ಕೊರೋನಾ ವೈರಸ್ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತಗುಲುತ್ತಿದೆ ಎಂದು ನಾಯಿ ಮೂಲಕ ದೃಢಪಟ್ಟಿತ್ತು. 10 ತಿಂಗಳ ನಾಯಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ಬೆನ್ನಲ್ಲೇ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ 19 ದೃಢಪಟ್ಟಿತು. ಕಳೆದ 3 ತಿಂಗಳನಿಂದ ಚಿಕಿತ್ಸೆ ಪಡೆಯುತ್ತಿದ್ದ ನಾಯಿಗೆ ಇದೀಗ ದಯಾಮರಣ ನೀಡಲಾಗಿದೆ.

ವಾಷಿಂಗ್ಟನ್(ಜು.31): ಕೊರೋನಾ ವೈರಸ್ ಮಹಾಮಾರಿ ವಿಶ್ವದಲ್ಲೇ ಮರಣ ಮೃದಂಗ ಭಾರಿಸುತ್ತಿದೆ. ಭಾರತ ಸೇರಿದಂತೆ ಬಹುತೇಕ ರಾಷ್ಟ್ರದಲ್ಲಿ ಕೊರೋನಾ ವೈರಸ್‌ಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಾಣಿಗಳಲ್ಲೂ ಕೊರೋನಾ ವೈರಸ್ ಕಾಣಿಸಿಕೊಂಡ ವರದಿಗಳು ಮತ್ತಷ್ಟು ಆತಂಕ ತಂದಿತ್ತು. ಇದೀಗ ಕೊರೋನಾ ವೈರಸ್ ದೃಢಪಟ್ಟ ಮೊದಲ ನಾಯಿ ಇದೀಗ ಸಾವನ್ನಪ್ಪಿದೆ.

ಕೊರೋನಾ ವಾರಿರ್ಯಸ್‌ಗೆ ವೇತನ ವಿಳಂಬ: ರಾಜ್ಯಕ್ಕೆ ಸುಪ್ರೀಂ ಚಾಟಿ!

ಅಮೆರಿಕದ ವಾಷಿಂಗ್ಟನ್‌ನಲ್ಲಿ ರಾಬರ್ಟ್ ಮೆಹನೊಯ್ ಮನೆಯ ನಾಯಿಮರಿ ಎಪ್ರಿಲ್ ತಿಂಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿತ್ತು. ಉಸಿರಾಟ ಸೇರಿದಂತೆ ಹಲವು ಸಮಸ್ಯೆ ಎದುರಿಸಿದ 10 ತಿಂಗಳ ಜರ್ಮನ್ ಶೆಫರ್ಡ್ ನಾಯಿಗೆ ಪರೀಕ್ಷೆ ನಡೆಸಿದಾಗ ಕೊರೋನಾ ವೈರಸ್ ದೃಢಪಟ್ಟಿತ್ತು. ಏಪ್ರಿಲ್ ತಿಂಗಳಿನಿಂದ ನಾಯಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. 

ಕೊರೋನಾ ವಿರುದ್ಧ ಹೋರಾಡುತ್ತಿದ್ದ ನಾಯಿಗೆ ಕ್ಯಾನ್ಸರ್ ರೋಗ ಕೂಡ ಕಾಣಿಸಿಕೊಂಡಿತ್ತು. ಜುಲೈ 11 ರಂದು ನಾಯಿ ರಕ್ತ ವಾಂತಿ ಮಾಡಲು ಆರಂಭಿಸಿದೆ. ಹೀಗಾಗಿ ನಾಯಿಗೆ ವೈದ್ಯರ ಸಲಹೆಯಂತೆ ದಯಾಮರಣ ಕರುಣಿಸಲಾಗಿದೆ.

ಇದು ಅತ್ಯಂತ ಕಠಿಣ ಸಮಯ. ಮುದ್ದಾಗಿ ಸಾಕಿದ ನಾಯಿಗೆ ಈ ರೀತಿ ಸಾವು ಬರಬಾರದಿತ್ತು. ಈ ನೋವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಪ್ರಾರ್ಥನೆ ಫಲಿಸಲಿಲ್ಲ ಎಂದು ರಾಬರ್ಟ್ ಮೆಹನೊಯ್ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಸಾಕು ನಾಯಿಗಳಿಂದ ಮಾನವರಿಗೆ ಹರಡುವ ಕೊರೋನಾ ಸಾಧ್ಯತೆ ಕಡಿಮೆ ಇದೆ ಎಂದಿದೆ.