ಬಾಹ್ಯಾಕಾಶದಿಂದ ಭೂಮಿಗೆ ಜಿಗಿದು ಐತಿಹಾಸಿಕ ಸಾಧನೆ ಮಾಡಿದ್ದ ಫೆಲಿಕ್ಸ್ ಬೌಮ್‌ಗಾರ್ಟ್ನರ್ ಇದೀಗ ಪ್ಯಾರಾಗ್ಲೈಡಿಂಗ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 56ರ ಹರೆಯದ ಸ್ಕೈಡೈವರ್ ಸಾವಿನ ಸುದ್ದಿ ಸಾಹಸಿಗಳನ್ನು ಬೆಚ್ಚಿಬೀಳಿಸಿದೆ.
ಇಟಲಿ (ಜು.18) ಯಾರೂ ಮಾಡದ ಸಾಹಸ, ಅಸಾಧ್ಯವಾಗಿರುವುದನ್ನು ಸಾಧಿಸಿ ತೋರಿಸಿದ ಆಸ್ಟ್ರಿಯಾದ ಸ್ಕೈಡೈವರ್ ಫೆಲಿಕ್ಸ್ ಬೌಮ್‌ಗಾರ್ಟ್ನರ್ ಪ್ಯಾರಾಗ್ಲೈಡಿಂಗ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬಾಹ್ಯಾಕಾಶದಿಂದ ಭೂಮಿಗೆ ಯಶಸ್ವಿಯಾಗಿ ಜಿಗಿದು ದಾಖಲೆ ನಿರ್ಮಿಸಿದ್ದ ಫೆಲಿಕ್ಸ್ ಪ್ಯಾರಾಗ್ಲೈಂಡಿಂಗ್ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೇವಲ 56 ವರ್ಷದ ಫೆಲಿಕ್ಸ್ ಸಾವಿನ ಸುದ್ಧಿ ಇದೀಗ ಹಲವು ಸಾಹಸಿಗಳಿಗೆ ಆಘಾತ ನೀಡಿದೆ. ತನ್ನ ಬದುಕಿನಲ್ಲಿ ಹಲವು ಸಾಹಸ ಮಾಡಿರುವ ಫೆಲಿಕ್ಸ್ ಬಹುತೇಕ ಸಮಯ ಸ್ಕೈ ಡೈವ್, ಪ್ಯಾರಾಗ್ಲೈಡ್, ಪ್ಯಾರಾಚ್ಯೂಟ್ ಡೈವ್ ಸೇರಿದಂತೆ ಅತ್ಯಂತ ಸಾಹಸಮಯ ಕಲೆ ಪ್ರದರ್ಶಿಸಿದ್ದಾರೆ. ಇದೀಗ ಪ್ಯಾರಾಗ್ಲೈಡಿಂಗ್ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಪ್ಯಾರಾಗ್ಲೈಡಿಂಗ್ ವೇಳೆ ಹೃದಯಾಘಾತ
ಜುಲೈ 17 ರಂದು ಇಟಲಿಯ ಪೋರ್ಟ್ ಸ್ಯಾಂಟ್ ಎಲ್ಪಿಡಿಯೋದಲ್ಲಿ ಪ್ಯಾರಾಗ್ಲೈಡಿಂಗ್ ಸಾಹಸದಲ್ಲಿ ಈ ದುರಂತ ಸಂಭವಿಸಿದೆ. ಅತೀ ಸಾಹಸಮಯ ಸನ್ನಿವೇಶದಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿದ ಫೆಲಿಕ್ಸ್‌ಗೆ ಹಾರಾಟದಲ್ಲೇ ಹೃದಯಾಘಾತ ಸಂಭವಿಸಿದೆ. ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಂತೆ ಸಂಭವಿಸಿದ ಈ ಹೃದಯಾಘಾತದಿಂದ ಪ್ಯಾರಾಗ್ಲೈಡಿಂಗ್ ನಿಯಂತ್ರಣ ತಪ್ಪಿದೆ. ಇದರ ಪರಿಣಾಮ ಹೊಟೆಲ್ ಒಂದರ ಸ್ವಿಮ್ಮಿಂಗ್‌ಪೂಲ್ ಬದಿಗೆ ಪ್ಯಾರಾಗ್ಲೈಡಿಂಗ್ ಬಡಿದಿದೆ. ಈ ಅಪಘಾತದಲ್ಲಿ ಫೆಲಿಕ್ಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಫೆಲಿಕ್ಸ್‌ನ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಇತ್ತ ಹೊಟೆಲ್ ಸಿಬ್ಬಂದಿಯೂ ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಹೊಟೆಲ್ ಬದಿಯಲ್ಲಿ ಫೆಲಿಕ್ಸ್ ಪ್ಯಾರಾಗ್ಲೈಡಿಂಗ್ ಸಾಹಸ ಅಪಘಾತದಲ್ಲಿ ಅಂತ್ಯಗೊಂಡಿತ್ತು. ತಕ್ಷಣವೆ ಸ್ಥಳದಲ್ಲಿದ್ದ ವೈದ್ಯರು ನೆರವಿಗೆ ಧಾವಿಸಿದ್ದಾರೆ. ಏರ್ ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಯಿತು. ಆದರೆ ತಪಾಸಣೆ ನಡೆಸಿದ ವೈದ್ಯರು ಫೆಲಿಕ್ಸ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಅಪಾಯದ ಸೂಚನೆ ನೀಡಿದ್ದ ಕೊನೆಯ ಪೋಸ್ಟ್
ಪ್ಯಾರಾಗ್ಲೈಡಿಂಗ್ ಮಾಡುವ ಮೊದಲೇ ಫೆಲಿಕ್ಸ್ ಮಹತ್ವದ ಸೂಚನೆ ನೀಡಿದ್ದರು. ಅತೀಯಾದ ಗಾಳಿ ಇದೆ. ಇದು ಅತ್ಯಂತ ಸವಾಲಿನ ಸಂದರ್ಭ. ಪ್ಯಾರಾಗ್ಲೈಡಿಂಗ್ ಈ ಪರಿಸ್ಥಿತಿಯಲ್ಲಿ ಅತ್ಯಂತ ಸವಾಲಿನಿಂದ ಕೂಡಿದೆ. ಅತೀಯಾದ ಗಾಳಿ ನಿಯಂತ್ರಣ ತಪ್ಪಿಸಲಿದೆ ಎಂಬ ಸೂಚನೆಯನ್ನು ಫೆಲಿಕ್ಸ್ ನೀಡಿದ್ದರು. ಆದರೆ ಗಾಳಿಯನ್ನು ಸೀಳಿಕೊಂಡು ಸಾಗಿದ್ದ ಫೆಲಿಕ್ಸ್ ಹೃದಯಾಘಾತದಿಂದ ನಿಯಂತ್ರಣ ಕಳೆದುಕೊಂಡಿದ್ದಾರೆ.
2012ರಲ್ಲಿ ಬಾಹ್ಯಾಕಾಶದಿಂದ ಭೂಮಿಗೆ ಜಿಗಿದಿದ್ದ ಫೆಲಿಕ್ಸ್
2012ರಲ್ಲಿ ಫೆಲಿಕ್ಸ್ ಬಾಹ್ಯಾಕಾಶದಿಂದ ಜಿಗಿದು ಸಾಹಸ ಮಾಡಿದ್ದರು. ಪ್ಯಾರಾಚ್ಯೂಟ್ ಮೂಲಕ ಅಥವಾ ಇತರ ಪ್ಯಾರಾ ಗ್ಲೈಡರ್ ಮೂಲಕ ಜಿಗಿದು ಸಾಹಸ ಪ್ರದರ್ಶಿಸುವ ಹಲವರು ತಮ್ಮ ಎತ್ತರಕ್ಕೆ ಮಿತಿ ಇದೆ. ಆದರೆ ಫೆಲಿಕ್ಸ್ ಹಿಲಿಯಂ ಬಲೂನ್ ಮೂಲಕ ಭೂಮಿಯಿಂದ ಬರೋಬ್ಬರಿ 39 ಕಿಲೋಮೀಟರ್ ಎತ್ತರಕ್ಕೆ ತೆರಳಿದ್ದರು. ಗುರುತ್ವಾಕರ್ಷಣೆ ಬಲ ಕಡಿಮೆಗೊಳ್ಳುತ್ತಿರು ಪ್ರದೇಶದಿಂದ ಭೂಮಿಗೆ ಜಿಗಿದಿದ್ದರು. ಫೆಲಿಕ್ಸಿ ಯಶಸ್ವಿಯಾಗಿ ಭೂಮಿಯಲ್ಲಿ ಲ್ಯಾಂಡ್ ಆಗಿದ್ದರು. ಈ ರೀತಿಯ ಹಲವು ಸಾಹಸ ಪ್ರದರ್ಶಿಸಿ ಯಶಸ್ವಿಯಾಗಿದ್ದ ಫೆಲಿಕ್ಸಿ ಇದೀಗ ಪ್ಯಾರಾಗ್ಲೈಡಿಂಗ್ ವೇಳೆಯ ದುರಂತದಲ್ಲಿ ಮೃತಪಟ್ಟಿದ್ದಾರೆ.
