Asianet Suvarna News Asianet Suvarna News

'Seafood ಮಾರುತ್ತಿದ್ದ ವುಹಾನ್ ಮಹಿಳೆ ಕೊರೋನಾ ವೈರಸ್‌‌ ಮೊದಲ ಸೋಂಕಿತೆ'

*ಸಮುದ್ರಾಹಾರ ಮಾರುತ್ತಿದ್ದ ಮಹಿಳೆ ಕೊರೋನಾ ಮೊದಲ ಸೋಂಕಿತೆ!
*ಅರಿಜೋನಾ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಬಹಿರಂಗ
*ಆಸ್ಪತ್ರೆಗೆ ಆರಂಭಿಕವಾಗಿ ದಾಖಲಾದ ರೋಗಿಗಳ  ವಿಶ್ಲೇಷಣೆಯಿಂದ ಮಾಹಿತಿ

First known Covid 19 Corona Virus case was sea food vendor in China animal market in Wuhan study mnj
Author
Bengaluru, First Published Nov 20, 2021, 4:36 PM IST

ಚೀನಾ(ನ.20): ಕೊರೊನಾ ಮಹಾಮಾರಿ (Corona Virus) ಇಡೀ ಜಗತ್ತು ಎಂದು ಕಂಡು ಕೇಳರಿಯದ ಅನುಭವಗಳನ್ನು ನೀಡಿದೆ. 2019ರಲ್ಲಿ ಚೀನಾದ ವುಹಾನ್‌ನಲ್ಲಿ (Chinaʼs Wuhan) ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಕೊರೊನಾ ಪ್ರಕರಣ ಎರಡು ವರ್ಷವಾದರೂ ಇನ್ನೂ ಪ್ರಪಂಚದ ಹಲವು ದೇಶಗಳಿಗೆ ಬಾಧಿಸುತ್ತಲೇ ಇದೆ. ಕೊರೊನಾ ವೈರಸ್‌ನ ಮೂಲ ಕಂಡು ಹಿಡಿಯಲು ಈಗಾಗಲೇ ಬಿಲಿಯನ್‌ಗಟ್ಟಲೆ ಹಣ ಹೂಡಿಕೆಯಾಗಿದ್ದು ಈ ನಿಟ್ಟಿನಲ್ಲಿ ವಿಜ್ಞಾನಿಗಳು (scientist) ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಕೊರೋನಾ ಸೋಂಕಿಗೆ ಒಳಪಟ್ಟ ಮೊದಲ ವ್ಯಕ್ತಿ ವುಹಾನ್‌ ಮಾರುಕಟ್ಟೆಯಲ್ಲಿ ಸಮುದ್ರದ ಆಹಾರ (Sea Food) ಮಾರಾಟ ಮಾಡುತಿದ್ದ ಮಹಿಳೆ (Woman) ಎಂದು ತಿಳಿದು ಬಂದಿದೆ. ಇತ್ತಿಚೆಗೆ ನಡೆದ ಹೊಸ ಅಧ್ಯಯನದದಲ್ಲಿ ಈ ವಿಷಯ ಬಹಿರಂಗವಾಗಿದ್ದು  WHO ನಡೆಸಿದ ತನಿಖೆಯlಲ್ಲಿ ಲೋಪದೋಷಗಳಿವೆ ಎಂದು ಅಧ್ಯಯನ ಹೇಳಿದೆ.

ಕೋವಿಡ್‌ ಕೇಸು 9 ತಿಂಗಳ ಕನಿಷ್ಠ ಸಕ್ರಿಯ ಕೇಸು ಇಳಿಕೆ

ಮಧ್ಯ ಚೀನಾದ ಹುವಾನ್ ಲೈವ್ ಅನಿಮಲ್ ಮಾರ್ಕೆಟ್‌ನಲ್ಲಿ (live Animal Market) ಮೊದಲ ಕೊರೊನಾ ರೋಗಿಯು ಕೆಲಸ ಮಾಡಿದ್ದರು ಎಂದು ಅಧ್ಯಯನವು ಹೇಳುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್ (New York Times) ಗುರುವಾರ ವರದಿ ಮಾಡಿದೆ. ವುಹಾನ್ ನಗರದಲ್ಲಿ 2019 ರಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಮೊದಲು ಬಾರಿಗೆ ಕಾಣಿಸಿಕೊಂಡಿತ್ತು. ಕೋವಿಡ್ -19 ರಿಂದ ಸೋಂಕಿತಗೊಂಡ ಮೊದಲ ವ್ಯಕ್ತಿ ಎಂದು ವ್ಯಾಪಕವಾಗಿ ಭಾವಿಸಲಾದ ಅಕೌಂಟೆಂಟ್, ಅವರ ಮೊದಲ ರೋಗಲಕ್ಷಣಗಳು ಡಿಸೆಂಬರ್ 16 ರಂದು ಕಾಣಿಸಿಕೊಂಡವು ಎಂದು ವರದಿಯಾಗಿತ್ತು. ಆದರೆ ಇದಕ್ಕೂ ಮುಂಚೆ ಕೊರೊನಾ ಕಾಣಿಸಿಕೊಂಡಿದೆ,  ಎಂದು ಅರಿಜೋನಾ (Arizona) ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಮತ್ತು ವಿಕಾಸಾತ್ಮಕ ಜೀವಶಾಸ್ತ್ರದ ಮುಖ್ಯಸ್ಥ ಮೈಕೆಲ್ ವೊರೊಬೆ (Michael Worobey)  ಗುರುವಾರ ಸೈನ್ಸ್ ಜರ್ನಲ್‌ನಲ್ಲಿ (Science Journal) ಪ್ರಕಟವಾದ ಅಧ್ಯಯನದಲ್ಲಿ ಹೇಳಿದ್ದಾರೆ.

ಡಿಸೆಂಬರ್ 11 (2020) ರಂದೇ ಅನಾರೋಗ್ಯವು ಪ್ರಾರಂಭವಾಯಿತು!

"ಹುವಾನಾನ್ ಮಾರ್ಕೆಟ್‌ನಲ್ಲಿನ ಕಾರ್ಮಿಕರಲ್ಲಿ ಅನೇಕ ಸೋಂಕಿತರು ಕಾಣಿಸಿಕೊಂಡ ನಂತರವೇ ಅವನಲ್ಲಿ ( ಅಕೌಂಟೆಂಟ್) ರೋಗಲಕ್ಷಣವು ಕಾಣಿಸಿಕೊಂಡಿದೆ. ಮಾರುಕಟ್ಟೆಯಲ್ಲಿ  ಸಮುದ್ರಾಹಾರ ಮಾರಾಟ ಮಾಡುತ್ತಿದ್ದ ಮಹಿಳೆಯಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದು, ಅವರಿಗೆ ಡಿಸೆಂಬರ್ 11 (2020) ರಂದೇ ಅನಾರೋಗ್ಯವು ಪ್ರಾರಂಭವಾಯಿತು" ಎಂದು ಅಧ್ಯಯನವು ಹೇಳಿದೆ.

Mysuru ಕೋವಿಡ್‌ ಲಸಿಕೆ ಪಡೆದು ಅಸ್ವಸ್ಥರಾಗಿ ವ್ಯಕ್ತಿ ಸಾವು - ವೈದ್ಯರಿಂದ ಸ್ಪಷ್ಟನೆ

ಅರಿಜೋನಾ ವಿಶ್ವವಿದ್ಯಾನಿಲಯದಲ್ಲಿ ವೈರಸ್‌ಗಳ ವಿಕಸನವನ್ನು ಪತ್ತೆಹಚ್ಚುವಲ್ಲಿ  ಪರಿಣಿತರಾದ ವೊರೊಬೆ, ವೈದ್ಯಕೀಯ ನಿಯತಕಾಲಿಕಗಳಲ್ಲಿ ಈಗಾಗಲೇ ಸಾರ್ವಜನಿಕಗೊಳಿಸಿರುವ ಅಧ್ಯಯನ (Publicly Available) ಮತ್ತು ಚೀನಾದ ಸುದ್ದಿವಾಹಿನಿಯಲ್ಲಿನ (Media) ವೀಡಿಯೊ ಸಂದರ್ಶನಗಳ ಮೂಲಕ ಟೈಮ್‌ಲೈನ್ ವ್ಯತ್ಯಾಸಗಳನ್ನು ಪರೀಶೀಲಿಸಿದಾಗ ಮೊದಲೇ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಬ್ಗಗೆ ತಿಳಿದುಬಂದಿದೆ ಎಂದು ಹೇಳಿದ್ದಾರೆ. 

ಆಸ್ಪತ್ರೆಗೆ ಆರಂಭಿಕವಾಗಿ ದಾಖಲಾದ ರೋಗಿಗಳ  ವಿಶ್ಲೇಷಣೆಯಿಂದ ಮಾಹಿತಿ

ಹುವಾನ್ ಸೀಫುಡ್ ಸಗಟು ಮಾರುಕಟ್ಟೆಗೆ ಸೋಂಕಿತರ ಸಂಬಂಧಗಳು ಮತ್ತು ಮಾರುಕಟ್ಟೆಯಿಂದ ಆರಂಭಿಕ ಆಸ್ಪತ್ರೆಗೆ ದಾಖಲಾದ ರೋಗಿಗಳ  ಹೊಸ ವಿಶ್ಲೇಷಣೆಯು ಸಾಂಕ್ರಾಮಿಕ ರೋಗವು ಅಲ್ಲಿಂದಲೇ ಪ್ರಾರಂಭವಾಯಿತು ಎಂದು ಬಲವಾಗಿ ಸೂಚಿಸುತ್ತದೆ ಎಂದು ವೊರೊಬೆ ವಾದಿಸುತ್ತಾರೆ.

"11 ಮಿಲಿಯನ್ ಜನರಿರುವ ನಗರದಲ್ಲಿ, ಆರಂಭಿಕ ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣಗಳನ್ನು ಪುಟ್‌ಬಾಲ್ ಮೈದಾನಷ್ಟಿರುವ ಪ್ರದೇಶಕ್ಕೆ ಲಿಂಕ್ ಮಾಡಲಾಗಿದೆ" ಎಂದು ವೊರೊಬೆ ಹೇಳಿದ್ದಾರೆ. "ಮಾರುಕಟ್ಟೆಯಲ್ಲಿ ಕೊರೊನಾ  ಪ್ರಾರಂಭವಾಗಿರದಿದ್ದರೆ ಆ ಮಾದರಿಯನ್ನು ವಿವರಿಸಲು ತುಂಬಾ ಕಷ್ಟವಾಗುತ್ತದೆ. "ವಿಶ್ವ ಆರೋಗ್ಯ ಸಂಸ್ಥೆ (World Health Organisation) ಆಯ್ಕೆ ಮಾಡಿದ ಸಾಂಕ್ರಾಮಿಕ ತನಿಖಾಧಿಕಾರಿಗಳಲ್ಲಿ ಒಬ್ಬರನ್ನು ಒಳಗೊಂಡಂತೆ ಹಲವಾರು ತಜ್ಞರು ವೊರೊಬೆಯ ಪತ್ತೇದಾರಿ ಕೆಲಸವು ಉತ್ತಮವಾಗಿದೆ ಮತ್ತು ಕೋವಿಡ್‌ನ ಮೊದಲ ತಿಳಿದಿರುವ ಪ್ರಕರಣವು ಸಮುದ್ರಾಹಾರ ಮಾರಾಟಗಾರರಾಗಿದದ್ದಾರೆ ಎಂದು ಅದು ಹೇಳಿದ್ದಾರೆ.

Follow Us:
Download App:
  • android
  • ios