Asianet Suvarna News Asianet Suvarna News

ವೀಡಿಯೋ ಗೇಮ್ ಆಡುವ ವೇಳೆ ಸಿಕ್ಕಿಬಿದ್ದ ಮಗ: ಅಪ್ಪ ಕೊಟ್ಟ ಶಿಕ್ಷೆಗೆ ದಂಗಾದ

ರಾತ್ರಿ ಇಡೀ ನಿದ್ದೆಗೆಟ್ಟು ವಿಡಿಯೋ ಗೇಮ್ ಆಟ ಆಡುತ್ತಿದ್ದ ಮಗನನ್ನು ನಿಯಂತ್ರಣದಲ್ಲಿಡಲು ಅಪ್ಪ ಹೊಸ ಉಪಾಯ ಮಾಡಿದ್ದಾರೆ. ಈ ವಿಚಾರವನ್ನು ಬಾಲಕನೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಈಗ ವೈರಲ್ ಆಗಿದೆ. 

father caught 16 year old boy Playing Video Game At late Night what father did will amaze you akb
Author
First Published Mar 28, 2023, 3:05 PM IST

ಇತ್ತೀಚೆಗೆ ತೊಟ್ಟಿಲಲ್ಲಿರುವ ಮಗುವಿನಿಂದ ಹಿಡಿದು ಬಾಲಕರು, ವೃದ್ಧರವರೆಗೆ ಅನೇಕು ಮೊಬೈಲ್‌ಗೆ ದಾಸರಾಗಿದ್ದಾರೆ. ಅದರಲ್ಲೂ  ಕೆಲವು ಮನೆಯಲ್ಲಿ ಮೊಬೈಲ್ ಇಲ್ಲದೇ ಪುಟ್ಟ ಮಕ್ಕಳಿಗೆ ಊಟ ಇಳಿಯುವುದಿಲ್ಲ. ಇನ್ನು ಆ ಮಕ್ಕಳಿಗಿಂತ ಸ್ವಲ್ಪ ದೊಡ್ಡ ಮಕ್ಕಳಿಗೂ ಮೊಬೈಲ್‌ ಬೇಕೆ ಬೇಕು, ಮೊಬೈಲ್‌ ಕೈಗೆ ಸಿಕ್ಕಿದೆ ತಡ ಅಲ್ಲೇ ಬಿದ್ದುಕೊಳ್ಳುವ ಮಕ್ಕಳು ವಿಡಿಯೋ ಗೇಮ್ ಆಡುತ್ತಾ, ಬೇರೆನಾದರೂ ಆಟವಾಡುತ್ತಾ ಇಡೀ ದಿನವನ್ನು ಅದರಲ್ಲೇ ಕಳೆದು ಬಿಡುತ್ತಾರೆ. ಊಟ ಪಾಠ ಅಧ್ಯಯನ ಯಾವುದೂ ಅವರ ಗಮನಕ್ಕೆ ಬರುವುದೇ ಇಲ್ಲ. ಬೇರೆ ಯಾವುದೇ ಚಟುವಟಿಕೆಯೂ ಅವರಿಗೆ ಬೇಕಿಲ್ಲ. ಪರಿಣಾಮ ಮಕ್ಕಳು ವಿಡಿಯೋ ಗೇಮ್‌ ಚಟಕ್ಕೆ ಬಿದ್ದು ಹಾದಿ ತಪ್ಪುತ್ತಾರೆ. ಇದನ್ನು ತಡೆಯಲು ಪೋಷಕರು ಹಲವು ಪ್ರಯತ್ನಗಳನ್ನು ಮಾಡಿದರೂ ಕೆಲವೊಮ್ಮೆ ಹರೆಯದ ಮಕ್ಕಳು ಇನ್ನೇನೋ ಅವಾಂತರ ಮಾಡಿಕೊಳ್ಳುವುದರಿಂದ ಪೋಷಕರಿಗೆ ಮಕ್ಕಳನ್ನು ಮೊಬೈಲ್ ಚಟದಿಂದ ದೂರ ಮಾಡುವುದೇ ದೊಡ್ಡ ತಲೆನೋವಾಗಿದೆ.  ಹಾಗೆಯೇ ಇಲ್ಲೊಂದು ಕಡೆ ರಾತ್ರಿ ಇಡೀ ನಿದ್ದೆಗೆಟ್ಟು ವಿಡಿಯೋ ಗೇಮ್ ಆಟ ಆಡುತ್ತಿದ್ದ ಮಗನನ್ನು ನಿಯಂತ್ರಣದಲ್ಲಿಡಲು ಅಪ್ಪ ಹೊಸ ಉಪಾಯ ಮಾಡಿದ್ದಾರೆ. ಈ ವಿಚಾರವನ್ನು ಬಾಲಕನೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಈಗ ವೈರಲ್ ಆಗಿದೆ. 

ಹೀಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಹಂಚಿಕೊಂಡವ ಓರ್ವ 16 ವರ್ಷದ ಬಾಲಕ(Boy). ಬಾಲಕನ ಈ ಪೋಸ್ಟ್‌ನ್ನು ಇಂಡಿಯನ್‌ ಟೀನ್ಸ್‌ ಎಂಬ ರೆಡಿಟ್ ಪೇಜ್‌ ಹಂಚಿಕೊಂಡಿದೆ.  'ತರುಣರು ಯಾರೂ ತಮಗೆ ಖಾಸಗಿತನವಿಲ್ಲ ಎಂದು ತಿಳಿದುಕೊಂಡಿದ್ದಿರೋ ಅವರಿಗಾಗಿ, ನನ್ನ ಹಾಗೂ ನನ್ನ ಸಹೋದರನ ಕೋಣೆಗೆ ಸಿಸಿಟಿವಿ (CCTV)ಅಳವಡಿಸಲಾಗಿದೆ' ಎಂದು ಬಾಲಕ ಬರೆದುಕೊಂಡಿದ್ದಾನೆ. 

ಪೋಟೋದಲ್ಲಿ ಸೀಲಿಂಗ್ ಫ್ಯಾನ್ ಸಮೀಪದಲ್ಲೇ ಸಿಸಿಟಿವಿ ಇರುವುದು ಕಾಣುತ್ತದೆ. ಇದಕ್ಕೆ ನೆಟ್ಟಿಗರು ಅಲ್ಲೇಕೆ ಸಿಸಿಟಿವಿ ಎಂದು ಆತನನ್ನು ಪ್ರಶ್ನಿಸಿದ್ದು, ಅದಕ್ಕೆ ಆತ ತಡರಾತ್ರಿ ವಿಡಿಯೋ ಗೇಮ್ ಆಡಿದ್ದಕ್ಕೆ ನನಗೆ ತಂದೆ ವಿಧಿಸಿದ ಶಿಕ್ಷೆ ಇದು ಎಂದು ಹೇಳಿಕೊಂಡಿದ್ದಾನೆ. ತಮಗೆ ಖಾಸಗಿತನ ಇಲ್ಲ ಎಂದು ಅಂದುಕೊಳ್ಳುವ ಈ ಪೋಟೋ ಪೋಸ್ಟ್ ಮಾಡಲಾಗಿದೆ, ನನ್ನ ಹಾಗೂ ಸಹೋದರನ ಕೋಣೆಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಬಾಲಕ ಬರೆದುಕೊಂಡಿದ್ದಾನೆ. 

Fact Check: 1999 ರಲ್ಲೇ 'ಒಮಿಕ್ರೋನ್' ವಿಡಿಯೋ ಗೇಮ್ ರಚಿಸಿದ್ರಾ ಬಿಲ್ ಗೇಟ್ಸ್?

ಒಂದು ವರ್ಷದ ಹಿಂದೆ ಮೂರು ಗಂಟೆ ಅಧ್ಯಯನ ಮಾಡಿದ ನಂತರ ನನ್ನ ಸಹೋದರನ ps4ನಲ್ಲಿ ವೀಡಿಯೋ ಗೇಮ್ (Video Game) ಆಡುತ್ತಿದ್ದಾಗ ನಾನು ನನ್ನ ತಂದೆಗೆ ಸಿಕ್ಕಿಬಿದ್ದೆ. ಇದಾದ ನಂತರ ನನ್ನ ತಂದೆ ನಾನು ರಾತ್ರಿಯೆಲ್ಲಾ ವೀಡಿಯೋ ಗೇಮ್ ಆಡಿಕೊಂಡೆ ಸಮಯ ಕಳೆಯುತ್ತೇನೆ ಎಂದು ಭಾವಿಸಿದ್ದರು.  ಇದಾದ ನಂತರ  ಮತ್ತೊಮ್ಮೆ ನನ್ನ ಹುಟ್ಟುಹಬ್ಬದಂದು ವೀಡಿಯೋ ಗೇಮ್ ಆಡುವ ವೇಳೆ ಅಪ್ಪನ ಕೈಗೆ ಸಿಕ್ಕಿಬಿದ್ದೆ. ಈ ವೇಳೆ ನನ್ನ ಅಪ್ಪನಿಗೆ ನಾನು ನಿರಂತರ ವೀಡಿಯೋ ಗೇಮ್ ಆಡುವ ಬಗ್ಗೆ ಖಚಿತವಾಗಿದ್ದು, ಹುಟ್ಟುಹಬ್ಬ ಕಳೆದು ಎರಡು ದಿನಗಳ ನಂತರ ಸಿಸಿಟಿವಿ ಅಳವಡಿಸಿದರು ಎಂದು ಆತ ಹೇಳಿಕೊಂಡಿದ್ದಾನೆ. 

ಅಲ್ಲದೇ ಬಾಲಕ ಇದೇ ವೇಳೆ ತಾನು ಬುದ್ಧಿವಂತ ವಿದ್ಯಾರ್ಥಿ ಎಂದು ಕೂಡ ಹೇಳಿಕೊಂಡಿದ್ದಾನೆ. ಯಾವಾಗಲೂ ಶೇ. 90 ಕ್ಕಿಂತ ಹೆಚ್ಚು ಅಂಕಗಳಿಸುವ ತರಗತಿಯ 10 ವಿದ್ಯಾರ್ಥಿಗಳಲ್ಲಿ ನಾನು ಓರ್ವ, ಹೀಗಾಗಿ ನನಗೆ ರಾತ್ರಿ ಗೇಮ್ ಆಡುವುದು ದೊಡ್ಡ ವಿಚಾರ ಆಗುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. 

ವಿಡಿಯೋ ಗೇಮ್ ಆರ್ಡರ್ ಮಾಡಿದವನಿಗೆ ಕಾಂಡೋಂ ಕಳುಹಿಸಿಕೊಟ್ಟ ಕಂಪನಿ!

ಆದರೆ ಈ ವಿಚಾರ ತಿಳಿದ ಸಾಮಾಜಿಕ ಜಾಲತಾಣ ಬಳಕೆದಾರರು ಮಾತ್ರ ಅಪ್ಪನ  ಈ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.  ಆತ ತುಂಬಾ ಕ್ರೂರ ನಿರ್ಧಾರ ಕೈಗೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಇಂತಹವರಿಗೆ ಮಕ್ಕಳೇಕೆ ಎಂದು ಕೆಲವರು ಸಿಟ್ಟಾಗಿದ್ದಾರೆ. ಮತ್ತೆ ಕೆಲವರು ಒಳ್ಳೆ ನಿರ್ಧಾರ ಎಂದು ಹೇಳಿದ್ದಾರೆ.  ಮತ್ತೆ ಕೆಲವರು ರೆಡಿಟ್ ಬಳಕೆದಾರರು ಕ್ಯಾಮರಾವನ್ನು ಒಡೆದು ಹಾಕುವ ಸಲಹೆ ನೀಡಿದ್ದಾರೆ. ಅದೇನೆ ಇರಲಿ ಇವತ್ತಿನ ತಲೆಮಾರಿನಲ್ಲಿ ಮಕ್ಕಳು ದಾರಿ ತಪ್ಪದಂತೆ ಕಾಯಲು ಪೋಷಕರು ಏನೇನೋ ಸಾಹಸಗಳನ್ನು ಮಾಡಬೇಕಿದೆ. 

To teens who think they have no privacy, I have a cctv camera installed in me and my brother's room
by u/Vader2508 in IndianTeenagers

 

Follow Us:
Download App:
  • android
  • ios