ಸಂಭ್ರಮಿಸಬೇಡಿ ನಾನು ಸತ್ತಿಲ್ಲ, ವಿಮಾನ ಪತನದ ಬಳಿಕ ಪ್ರಿಗೋಜಿನ್ ವಿಡಿಯೋ ವೈರಲ್!
ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ದಂಗೆ ಎದ್ದ ವ್ಯಾಗ್ನರ್ ಪಡೆ ಸಂಸ್ಥಾಪಕ ಪ್ರಿಗೋಜಿನ್ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಆದರೆ ಇದೀಗ ಪ್ರಿಗೋಜಿನ್ ವಿಡಿಯೋ ಒಂದು ವೈರಲ್ ಆಗಿದೆ. ನಾನು ಬುದಿಕಿದ್ದೇನೋ ಇಲ್ಲವೋ ಎಂದು ಚರ್ಚೆ ನಡೆಯುತ್ತಿದೆ. ಇಲ್ಲಿ ಕೇಳಿ ನಾನು ಜೀವಂತವಾಗಿದ್ದೇನೆ ಎಂದಿರುವ ವಿಡಿಯೋ ವೈರಲ್ ಆಗಿದೆ.

ಮಾಸ್ಕೋ(ಆ.31) : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ದಂಗೆದ್ದ ವ್ಯಾಗ್ನರ್ ಬಂಡುಕೋರ ಸೇನಾ ಗುಂಪಿನ ನಾಯಕ ಯೆವ್‌ಗೆನಿ ಪ್ರಿಗೋಜಿನ್ ಇತ್ತೀಚೆಗೆ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ರಷ್ಯಾ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ. ಆಗಸ್ಟ್ 23ಕ್ಕೆ ವಿಮಾನ ದುರಂತ ನಡೆದರೆ, ಆಗಸ್ಟ್ 26ಕ್ಕೆ ರಷ್ಯಾ ಪ್ರಿಗೋಜಿನ್ ಸಾವನ್ನು ಖಚಿತಪಡಿಸಿತ್ತು. ಇದಾದ ನಾಲ್ಕೇ ದಿನಗಳಲ್ಲಿಇದೀಗ ಖುದ್ದು ಯೆವ್‌ಗೆನಿ ಪ್ರಿಗೋಜಿನ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಾನು ಸತ್ತಿಲ್ಲ, ಜೀವಂತವಾಗಿದ್ದೇನೆ ಎಂದು ಖುದ್ದು ಯೆವ್‌ಗೆನಿ ಪ್ರಿಗೋಜಿನ್ ಹೇಳಿದ್ದಾರೆ.
ಮಿಲಿಟರಿ ಸಮವಸ್ತ್ರ ಧರಿಸಿರುವ ಯೆವ್‌ಗೆನಿ ಪ್ರಿಗೋಜಿನ್ ಮಿಲಿಟರಿ ವಾಹನದಲ್ಲಿ ಪ್ರಯಾಣ ಮಾಡುತ್ತಿರುವ ದೃಶ್ಯವಿದೆ. ಇಷ್ಟೇ ಅಲ್ಲ ತಾನು ಜೀವಂತವಾಗಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಕೆಲವರು ನನ್ನ ಸಾವು, ನನ್ನ ಜೀವನ, ಆದಾಯದ ಕುರಿತು ಮಾತನಾಡುತ್ತಿದ್ದಾರೆ. ಆದರೆ ನಾನು ಆರೋಗ್ಯವಾಗಿ, ಉತ್ತಮವಾಗಿದ್ದೇನೆ ಎಂದಿದ್ದಾರೆ. ಆದರೆ ಈ ವಿಡಿಯೋ ಪ್ರಿಗೋಜಿನ್ ಸಾವಿಗೂ ಕೆಲವೇ ದಿನಗಳ ಮುನ್ನ ಚಿತ್ರೀಕರಿಸದ ವಿಡಿಯೋಆಗಿದೆ.
ವ್ಯಾಗ್ನರ್ ಪಡೆ ಮುಖ್ಯಸ್ಥನ ಸಾವು ಖಚಿತಪಡಿಸಿದ ರಷ್ಯಾ; ವಿಮಾನ ದುರಂತದ ಹಿಂದೆ ಅನುಮಾನ!
ಆಗಸ್ಟ್ ತಿಂಗಳಲ್ಲಿ ನಾನು ಆಫ್ರಿಕಾದಲ್ಲಿದ್ದೇನೆ. ಚೆನ್ನಾಗಿದ್ದೇನೆ ಎಂದು ಇದೇ ವಿಡಿಯೋದಲ್ಲಿ ಪ್ರಿಗೋಜಿನ್ ಹೇಳಿದ್ದಾರೆ. ಕೆಲವರು ನಾನು ಪಲಾಯನ ಮಾಡಿದ್ದೇನೆ, ಆತನ ಆದಾಯವೆಷ್ಟು, ಲೈಫ್ ಸ್ಟೈಲ್ ಹೇಗಿದೆ ಎಂದು ಚರ್ಚಿಸುತ್ತಿದ್ದಾರೆ. ಎಲ್ಲವೂ ಚೆನ್ನಾಗಿದೆ ಎಂದು ವಿಡಿಯೋ ಅಂತ್ಯಗೊಳಿಸಿದ್ದಾರೆ. ಈ ವಿಡಿಯೋವನ್ನು ಆಗಸ್ಟ್ 20 ರಿಂದ 23ರೊಳಗೆ ಚಿತ್ರೀಕರಿಸಿರುವ ಸಾಧ್ಯತೆ ಇದೆ. ಇದು ಪ್ರಿಗೋಜಿನ್ ಕೊನೆಯ ವಿಡಿಯೋ ಆಗಿದೆ. ಈ ವಿಡಿಯೋ ಬಳಿಕ ಪ್ರಿಗೋಜಿನ್ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.
ರಷ್ಯಾದ ವ್ಯಾಗ್ನರ್ ಪಡೆ ಸಂಸ್ಥಾಪಕ ಯೆವ್‌ಗೆನಿ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ರಷ್ಯಾ ತನಿಖಾ ಸಂಸ್ಥೆ ಅಧಿಕೃತ ಹೇಳಿತ್ತು. ಈ ಕುರಿತು ಹೇಳಿಕೆ ನೀಡಿರುವ ಸಂಸ್ಥೆ, ‘ಘಟನಾ ಸ್ಥಳದಲ್ಲಿ ಸಿಕ್ಕ 10 ಜನರ ದೇಹವನ್ನು ವಿಧಿವಿಜ್ಞಾನ ಹಾಗೂ ಶವಪರೀಕ್ಷೆಯಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದೆ. ಇದೇ ಅಪಘಾತದಲ್ಲಿ ಯೆವ್‌ಗೆನಿ ಪ್ರಿಗೋಜಿನ್ ಮೃತಪಟ್ಟಿದ್ದಾರೆ ಎಂದಿತ್ತು.. ಪ್ರಿಗೋಜಿನ್ ಹಾಗೂ ಆತನ ಆಪ್ತರು ಸೇರಿ 10 ಮಂದಿ ಆ.23ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಇವರು ಎರಡು ತಿಂಗಳ ಹಿಂದೆ ರಷ್ಯಾ ಸೇನೆ ವಿರುದ್ಧ ದಂಗೆ ಎದ್ದಿದ್ದರು.
ರಷ್ಯಾ ಅಧ್ಯಕ್ಷರ ವಿರುದ್ಧ ಬಂಡಾಯವೆದ್ದ ಪ್ರಿಗೋಝಿನ್ ಸಾವು? ವ್ಯಾಗ್ನರ್‌ಗೆ ಹೊಸ ಬಾಸ್ ಆಯ್ಕೆ ಮಾಡಿದ ಪುಟಿನ್!
ರಷ್ಯಾ ಪರವಾಗಿ ಉಕ್ರೇನ್‌ನಲ್ಲಿ ಯುದ್ಧ ಮಾಡುತ್ತಿದ್ದ ವ್ಯಾಗ್ನರ್ ಸೇನೆ ದಿಢೀರ್ ರಷ್ಯಾದ ವಿರುದ್ಧವೇ ದಂಗೆ ಎದ್ದಿತ್ತು. ರಷ್ಯಾ ಸೇನೆ ತಮಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ರಷ್ಯಾ ಸರ್ಕಾರದ ವಿರುದ್ಧ ಕ್ಷಿಪ್ರಕ್ರಾಂತಿ ಮಾಡುವುದಾಗಿ ಹೇಳಿತ್ತು. ಮ್ಮ ಬಳಿ 50 ಸಾವಿರ ಯೋಧರ ಬೃಹತ್ ಪಡೆ ಇದೆ. ಗುರಿ ಮುಟ್ಟುವವರೆಗೂ ನಾವು ವಿರಮಿಸುವುದಿಲ್ಲ. ಈ ಹಂತದಲ್ಲಿ ಯಾರೂ ನಮಗೆ ಅಡ್ಡಿ ಮಾಡಿಲ್ಲ. ಒಂದು ವೇಳೆ ಯಾರಾದರೂ ನಮಗೆ ಅಡ್ಡಿ ಮಾಡಿದರೆ ನಾವು ಯಾರನ್ನೂ ಬಿಡುವುದಿಲ್ಲ. ರಷ್ಯಾ ಸೇನೆ ಕೂಡಾ ನಮಗೆ ಅಡ್ಡಿ ಮಾಡಬಾರದು. ಇದು ಸೇನಾ ದಂಗೆಯಲ್ಲ, ಬದಲಾಗಿ ನ್ಯಾಯದ ಕಡೆಗಿನ ನಡಿಗೆ’ ಎಂದಿತು. ಪುಟಿನ್ ವಿರುದ್ಧವೇ ದಂಗೆ ಎದ್ದ ಕಾರಣ ವ್ಯವಸ್ಥಿತವಾಗಿ ವಿಮಾನ ದುರಂತದಲ್ಲಿ ಪ್ರಿಗೋಜಿನ್ ಮುಗಿಸಲಾಗಿದೆ ಅನ್ನೋ ಮಾತುಗಳು ಇವೆ.