಗಿದ್ದು, ಆತ ತನ್ನ ಸಮಯಪ್ರಜ್ಷೆಯಿಂದಾಗಿ ಸಾವಿನ ದವಡೆಯಿಂದ ಜಸ್ಟ್ ಎಸ್ಕೇಪ್ ಆಗಿದ್ದಾನೆ.
ನವದೆಹಲಿ: ಸಮುದ್ರದಲೆಗಳನ್ನು ಎದುರಿಸಿಕೊಂಡು ದೂರ ತೀರದಲ್ಲಿ ನಡೆಸುವ ಮೀನುಗಾರಿಕೆ ಮೀನು ತಿಂದಷ್ಟು ಸುಲಭವಲ್ಲ. ರುಚಿ ರುಚಿಯಾಗಿರುವ ಮೀನು ನಾವು ತಿನ್ನಬೇಕಾದರೆ ಓರ್ವ ಮೀನುಗಾರ ಸಾಗರದಾಳದಲ್ಲಿ ಅಲೆಗಳ ಮಧ್ಯೆ ತೊಳಲಾಡುತ್ತ ಮೀನುಗಾರಿಕೆ ನಡೆಸಬೇಕು. ಈ ಸಂದರ್ಭದಲ್ಲಿ ಬರೀ ಅಲೆಗಳು ಮಾತ್ರವಲ್ಲ ದೊಡ್ಡ ದೊಟ್ಟ ಗಾತ್ರದ ತಿಮಿಂಗಲಗಳು ಕೂಡ ಕೆಲವೊಮ್ಮ ನಿಮ್ಮ ಮೀನುಗಾರಿಕಾ ಬೋಟ್‌ನ್ನು ಮೇಲೆ ಕೆಳಗೆ ಮಾಡಬಲ್ಲವು. ಅದೇ ರೀತಿ ಹೀಗೆ ದೂರ ಸಾಗರದಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರನೋರ್ವನಿಗೆ ಭಾರಿ ಗಾತ್ರದ ಟೈಗರ್ ಶಾರ್ಕೊಂದು ಎದುರಾಗಿದ್ದು, ಆತ ತನ್ನ ಸಮಯಪ್ರಜ್ಷೆಯಿಂದಾಗಿ ಸಾವಿನ ದವಡೆಯಿಂದ ಜಸ್ಟ್ ಎಸ್ಕೇಪ್ ಆಗಿದ್ದಾನೆ.
ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು ಯುಟ್ಯೂಬ್‌ನಲ್ಲಿ (Youtube) ವೈರಲ್ ಆಗಿದೆ. ಯುವಕ ತನ್ನ ಬೋಟ್‌ನ ಜೊತೆ ಸಾಗರದ ಮಧ್ಯೆ ಸಾಗುತ್ತಿದ್ದರೆ ದೂರದಿಂದ ಬಂದ ಶಾರ್ಕ್ (Tiger Shark) ಆತನ ಬೋಟ್ ಮೇಲೇ ಅರ್ಧದಷ್ಟು ಏರಿ ಆಮೇಲೆ ಮತ್ತೆ ನೀರಿಗಿಳಿದಿದೆ. ಶಾರ್ಕ್ ಬಂದ ರಭಸಕ್ಕೆ ಬೋಟ್ ಬಹುತೇಕ ಅತ್ತಿತ್ತ ಓಲಾಡಿ ಅಲ್ಲೋಲಕಲ್ಲೋಲವಾಗಿದೆ. ಈ ವೇಳೆ ಆತ ಕಾಲಿನಿಂದ ಶಾರ್ಕ್‌ನ್ನು ಕೆಳಗೆ ತಳ್ಳಿದ್ದನ್ನು ಕಾಣಬಹುದಾಗಿದೆ. ನಾನು ಇದನ್ನು ಹೇಗೆ ಮಾಡಿದೆನೋ ನನಗೆ ಗೊತ್ತಿಲ್ಲ. ಆದರೆ ನನ್ನ ಕಾಲು ಶಾರ್ಕ್‌ನ್ನು ದೂರ ತಳ್ಳಿತ್ತು. ದೇವರಿಗೆ ಧನ್ಯವಾದ ಎಂದು ಆತ ಹೇಳಿಕೊಂಡಿದ್ದಾನೆ. ಈ ವೀಡಿಯೋವನ್ನು ಆತ ಶ್ಲೋ ಮೋಷನ್‌ನಲ್ಲಿಯೂ ತೋರಿಸಿದ್ದು ಒಂದು ಕ್ಷಣ ಎದೆ ಝಲ್ ಎನಿಸುತ್ತಿದೆ.
ಉಡುಪಿ: ಬಲವಾದ ಗಾಳಿ, ಮಲ್ಪೆ ಕಡಲಿಗೆ ಇಳಿಯದ ಮೀನುಗಾರಿಕೆ ಬೋಟುಗಳು!
Hawaii Nearshore Fishing ಎಂಬ ಯೂಟ್ಯೂಬ್ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಅಗಿದೆ, ಮೇ. 12 ರಂದು 42 ಸೆಕೆಂಡ್‌ಗಳ ಈ ವೀಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಒಂದು ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ.
ನಾನು ಮೊದಲಿಗೆ ಏನೋ ಸದ್ದನ್ನು ಕೇಳಿದೆ ತಲೆಯೆತ್ತಿ ನೋಡಿದಾಗ ಕಯಾಕ್‌ನ ಬದಿಯಲ್ಲಿ ವಿಶಾಲವಾದ ಕಂದು ವಸ್ತುವನ್ನು ನೋಡಿದೆ. ಮೊದಲಿಗೆ ನಾನು ಅದನ್ನು ಆಮೆ ಎಂದು ಭಾವಿಸಿದ್ದೆ. ಇದಾಗಿ ಕ್ಷಣದಲ್ಲಿ ನನ್ನನ್ನು ರಕ್ಷಿಸಿಕೊಳ್ಳಲು ನನ್ನ ಎಡ ಪಾದವನ್ನು ನೀರಿನಿಂದ ಹೊರ ತೆಗೆದೆ ಅಷ್ಟರಲ್ಲಿ ಶಾರ್ಕ್ ಬೋಟ್ ಸಮೀಪಿಸಿದ್ದು, ನನ್ನ ಕಾಲಿನಿಂದ ಶಾರ್ಕ್‌ನ ತಲೆಯನ್ನು ತಳ್ಳಿದೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಅವರು ಯೂಟ್ಯೂಬ್‌ನಲ್ಲಿ ಹೇಳಿಕೊಂಡಿದ್ದಾರೆ.
ಸಮುದ್ರಯಾನ ಇಷ್ಟನಾ? ಹಾಗಿದ್ದರೆ ಶಿಪ್ ಕೆಟರಿಂಗ್ ಕೋರ್ಸ್ ಮಾಡಿ!
ಒಂದು ವೇಳೆ ಶಾರ್ಕ್ ಇಲ್ಲದಿದ್ದರೂ ಇನ್ನೊಮ್ಮೆ ನೀವಿದನ್ನು ಮಾಡಲು ನನ್ನನ್ನು ಕೇಳಿದರೆ, ನನಗೆ ಅಂತಹ ವಿಶ್ವಾಸ ಇರುತ್ತದೆ ಎಂದು ಹೇಳಲಾಗದು. ನಾನು ಮನೆಯಲ್ಲಿ ವೀಡಿಯೊವನ್ನು ನೋಡುವವರೆಗೂ ಶಾರ್ಕ್ ಕಯಾಕ್ ಅನ್ನು ತಾಗಿದೆ ಎಂದು ಮಾತ್ರ ನಾನು ಭಾವಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಾವಿನ ದವಡೆಯಿಂದ ಪಾರಾಗಿ ಬಂದ ರೋಚಕ ಕ್ಷಣವಾಗಿದ್ದು, ಅನೇಕರು ಯುವಕನ ಕ್ಷೇಮವನ್ನು ವಿಚಾರಿಸಿದ್ದಾರೆ. ನೀವು ಕ್ಷೇಮವಾಗಿ ಮರಳಿದ್ದು ದೊಡ್ಡ ಸಾಧನೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
