ಮನಸ್ಸಿನಲ್ಲಿ ಯೋಚಿಸಿ ಮೌಸ್‌ ಚಲಾಯಿಸಿದ ರೋಗಿ: ಮಸ್ಕ್‌ ನ್ಯೂರೋಲಿಂಕ್‌ ಯೋಜನೆಗೆ ಮೊದಲ ಯಶಸ್ಸು

ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಮೆದುಳಿಗೆ ಚಿಪ್‌ ಅಳವಡಿಸಿಕೊಂಡಿದ್ದ ವ್ಯಕ್ತಿ ತನ್ನ ಮನಸ್ಸಿನಲ್ಲಿ ಯೋಚಿಸುವ ಮೂಲಕವೇ ದೂರದಲ್ಲಿದ್ದ ಕಂಪ್ಯೂಟರ್‌ ಮೌಸ್‌ ಚಲಿಸುವಂತೆ ಮಾಡಿದ್ದಾರೆ ಎಂದು ಮಸ್ಕ್‌ ಮಾಹಿತಿ ನೀಡಿದ್ದಾರೆ.

First success for Elon Musks NeuroLink project A patient who moved the mouse thinking in his mind akb

ನ್ಯೂಯಾರ್ಕ್‌: ಆಧುನಿಕ ವೈದ್ಯಕೀಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ ಬರೆಯಬಹುದು ಎಂದು ಎಣಿಸಲಾಗಿರುವ ಎಲಾನ್‌ ಮಸ್ಕ್‌ರ ನ್ಯೂರೋಲಿಂಕ್‌ ಯೋಜನೆಗೆ ಮೊದಲ ಯಶಸ್ಸು ಸಿಕ್ಕಿದೆ. ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಮೆದುಳಿಗೆ ಚಿಪ್‌ ಅಳವಡಿಸಿಕೊಂಡಿದ್ದ ವ್ಯಕ್ತಿ ತನ್ನ ಮನಸ್ಸಿನಲ್ಲಿ ಯೋಚಿಸುವ ಮೂಲಕವೇ ದೂರದಲ್ಲಿದ್ದ ಕಂಪ್ಯೂಟರ್‌ ಮೌಸ್‌ ಚಲಿಸುವಂತೆ ಮಾಡಿದ್ದಾರೆ ಎಂದು ಮಸ್ಕ್‌ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ನ್ಯೂರೋಲಿಂಕ್‌ನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೊದಲ ವ್ಯಕ್ತಿ ಇದೀಗ ಸಂಪೂರ್ಣ ಆರೋಗ್ಯವಾಗಿದ್ದಾನೆ. ಶಸ್ತ್ರಚಿಕಿತ್ಸೆಯ ಬಳಿಕ ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ. ಅಲ್ಲದೇ ಆತ ಸ್ಕ್ರೀನ್‌ ಮೇಲಿದ್ದ ಕಂಪ್ಯೂಟರ್‌ ಮೌಸ್‌ ಪಾಯಿಂಟರನ್ನು ತನ್ನ ಯೋಚನೆಯ ಮೂಲಕ ನಿಯಂತ್ರಿಸಿದ್ದಾನೆ ಎಂದು ಹೇಳಿದ್ದಾರೆ.

ಅಬ್ಬಬ್ಬಾ..ಒಂದು ಗಂಟೆಗೆ ಬರೋಬ್ಬರಿ 3 ಕೋಟಿ ಗಳಿಸೋ ವ್ಯಕ್ತಿ, ಅಂಬಾನಿ, ಅದಾನಿ ಅಲ್ಲ..ಮತ್ಯಾರು?

ನ್ಯೂರೋಲಿಂಕ್‌ ಎಲಾನ್‌ ಮಸ್ಕ್‌ ಆರಂಭಿಸಿರುವ ಸ್ಟಾರ್ಟಪ್‌ ಆಗಿದ್ದು, ಇದು ಮನುಷ್ಯರ ಮೆದುಳಿಗೆ ಎಲೆಕ್ಟ್ರಾನಿಕ್‌ ಚಿಪ್‌ಗಳನ್ನು ಅಳವಡಿಸುವ ಮೂಲಕ ಅವರ ಯೋಚನೆಯಿಂದಲೇ ಕೆಲಸಗಳನ್ನು ನಿರ್ವಹಿಸುವಂತೆ ಮಾಡುತ್ತದೆ. ಯೋಚನೆಯ ಮೂಲಕವೇ ಕಂಪ್ಯೂಟರ್‌ನ ಮೌಸ್‌ ಮತ್ತು ಕೀಬೋರ್ಡ್‌ಗಳನ್ನು ಬಳಕೆ ಮಾಡಬಹುದು ಎಂದು ನ್ಯೂರೋಲಿಂಕ್‌ ಹೇಳಿದೆ. ಪಾರ್ಶ್ವವಾಯು ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಯೋಜನೆ ವರದಾನ ಆಗಬಹುದು ಎಂದು ಹೇಳಲಾಗಿದೆ.

ಎಲ್ಲರಂಥಲ್ಲ ಎಲಾನ್ ಮಸ್ಕ್; ಒಂದು ಮಿಲಿಯನ್ ಜನರನ್ನು ಮಂಗಳಗ್ರಹಕ್ಕೆ ಕರೆದೊಯ್ಯುವ ಯೋಜನೆಗೆ ಕೈ ಹಾಕಿರೋ ಭೂಪ!

Latest Videos
Follow Us:
Download App:
  • android
  • ios