Asianet Suvarna News Asianet Suvarna News

ಹೊಸ ವರ್ಷದ ಮೊದಲ ದಿನವೇ ಶಾಕ್: ಜಪಾನ್‌ನಲ್ಲಿ 7.6 ತೀವ್ರತೆ ಪ್ರಬಲ ಭೂಕಂಪ; ಅಪಾಯಕಾರಿ ಸುನಾಮಿ ಎಚ್ಚರಿಕೆ

ಜಪಾನ್ ಕರಾವಳಿಯಲ್ಲಿ ಭೂಕಂಪದ ಕೇಂದ್ರಬಿಂದುವಿನ 300 ಕಿಲೋಮೀಟರ್ (190 ಮೈಲುಗಳು) ಒಳಗೆ ಅಪಾಯಕಾರಿ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಹವಾಯಿ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.

first tsunami waves hit japan after 7 6 quake 5 metre waves expected too ash
Author
First Published Jan 1, 2024, 3:25 PM IST

ಟೋಕಿಯೋ (ಜನವರಿ 1, 2024): ಮಧ್ಯ ಜಪಾನ್‌ನಲ್ಲಿ ಸೋಮವಾರ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಜಿಯಾಲಜಿಕಲ್‌ ಸರ್ವೇ (ಯುಎಸ್‌ಜಿಎಸ್) ಹೇಳಿದೆ. ಈ ಹಿನ್ನೆಲೆ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಭೂಕಂಪಕ್ಕೊಳಗಾದ ಪ್ರದೇಶದ ಜನರನ್ನು ಎತ್ತರದ ಪ್ರದೇಶಕ್ಕೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದರು. 

ಸೋಮವಾರ ಸಂಜೆ ಜಪಾನ್ ಕಾಲಮಾನ 4:10 pm (0710 GMT) ಸುಮಾರಿಗೆ ಇಶಿಕಾವಾ ಪ್ರಾಂತ್ಯದ ನೋಟೊ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಈ ಸಂಬಂಧ ಎಲ್ಲಾ ನಿವಾಸಿಗಳು ತಕ್ಷಣವೇ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ರಾಷ್ಟ್ರೀಯ ಪ್ರಸಾರಕ ಎನ್‌ಎಚ್‌ಕೆ ವರದಿ ಮಾಡಿದೆ.

ಹೊಸ ವರ್ಷ ಸಂಭ್ರಮಾಚರಣೆಗೂ ಮುನ್ನ ಭಾರತಕ್ಕೆ ಆಘಾತ, ಕಾಶ್ಮೀರದ ಕುಪ್ವಾರದಲ್ಲಿ ಭೂಕಂಪ!

ಹಾಗೂ, ಜಪಾನ್ ಕರಾವಳಿಯಲ್ಲಿ ಭೂಕಂಪದ ಕೇಂದ್ರಬಿಂದುವಿನ 300 ಕಿಲೋಮೀಟರ್ (190 ಮೈಲುಗಳು) ಒಳಗೆ ಅಪಾಯಕಾರಿ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಹವಾಯಿ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ. ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರಕ್ಕೆ 1.2 ಮೀಟರ್‌ಗಳಷ್ಟು ಸುನಾಮಿ ಬಂದಿರುವುದು ದೃಢಪಟ್ಟಿದೆ. ಹಾಗೂ, ಅದೇ ಪ್ರದೇಶದಲ್ಲಿ ನೋಟೋದಲ್ಲಿ ಐದು ಮೀಟರ್‌ಗಳಷ್ಟು ಹೆಚ್ಚಿನ ಸುನಾಮಿ ಬರುವ ನಿರೀಕ್ಷೆಯಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ತಿಳಿಸಿದೆ.

ಜಪಾನ್‌ನ ಪ್ರಮುಖ ದ್ವೀಪವಾದ ಹೊನ್‌ಶುವಿನ ಜಪಾನ್ ಸಮುದ್ರದ ಭಾಗದಲ್ಲಿ ನೋಟೋದ ಪ್ರದೇಶದಲ್ಲಿ ಸರಣಿ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನ ಸಂಜೆ 4:06 ಕ್ಕೆ 5.7 ತೀವ್ರತೆಯ ಕಂಪನದೊಂದಿಗೆ ಪ್ರಾರಂಭವಾಗಿದ್ದು, ಸಂಜೆ 4:10 ಕ್ಕೆ 7.6 ತೀವ್ರತೆಯ ಭೂಕಂಪ, 4:18 ಕ್ಕೆ 6.1, 4:23 ಕ್ಕೆ 4.5 ರಷ್ಟು ಭೂಕಂಪ, 4:29 ಕ್ಕೆ 4.6 ಮತ್ತು  ಸಂಜೆ 4:32ಕ್ಕೆ 4.8 ರಷ್ಟು ಭೂಕಂಪನ ಸಂಭವಿಸಿದೆ. ಇದರ ಬೆನ್ನಲ್ಲೇ 6.2 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೇ ತಿಳಿಸಿದೆ.

ಚೀನಾದಲ್ಲಿ ಭಾರೀ ಭೂಕಂಪ: 131 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯ, ಭರದಿಂದ ಸಾಗುತ್ತಿರುವ ರಕ್ಷಣಾ ಕಾರ್ಯಾಚರಣೆ

Latest Videos
Follow Us:
Download App:
  • android
  • ios