ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಬೀದಿಪಾಲಾಗಲಿದ್ದ 14 ಸಾವಿರ ಕೆ.ಜಿ. ಕುಂಬಳ ಕಾಯಿಯ ಫೋಟೋವನ್ನು ಜಾಲತಾಣದಲ್ಲಿ ಹಾಕಿದ ಪರಿಣಾಮ ಕುಂಬಳ ಕಾಯಿ ಖರೀದಿಗೆ ಸ್ವತಃ ಸರ್ಕಾರವೇ ಮುಂದಾದ ವಿದ್ಯಮಾನ ಕೇರಳದ ಕಾಸ​ರ​ಗೋಡು ಜಿಲ್ಲೆಯ ಬದಿಯಡ್ಕದಲ್ಲಿ ನಡೆದಿದೆ.

ಮಂಗಳೂರು(ಏ.17): ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಬೀದಿಪಾಲಾಗಲಿದ್ದ 14 ಸಾವಿರ ಕೆ.ಜಿ. ಕುಂಬಳ ಕಾಯಿಯ ಫೋಟೋವನ್ನು ಜಾಲತಾಣದಲ್ಲಿ ಹಾಕಿದ ಪರಿಣಾಮ ಕುಂಬಳ ಕಾಯಿ ಖರೀದಿಗೆ ಸ್ವತಃ ಸರ್ಕಾರವೇ ಮುಂದಾದ ವಿದ್ಯಮಾನ ಕೇರಳದ ಕಾಸ​ರ​ಗೋಡು ಜಿಲ್ಲೆಯ ಬದಿಯಡ್ಕದಲ್ಲಿ ನಡೆದಿದೆ.

ಕಾಸರಗೋಡಿನ ಬದಿಯಡ್ಕದ ಪ್ರಗತಿಪರ ಕೃಷಿಕ ಬೈಕುಂಜ ಶಂಕರನಾರಾಯಣ ಭಟ್‌ ಅವರು ತರಕಾರಿ ಕೃಷಿ ಮಾಡಿದ್ದರು. ಈ ಬಾರಿ ಅವರಿಗೆ ಕುಂಬಳ ಕಾಯಿಯಲ್ಲಿ ಉತ್ತಮ ಬೆಳೆ ಬಂದಿತ್ತು. ಆದರೆ ಅದನ್ನು ಮಾರಾಟ ಮಾಡಲು ಅನಿರೀಕ್ಷಿತ ಲಾಕ್‌ಡೌನ್‌ ಅಡ್ಡಿಯಾಗಿತ್ತು. ಇದರಿಂದ ದೃತಿಗೆಟ್ಟಶಂಕರನಾರಾಯಣ ಭಟ್ಟರು ತಮ್ಮ ಆಪ್ತರಲ್ಲಿ ಇದನ್ನು ತಿಳಿಸಿದ್ದರು.

ಬೆಳೆ ನಾಶ ಮಾಡಿದ್ರೆ ಪರಿಹಾರ ಸಿಗಲ್ಲ: ಬಿ.ಸಿ.ಪಾಟೀಲ

ಕೂಡಲೇ ಕಾರ್ಯಪ್ರವೃತ್ತರಾದ ಅವರ ಆಪ್ತ, ಅಂತರ್ಜಲ ತಜ್ಞ ಡಾ.ಶ್ರೀಪಡ್ರೆ ಅವರು ಕಟಾವು ಮಾಡಿ ದಾಸ್ತಾನು ಇರಿಸಿದ್ದ ಕುಂಬಳಕಾಯಿಯ ಫೋಟೋ ತೆಗೆದು ಜಾಲತಾಣದಲ್ಲಿ ಬುಧವಾರ ಪೋಸ್ಟ್‌ ಮಾಡಿದ್ದರು. ಕೂಡಲೇ ಇದನ್ನು ಗಮನಿಸಿದ ಕೇರಳ ಕೃಷಿ ಸಚಿವ ಅನಿಲ್‌ ಕುಮಾರ್‌ ಅವರು ಹಾರ್ಟಿ-ಕಾಪ್‌ರ್‍ ಮೂಲಕ ಖರೀದಿಸಲು ನಿರ್ಧರಿಸಿದ್ದರು. ಮರುದಿನ ಶಂಕರನಾರಾಯಣ ಭಟ್‌ಗೆ ನೇರವಾಗಿ ಕರೆ ಮಾಡಿ ಬೆಳೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಗುರುವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಶಂಕರನಾರಾಯಣ ಭಟ್ಟರ ಮನೆಗೆ ಕಳುಹಿಸಿ ಕುಂಬಳಕಾಯಿ ಖರೀದಿಗೆ ವ್ಯವಸ್ಥೆ ಮಾಡುವ ಮೂಲಕ ಸಚಿವರು ಲಾಕ್‌ಡೌನ್‌ ವೇಳೆಯಲ್ಲೂ ಸರ್ಕಾರ ಬೆಳೆಗಾರರ ಪರವಾಗಿ ಇರುವ ಬಗ್ಗೆ ಧೈರ್ಯ ತುಂಬಿದರು.

2 ವಾರದಿಂದ ಉಡುಪಿಯಲ್ಲಿ ಹೊಸ ಕೊರೋನಾ ಪ್ರಕರಣವಿಲ್ಲ: ಕೇಂದ್ರದಿಂದ ಪ್ರಶಂಸೆ

ಈ ಕುಂಬಳಕಾಯಿ ಮಾರಾಟದ ಬಗ್ಗೆ ಫೋಟೋ ಸಹಿತ ವಿವರಗಳು ಜಾಲತಾಣಗಳಲ್ಲಿ ಸಾಕಷ್ಟುವೈರಲ್‌ ಆಗುತ್ತಿವೆ. ಹಾಗೂ ಗುರು​ವಾ​ರವೂ ವಾಟ್ಸಪ್‌ ಗ್ರೂಪು​ಗ​ಳಲ್ಲಿ ಈ ಸಂದೇಶ ಫಾರ್ವರ್ಡ್‌ ಆಗು​ತ್ತಲೇ ಇತ್ತು!