ಕೊರೋನಾ ವೈರಸ್‌ನಿಂದ ಫೇಸ್ ಬುಕ್ ಕಾರ್ಯಕ್ರಮ ರದ್ದು!
ಕೊರೋನಾ ವೈರಸ್ ಕಾರಣ ಬಹುತೇಕ ಕಂಪನಿಗಳು, ಕಚೇರಿಗಳು ಸ್ಥಗಿತಗೊಂಡಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅಗ್ರಜನಾಗಿ ಗುರುತಿಸಿಕೊಂಡಿರುವ ಫೇಸ್‌ಬುಕ್ ಎಂದಿನಂತ ಜನರಿಗೆ ಸೇವೆ ನೀಡುತ್ತಿದೆ. ಇದೀಗ ಫೇಸ್ ಕೆಲ ಮಹತ್ವದ ಕಾರ್ಯಕ್ರಮಗಳನ್ನು ರದ್ದು ಮಾಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಕ್ಯಾಲಿಫೋರ್ನಿಯಾ(ಏ.17): ಕೊರೋನಾ ವೈರಸ್ ಕಾರಣ ಎಲ್ಲಾ ಕಾರ್ಯಕ್ರಮಗಳು, ಕ್ರೀಡೆ, ಕಾನ್ಫರೆನ್ಸ್ ರದ್ದಾಗಿದೆ. ಇದೀಗ ಫೇಸ್‌ಬುಕ್ ಕೂಡ ತನ್ನ ಬಹುನಿರೀಕ್ಷಿತ ಕಾರ್ಯಕ್ರಮಗಳನ್ನು ರದ್ದು ಮಾಡಿದೆ. 50 ಅಥವಾ ಅದಕ್ಕಿಂತ ಹೆಚ್ಚು ಜನರನ್ನೊಳಗೊಂಡು ಆಯೋಜಿಸಲು ನಿರ್ಧರಿಸಿದ್ದ ಫೇಸ್‌ಬುಕ್ ಕಾರ್ಯಕ್ರಮಗಳನ್ನು ಜೂನ್ 2021ರ ವರೆಗೆ ರದ್ದು ಮಾಡುವುದಾಗಿ ಫೇಸ್‌ಬುಕ್ ಸಿಇಓ ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟಪಡಿಸಿದ್ದಾರೆ.
ಕೇರಳ ಸರ್ಕಾರದ ನಡೆ ಉಳಿದ ರಾಜ್ಯ ಸರ್ಕಾರಗಳಿಗೆ ಆಗಲಿ ಮಾದರಿ
ರದ್ದಾಗಿರುವ ಕಾರ್ಯಕ್ರಮಗಳ ಜೊತೆಗೆ ಫೇಸ್‌ಬುಕ್‌ನ ಜನಪ್ರಿಯ ಇವೆಂಟ್‌ಗಳಾದ ವರ್ಚುವಲ್ ಈವೆಂಟ್ಸ್, ಬಿಸಿನೆಸ್ ಟ್ರಾವೆಲ್ ಕೂಡ ಜೂನ್ 2020ರ ವರಗೆ ಮುಂದೂಡಲಾಗಿದೆ ಎಂದು ಮಾರ್ಕ್ ಜುಕರ್‌ಬರ್ಗ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹೇಳಿದ್ದಾರೆ.
ಸದ್ಯ ರದ್ದಾಗಿರುವ ಹಾಗೂ ಮುಂದೂಡಲ್ಪಟ್ಟಿರುವ ಕಾರ್ಯಕ್ರಮಗಳ ಆಯೋಜನೆಗೆ ಆರೋಗ್ಯ ಸಚಿವಾಲಯ, ಸರ್ಕಾರದ ಸಲಹೆ ಪಡೆದು ಆಯೋಜಿಸಲಾಗುವುದು. ಕೊರೋನಾ ವೈರಸ್ ಕಾರಣದಿಂದ ಆರೋಗ್ಯ ಸುರಕ್ಷತೆ ಮುಖ್ಯ. ಹೀಗಾಗಿ ಫೇಸ್‌ಬುಕ್ ನಿರ್ಧಾರ ತೆಗೆದುಕೊಂಡಿದೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ.
ಫೇಸ್‌ಬುಕ್ ತನ್ನ ಬಹುತೇಕ ಎಲ್ಲಾ ನೌಕರರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕನಿಷ್ಠ ಮೇ ಅಂತ್ಯದವರೆಗೆ ಎಲ್ಲರೂ ಮನೆಯಿಂದಲೇ ಕೆಲಸ ಮಾಡಿದರೆ ಕೊರೋನಾ ವೈರಸ್ ತಡೆಯುವಲ್ಲಿ ಮಹತ್ವದ ಹೆಜ್ಜೆ ಇಟ್ಟಂತಾಗುತ್ತದೆ. ಮತ್ತೆ ಎಂದಿನಂತೆ ಚಟುವಟಿಕೆಗಳು ನಿಧಾನವಾಗಿ ಆರಂಭವಾಗಲಿದೆ. ಸದ್ಯ ಕೊರೋನಾ ವಿರುದ್ಧದ ಹೋರಾಟ ಮುಖ್ಯ ಎಂದು ಜುಕರ್‌ಬರ್ಗ್ ಹೇಳಿದ್ದಾರೆ.