ವಿಶ್ವದ ಅತ್ಯಂತ ಪುರಾತನ ಮದ್ಯ ಫ್ಯಾಕ್ಟರಿಯಲ್ಲಿ ಸಿಕ್ತು 1,400 ವರ್ಷ ಹಳೆಯ ಉಂಗುರ!

* ವಿಶ್ವದ ಪುರಾತನ ಮದ್ಯ ಫ್ಯಾಕ್ಟರಿಯಲ್ಲಿ ಹಳೇ ಉಂಗುರ ಪತ್ತೆ

* ನಶೆ ತಡೆಯಲು ಬಳಸಲಾಗುತ್ತಿತ್ತು ಉಂಗುರ

Ancient gold ring with amethyst stone found in Byzantine Israel pod

ಇಸ್ರೇಲ್(ನ.05): ಇಸ್ರೇಲ್‌ನ ಪುರಾತತ್ವ ಶಾಸ್ತ್ರಜ್ಞರು ವಿಶ್ವದ ಅತಿದೊಡ್ಡ ಪುರಾತನ ಮದ್ಯದ ಕಾರ್ಖಾನೆಯಲ್ಲಿ ಎರಡು ಚಿನ್ನದ ಉಂಗುರಗಳನ್ನು ಪತ್ತೆ ಹಚ್ಚಿದ್ದಾರೆ. ಆ ಸಮಯದಲ್ಲಿ ಜನರು ಹ್ಯಾಂಗೊವರ್ ತಡೆಯಲು ಈ ಉಂಗುರವನ್ನು ಧರಿಸುತ್ತಿದ್ದರು ಎಂದು ತಜ್ಞರು ಅಂದಾಜಿಸಿದ್ದಾರೆ. ಇಸ್ರೇಲಿ ಪುರಾತತ್ವಶಾಸ್ತ್ರಜ್ಞರು ಈ ಅದ್ಭುತ ಉಂಗುರಗಳನ್ನು ದೇಶದ ಮಧ್ಯ ಪ್ರದೇಶದಲ್ಲಿರುವ ಯವ್ನೆ ನಗರದಲ್ಲಿ ಕಂಡುಕೊಂಡಿದ್ದಾರೆ. 75 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿರುವ ಬೈಜಾಂಟೈನ್ ಲಿಕ್ಕರ್ ಫ್ಯಾಕ್ಟರಿ ಇರುವ ಸ್ಥಳವೂ ಇದೇ.

ಪ್ರಾಚೀನ ಕಾಲದಲ್ಲಿ ಈ ಕಾರ್ಖಾನೆಯಿಂದ ಪ್ರತಿ ವರ್ಷ 20 ಲಕ್ಷ ಲೀಟರ್ ಮದ್ಯ ಉತ್ಪಾದನೆಯಾಗುತ್ತಿತ್ತು. ನೇರಳೆ ಬಣ್ಣದ ಕಲ್ಲುಗಳಿಂದ ಅಲಂಕರಿಸಲ್ಪಟ್ಟ ಈ ಉಂಗುರಗಳು ತುಂಬಾ ಹೊಳೆಯುತ್ತವೆ. ಈ ಉಂಗುರಗಳನ್ನು ಶ್ರೀಮಂತ ವ್ಯಕ್ತಿಯೊಬ್ಬರು ಧರಿಸಿದ್ದರು ಎಂದು ಹೇಳಲಾಗಿದೆ. ಈ ಉಂಗುರಗಳು ಏಳನೇ ಶತಮಾನದ್ದು ಎನ್ನಲಾಗಿದ್ದು, ಈ ಉಂಗುರಗಳನ್ನು ಧರಿಸಿದ ಕೊನೆಯ ವ್ಯಕ್ತಿ ವೈನ್ ಟೇಸ್ಟರ್ ಆಗಿರಬಹುದು ಎಂದು ಅಂದಾಜಿಸಲಾಗಿದೆ. ನೇರಳೆ ಕಲ್ಲು ಮದ್ಯದ ದುಷ್ಪರಿಣಾಮಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ.

ಉಂಗುರವನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಧರಿಸಬಹುದು

ಪ್ರಾಚೀನ ಕಾಲದಲ್ಲಿ, ನೇರಳೆ ಕಲ್ಲು ಹ್ಯಾಂಗೊವರ್‌ನಿಂದ ದೂರವಿರಿಸುತ್ತದೆ ಎಂದು ನಂಬಲಾಗಿತ್ತು. ಇಸ್ರೇಲ್‌ನ ಪುರಾತತ್ವ ಇಲಾಖೆಯು ಈ ಉಂಗುರಗಳ ಚಿತ್ರಗಳನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಬೈಬಲ್ ನಲ್ಲೂ ಜಂಬುಮಣಿ (ಹರಳೆಣ್ಣೆ) ಉಲ್ಲೇಖವಿದೆ ಎಂದೂ ಅವರು ತಿಳಿಸಿದ್ದಾರೆ. ಈ ಕಲ್ಲಿನಲ್ಲಿ ಅನೇಕ ಗುಣಗಳು ಅಡಗಿವೆ ಎಂದು ನಂಬಲಾಗಿದೆ. ವಿಪರ್ಯಾಸವೆಂದರೆ, ಮದ್ಯದ ಕಾರ್ಖಾನೆಯ ಬಳಿ ಉಂಗುರ ಕಂಡುಬಂದಿರುವುದರಿಂದ ಹ್ಯಾಂಗೊವರ್‌ ತಡೆಯುವುದು ಬಳಸಲಾಘುತ್ತಿತ್ತು ಎನ್ನಲಾಗಿದೆ.

ಜಂಬುಮಣಿ ಕೆನ್ನೇರಳೆ ಬಣ್ಣದ ಕಲ್ಲು ಆಗಿದ್ದು ಇದನ್ನು ಹಿಂದಿನ ಕಾಲದಲ್ಲಿ ಬಹಳ ಅಮೂಲ್ಯವೆಂದು ಪರಿಗಣಿಸಲಾಗಿತ್ತು. ಆದರೆ, ಈಗ ಅದರ ಮೌಲ್ಯ ಕುಸಿದಿದೆ. ಇಸ್ರೇಲಿ ಪ್ರಾಚೀನ ಆಭರಣ ತಜ್ಞ ಡಾ ಅಮೀರ್ ಗೋಲಾನಿ ಅವರು ಉಂಗುರವು ಶ್ರೀಮಂತ ವ್ಯಕ್ತಿಗೆ ಸೇರಿರಬೇಕು ಎಂದು ಹೇಳಿದ್ದಾರೆ. ಅದನ್ನು ಧರಿಸುವುದು ಎಂದರೆ ಆ ವ್ಯಕ್ತಿ ತುಂಬಾ ಉನ್ನತ ವ್ಯಕ್ತಿ ಮತ್ತು ಶ್ರೀಮಂತ ಎಂದು ಅರ್ಥವಿದೆ. ಈ ರೀತಿಯ ಉಂಗುರವನ್ನು ಪುರುಷರು ಮತ್ತು ಮಹಿಳೆಯರು ಧರಿಸಬಹುದು ಎಂದು ಅವರು ಹೇಳಿದರು. 7ನೇ ಶತಮಾನದ ಉತ್ಖನನದ ವೇಳೆ ಇದು ಪತ್ತೆಯಾಗಿರುವುದರಿಂದ 1400 ವರ್ಷಗಳಷ್ಟು ಹಳೆಯದಾಗಿರಬಹುದು ಎಂದರು.

Latest Videos
Follow Us:
Download App:
  • android
  • ios