ಉಡುಪಿ: ಬಲವಾದ ಗಾಳಿ, ಮಲ್ಪೆ ಕಡಲಿಗೆ ಇಳಿಯದ ಮೀನುಗಾರಿಕೆ ಬೋಟುಗಳು!
ಕಡಲು ಮತ್ತೆ ಕೈಕೊಟ್ಟಿದೆ. ಮೀನುಗಾರಿಕೆಯನ್ನು ನಂಬಿ ಜೀವನ ನಡೆಸುವವರು ಸಂಕಷ್ಟಕ್ಕೆ ಈಡಾಗಿದ್ದಾರೆ. ಪ್ರಾಕೃತಿಕ ವಿಕೋಪಗಳಿಂದಾಗಿ ಪದೇಪದೆ ಮೀನುಗಾರರು ಕಷ್ಟ ಅನುಭವಿಸುವಂತಾಗಿದೆ.
ಉಡುಪಿ (ಮೇ.5) : ಕಡಲು ಮತ್ತೆ ಕೈಕೊಟ್ಟಿದೆ. ಮೀನುಗಾರಿಕೆಯನ್ನು ನಂಬಿ ಜೀವನ ನಡೆಸುವವರು ಸಂಕಷ್ಟಕ್ಕೆ ಈಡಾಗಿದ್ದಾರೆ. ಪ್ರಾಕೃತಿಕ ವಿಕೋಪಗಳಿಂದಾಗಿ ಪದೇಪದೆ ಮೀನುಗಾರರು ಕಷ್ಟ ಅನುಭವಿಸುವಂತಾಗಿದೆ.
ಮಲ್ಪೆ(Malpe)ಯಲ್ಲಿ ನಾಲ್ಕೈದು ದಿನಗಳಿಂದ ಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಆಳ ಸಮುದ್ರ ಸಹಿತ ಎಲ್ಲ ವಿಧದ ಮೀನುಗಾರಿಕೆಗೆ ಅಡ್ಡಿಯಾಗಿದೆ. ಮಾರ್ಚ್‌ನಲ್ಲಿಯೂ ಇದೇ ರೀತಿ ಭಾರೀ ಗಾಳಿಯಿಂದಾಗಿ ಮೀನುಗಾರಿಕೆ ಕೆಲವು ದಿನ ಸ್ಥಗಿತಗೊಂಡಿತ್ತು.
ಈಗ ಮತ್ತೆ ಅದೇ ಪರಿಸ್ಥಿತಿ ಉದ್ಭವಿಸಿರುವುದರಿಂದ ಆಳ ಸಮುದ್ರ ಮೀನುಗಾರಿಕೆಗೆ ಬಹುತೇಕ ಪೂರ್ಣ ವಿರಾಮ ಬಿದ್ದಿದೆ. ಉತ್ತಮ ಸೀಸನ್ ಇರುವಾಗಲೇ ಮೀನುಗಾರಿಕೆ ಸ್ಥಗಿತಗೊಳಿಸಬೇಕಾಗಿರುವುದು ಮೀನುಗಾರರ ನೋವಿಗೆ ಕಾರಣವಾಗಿದೆ. ಗಾಳಿಯ ತೀವ್ರತೆ ಮತ್ತಷ್ಟು ಹೆಚ್ಚುವ ಕಾರಣ ಕಡಲಿಗೆ ಇಳಿಯಲು ಧೈರ್ಯ ಮಾಡುತ್ತಿಲ್ಲ.
ಉಡುಪಿ: ಕರಾವಳಿ ತೀರದಲ್ಲಿ ಅಂತರ್ಜಲ ನಿಕ್ಷೇಪಗಳ ಪತ್ತೆ, ಮಣಿಪಾಲ ಸಂಶೋಧಕರಿಂದ ಅನ್ವೇಷಣೆ
ಗಂಗೊಳ್ಳಿ, ಮಲ್ಪೆ, ಮಂಗಳೂರು, ಭಟ್ಕಳ, ಹೊನ್ನಾವರ, ತದಡಿ, ಕಾರವಾರ ಸಹಿತ ಎಲ್ಲ ಕಡೆ ಬಹುತೇಕ ಮೀನುಗಾರರು ಕಡಲಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಎಪ್ರಿಲ್ 30ರ ಬಳಿಕ ಬಹುತೇಕ ಪರ್ಸಿನ್, ಟ್ರಾಲ್ ಬೋಟ್, ಸಣ್ಣ ಟ್ರಾಲ್ ಬೋಟುಗಳು ಲಂಗರು ಹಾಕಿವೆ.
2-3 ದಿನಗಳಿಂದ ನಾಡ ದೋಣಿಗಳು ಕೂಡ ಕಡಲಿಗಿಳಿಯುತ್ತಿಲ್ಲ.ಸಮುದ್ರದಲ್ಲಿ ಗಂಟೆಗೆ 28ರಿಂದ 32 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಬೆಳಗ್ಗೆ 5.30ರಿಂದ ಬೆಳಗ್ಗೆ 11.30ರ ವರೆಗೆ ತಾಸಿಗೆ 14-21 ಕಿ.ಮೀ. ವೇಗದಲ್ಲಿದ್ದರೆ ಬಳಿಕ ಸಂಜೆಯವರೆಗೆ ಗಾಳಿಯ ವೇಗ ಹೆಚ್ಚುತ್ತಿದೆ.
ಉಡುಪಿ: ಕರಾವಳಿ ಜಂಕ್ಷನ್- ಮಲ್ಪೆ ಚತುಷ್ಪಥ ರಸ್ತೆ ಕಾಮಗಾರಿಗೆ ಚಾಲನೆ
ಇದು ಅತ್ಯಂತ ಅಪಾಯಕಾರಿ. ಅಲೆಗಳ ಅಬ್ಬರವೂ ಜಾಸ್ತಿ ಇರುವುದರಿಂದ ಬಲೆ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಮೀನುಗಾರರು ಹೇಳಿದ್ದಾರೆ. ಮಳೆಗಾಲ ಆರಂಭಕ್ಕೆ ಮೊದಲೇ ಮೀನುಗಾರಿಕೆ ಸ್ಥಗಿತ ಮಾಡಬೇಕಾಗಿರುವುದು ಕರಾವಳಿಯ ಆರ್ಥಿಕತೆಗೆ ತೊಂದರೆ ಉಂಟುಮಾಡಿದೆ.