Asianet Suvarna News Asianet Suvarna News

ಹೊಸ ವರ್ಷ ಸಂಭ್ರಮಾಚರಣೆಗೂ ಮುನ್ನ ಭಾರತಕ್ಕೆ ಆಘಾತ, ಕಾಶ್ಮೀರದ ಕುಪ್ವಾರದಲ್ಲಿ ಭೂಕಂಪ!

ಹೊಸ ವರ್ಷಾಚರಣೆಗೆ ಭಾರತ ಸಜ್ಜಾಗಿದೆ. ಇದರ ನಡುವೆ ಭಾರತಕ್ಕೆ ಭೂಕಂಪ ಆತಂಕ ಎದುರಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿಂದು ಭೂಮಿ ಕಂಪಿಸಿದೆ. ನಿನ್ನೆ ಮಣಿಪುರದಲ್ಲಿ ಭೂಮಿ ಕಂಪಿಸಿದ್ದರೆ, ಇಂದು ಕುಪ್ವಾರದಲ್ಲಿ ಭೂಕಂಪ ಸಂಭವಿಸಿದೆ.

Earthquake hits Jammu and kashmir Kupwara seismology report 3 6 magnitude ckm
Author
First Published Dec 30, 2023, 6:43 PM IST

ಶ್ರೀನಗರ(ಡಿ.30) ಹೊಸ ವರ್ಷ ಬರಮಾಡಿಕೊಳ್ಳಲು ಭಾರತ ಸಜ್ಜಾಗಿದೆ. ಆದರೆ ಹೊಸ ವರ್ಷಕ್ಕೂ ಮೊದಲೇ ಭಾರತಕ್ಕೆ ಭೂಪಂಕ ಆತಂಕ ಎದುರಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.6ರ ತೀವ್ರತೆ ದಾಖಲಾಗಿದೆ. ಸಂಜೆ 4.57ರ ವೇಳೆಗೆ ಲುಘು ಭೂಕಂಪ ಸಂಭವಿಸಿದೆ. 5 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿರುವುದಾಗಿ ಭೂಕಂಪ ರಾಷ್ಟ್ರೀಯ ಕೇಂದ್ರ ಸ್ಪಷ್ಟಪಡಿಸಿದೆ.ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಜನರು ಮನೆಯಿಂದ ಹೊರಬಂದಿದ್ದಾರೆ. ಅಂಗಡಿ ಮುಂಗಟ್ಟುಗಳ ಜನ ಹೊರಬಂದಿದ್ದಾರೆ. ಮಕ್ಕಳು ಭಯಭೀತರಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ  ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಅನ್ನೋ ಮಾಹಿತಿಗಳು ಲಭ್ಯವಾಗಿದೆ. 

ಶುಕ್ರವಾರ(ಡಿ.29) ಮಣಿಪುರದಲ್ಲಿ 4.6ರ ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಭೂಮಿ ಕಂಪಸಿತ್ತು. ಮಣಿಪುರದ ಉಖ್ರುಲ್ ಪ್ರದೇಶದಲ್ಲಿ ಭೂಮಿ ಕಂಪಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ನಿನ್ನೆ ಈಶಾನ್ಯ ಭಾಗದಲ್ಲಿ ಕಂಪಸಿದ ಭೂಮಿ ಇಂದು ಉತ್ತರ ಭಾರತದಲ್ಲಿ ಕಂಪಿಸಿದೆ.

ಚೀನಾದಲ್ಲಿ ಭಾರೀ ಭೂಕಂಪ: 131 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯ, ಭರದಿಂದ ಸಾಗುತ್ತಿರುವ ರಕ್ಷಣಾ ಕಾರ್ಯಾಚರಣೆ

ಕಾಶ್ಮೀರದಲ್ಲಿ ಭೂಕಂಪನ ಸಂಭವಿಸುವುದಕ್ಕಿಂತ ಮೊದಲು ಇಂಡೋನೇಷಿಯಾದ ಆ್ಯಚೆ ಪ್ರಾಂತ್ಯದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.9ರ ತೀವ್ರತೆ ದಾಖಲಾಗಿದೆ. ಆ್ಯಚೆ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪನ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿತ್ತು. 362 ಕಿಲೋಮೀಟರ್ ಸಿನಾಬಾಗ್ ಪ್ರಾಂತ್ಯ ಭೂಕಂಪ ಕೇಂದ್ರ ಬಿಂದುವಾಗಿದೆ. 

ಡಿಸೆಂಬರ್ 19 ರಂದು ಚೀನಾ ಭಾಗದಲ್ಲಿ ಭೀಕರ ಭೂಪಂಕ ಸಂಭವಿಸಿತ್ತು. ಚೀನಾದ ವಾಯವ್ಯ ಭಾಗದ ಗಾನ್ಸು ಹಾಗೂ ಕಿಂಗಾಯ್‌ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭಿವಿಸಿತ್ತು. ರಿಕ್ಟರ್ ಮಾಪಕದಲ್ಲಿ  6.2 ತೀವ್ರತೆ ದಾಖಲಾಗಿತ್ತು. 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ ಪರಿಣಾಮ ಟಿಬೆಟ್‌ಗೆ ಹೊಂದಿಕೊಂಡಂತಿರುವ ಎರಡು ಹಿಮಾಲಯ ಶಿಖರದ ಪ್ರಾಂತ್ಯಗಳಲ್ಲಿ ಭಾರೀ ಆಸ್ತಿ-ಪಾಸ್ತಿ ಹಾನಿಯಾಗಿತ್ತು. 118 ಮಂದಿ ಮೃತಪಟ್ಟಿದ್ದರೆ,  579 ಗಾಯಗೊಂಡಿದ್ದರು. 

 

ಜ್ವಾಲಾಮುಖಿಗೂ ಮೊದಲು 14 ಗಂಟೆಯಲ್ಲಿ 800 ಬಾರಿ ಭೂಕಂಪನ: ಐಸ್‌ಲ್ಯಾಂಡ್‌ನಲ್ಲಿ ತುರ್ತುಪರಿಸ್ಥಿತಿ

ಈ ತಿಂಗಳ ಆರಂಭದಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ಉಕ್ಕುಮನಾಳ ಗ್ರಾಮದಲ್ಲಿ ಭೂಕಂಪನ ಅನುಭವವಾಗಿತ್ತು.  ರಿಕ್ಟರ್‌ ಮಾಪಕದಲ್ಲಿ 3ರಷ್ಟು ತೀವ್ರತೆ ದಾಖಲಾಗಿತ್ತು. ಉಕ್ಕುಮನಾಳ ಗ್ರಾಮದ ಸುತ್ತಮುತ್ತ ಬೆಳಗ್ಗೆ 6.52ರ ಸುಮಾರಿಗೆ ಭೂಮಿ ಕಂಪಿಸಿದೆ. ಎರಡು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಪದೇ ಪದೆ ಭೂಕಂಪನದ ಅನುಭವ ಆಗುತ್ತಲೇ ಇದೆ. ಇದರಿಂದ ಜಿಲ್ಲೆಯ ಜನ ಈಗಾಗಲೇ ಆತಂಕದಲ್ಲಿ ದಿನದೂಡುತ್ತಿದ್ದಾರೆ.

Follow Us:
Download App:
  • android
  • ios