Asianet Suvarna News Asianet Suvarna News

ಮನೆ ಹಿತ್ತಲಿನಲ್ಲಿ ಪತ್ನಿಯ ಬೃಹತ್‌ ಪ್ರತಿಮೆ ಸ್ಥಾಪಿಸಿದ ಫೇಸ್‌ಬುಕ್ ಸಂಸ್ಥಾಪಕ ಜುಕರ್‌ಬರ್ಗ್

ಪತ್ನಿ ಮೇಲಿನ ಪ್ರೀತಿಗಾಗಿ ಫೇಸ್‌ಬುಕ್ ಸಂಸ್ಥಾಪಕ ಕೋಟ್ಯಾಧಿಪತಿ ಉದ್ಯಮಿ ಮಾರ್ಕ್ ಜುಕರ್‌ಬರ್ಗ್ ತನ್ನ ಪತ್ನಿ ಪ್ರೆಸ್ಸಿಲ್ಲಾ ಚಾನ್ ಅವರ ಬೃಹತ್ ಪ್ರತಿಮೆಯೊಂದನ್ನು ಮನೆಯ ಹಿತ್ತಲಿನಲ್ಲಿ ನಿರ್ಮಾಣ ಮಾಡಿದ್ದಾರೆ.

Facebook founder Mark Zuckerberg installed a huge statue of his wife in the backyard of his house akb
Author
First Published Aug 16, 2024, 9:53 AM IST | Last Updated Aug 16, 2024, 9:53 AM IST

ಪತ್ನಿ ಮೇಲಿನ ಪ್ರೀತಿಗಾಗಿ ಫೇಸ್‌ಬುಕ್ ಸಂಸ್ಥಾಪಕ ಕೋಟ್ಯಾಧಿಪತಿ ಉದ್ಯಮಿ ಮಾರ್ಕ್ ಜುಕರ್‌ಬರ್ಗ್ ತನ್ನ ಪತ್ನಿ ಪ್ರೆಸ್ಸಿಲ್ಲಾ ಚಾನ್ ಅವರ ಬೃಹತ್ ಪ್ರತಿಮೆಯೊಂದನ್ನು ಮನೆಯ ಹಿತ್ತಲಿನಲ್ಲಿ ನಿರ್ಮಾಣ ಮಾಡಿದ್ದಾರೆ. ಸ್ವತಃ ತನ್ನದೇ  ಬೃಹತ್ ಪ್ರತಿಮೆಯ ಮುಂದೆಯೇ ನಿಂತಿರುವ ಚಾನ್ ಪ್ರೆಸ್ಸಿಲ್ಲಾ ಅವರ ಫೋಟೋವನ್ನು ಫೇಸ್‌ಬುಕ್ ಸಂಸ್ಥಾಪಕ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಇದು ಪ್ರೆಸ್ಸಿಲ್ಲಾಗಿಂತಲೂ ಬಹಳ ಅಡ್ಡ ಅಗಲ ಎತ್ತರವನ್ನು ಹೊಂದಿದೆ. 

ಪ್ರಸಿದ್ಧ ಕಲಾವಿದ ಡೇನಿಯಲ್ ಅರ್ಶಮ್ ಅವರಿಗೆ ಈ ಪ್ರತಿಮೆ ಮಾಡುವುದಕ್ಕೆ ಝುಕರ್‌ಬರ್ಗ್ ಮನವಿ ಮಾಡಿದ್ದರು.  ಡೇನಿಯಲ್ ಅರ್ಶಮ್‌ ಅವರು ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ವಾಸ್ತುಶಿಲ್ಪ, ಪ್ರತಿಮೆ ನಿರ್ಮಾಣ ಹಾಗೂ ಪ್ರದರ್ಶನ ಕಲೆಯಲ್ಲಿ ಪಳಗಿದವರಾಗಿದ್ದಾರೆ. ಈಗ ಅವರು ನಿರ್ಮಿಸಿರುವ ಪ್ರೆಸಿಲ್ಲಾ ಚಾನ್ ಅವರ ಪ್ರತಿಮೆಯೂ ಅವರ ಇತ್ತೀಚಿನ ಕೆಲಸವಾದ ಬ್ರೋಂಜ್ ವಿತ್ ಟಿಫಾನ್ ಗ್ರೀನ್ ಪಟೀನಾಗೆ ರೀತಿಯೇ ಇದೆ.

ಮಾರ್ಕ್‌ ಜುಕರ್‌ಬರ್ಗ್‌ ಸ್ಟೈಲ್‌ಅನ್ನೇ ಬದಲಾಯಿಸಿಬಿಟ್ಟ ಮುಖೇಶ್‌ ಅಂಬಾನಿ, ಫೇಸ್‌ಬುಕ್‌ ಮಾಲೀಕ ಇಂದು ಫ್ಯಾಶನ್‌ ಐಕಾನ್‌!

ನೀವು ನನ್ನ ಪತ್ನಿಯ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ರೋಮನ್ ಸಂಪ್ರದಾಯವನ್ನು ಮತ್ತೆ ತಂದಿದ್ದೀರಿ, ಇದಕ್ಕಾಗಿ ನಿಮಗೆ ಧನ್ಯವಾದಗಳು ಡೇನಿಯಲ್ ಅರ್ಶಮ್ ಎಂದು ಮಾರ್ಕ್ ಜುಕರ್‌ಬರ್ಗ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ಜೊತೆಗೆ ಈ ಹೊಸ ಪ್ರತಿಮೆಯ ಮುಂದೆ ಪತ್ನಿ ಪ್ರೆಸ್ಸಿಲ್ಲಾ ನಿಂತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಮಾರ್ಕ್‌ ಜುಕರ್‌ಬರ್ಗ್‌ ಹಾಗೂ ಪ್ರೆಸ್ಸಿಲ್ಲಾ ಚಾನ್ 12 ವರ್ಷಗಳ ಹಿಂದೆ ಮದುವೆಯಾಗಿದ್ದು,  ಈ ಜೋಡಿಗೆ ಮಕ್ಸಿಮಾ, ಆಗಸ್ಟ್ ಹಾಗೂ ಅವೌರಿಲ್ಲಾ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ. ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ಮೊದಲಿಗೆ ಕಾಲೇಜು ಸ್ನೇಹಿತರು ಆಯೋಜಿಸಿದ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದ ಮಾರ್ಕ್ ಜುಕರ್‌ಬರ್ಗ್ ಹಾಗೂ ಪ್ರೆಸಿಲ್ಲಾ ನಂತರ 2003ರಿಂದ ಡೇಟಿಂಗ್ ಶುರು ಮಾಡಿದ್ದರು. 

ಟೆಕ್ ಬಿಲಿಯನೇರ್‌ ಮಾರ್ಕ್ ಜುಕರ್‌ಬರ್ಗ್ ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಬರೆದುಕೊಂಡಿದ್ದರು.  ನಾನು ಕಾಲೇಜಿನಿಂದ ಸ್ವಲ್ಪದರಲ್ಲೇ ಕಿಕ್‌ಔಟ್‌ ಆಗುತ್ತಿದ್ದೇನೆ ಎಂದು ಯೋಚಿಸಿದ್ದ ನನ್ನ ಸ್ನೇಹಿತರು ನನಗಾಗಿ ಆಯೋಜಿಸಿದ ಪಾರ್ಟಿಯೊಂದರಲ್ಲಿ ನಾನು ಮೊದಲ ಬಾರಿಗೆ ತನ್ನ ಬಾಳ ಸಂಗತಿ ಪ್ರೆಸಿಲ್ಲಾರನ್ನು ಭೇಟಿಯಾಗಿದ್ದೆ ಎಂದು  ಮಾರ್ಕ್‌ ಜುಕರ್‌ಬರ್ಗ್ ಬರೆದುಕೊಂಡಿದ್ದರು. ನಾನು ಬಹಳ ಕಡಿಮೆ ಸಮಯವನ್ನು ಹೊಂದಿರುವುದರಿಂದ ನಾವು ಆದಷ್ಟು ಬೇಗ ಹೊರಗೆ ಹೋಗಬೇಖು ಎಂದು ಆಕೆಯನ್ನು ನಾನು ಕೇಳಿದ್ದೆ. ಇದಾದ ನಂತರ ನಾನು ಫೇಸ್‌ಬುಕ್ ಶುರು ಮಾಡಿದೆ.  ನಂತರ ನಾವು ಮದುವೆಯಾದೆವು. ಹಾಗೂ ಮೂವರು ಮುದ್ದಾದ ಹೆಣ್ಣು ಮಕ್ಕಳನ್ನು ಹೊಂದಿದ್ದೇವೆ. ಎಂತಗ ವೈಲ್ಡ್ ರೈಡ್ ನಮ್ಮದು ಎಂದು ಮಾರ್ಕ್ ಜುಕರ್‌ಬರ್ಗ್ ಬರೆದುಕೊಂಡಿದ್ದರು.  ಈಗ ಮಾರ್ಕ್ ಜುಕರ್‌ಬರ್ಗ್ ತಮ್ಮ ಪತ್ನಿಯ ಪ್ರತಿಮೆಯನ್ನು ಸ್ಥಾಪನೆ ಮಾಡಿದ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. 

ಅನಂತ್ ಅಂಬಾನಿಯ ವಿವಾಹಪೂರ್ವ ಕಾರ್ಯಕ್ರಮದಲ್ಲೇ ಮೆಟಾ ಜೊತೆ ಬೃಹತ್ ಡೀಲ್ ಕುದುರಿಸಿದ ರಿಲಯನ್ಸ್.. 

 

 
 
 
 
 
 
 
 
 
 
 
 
 
 
 

A post shared by Mark Zuckerberg (@zuck)

 

 

Latest Videos
Follow Us:
Download App:
  • android
  • ios