Asianet Suvarna News Asianet Suvarna News

ಇಸ್ರೇಲಿಂದ ಹೊಸ ರೀತಿ ದಾಳಿ?: ಎರಡು ದೇಶಗಳಲ್ಲಿ ಸಾವಿರಾರು ಪೇಜರ್‌ ಬಾಂಬರ್‌ಗಳ ಸ್ಫೋಟ..!

ಲೆಬನಾನ್ ಮತ್ತು ಸಿರಿಯಾದಲ್ಲಿ ಈ ಸಾಮೂಹಿಕ ಸ್ಪೋಟ ಸಂಭವಿಸಿದೆ. ಈ ಪೇಜರ್ ಬಾಂಬ್ ಸ್ಪೋಟದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 3000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹಿಜ್ಜುಲ್ಲಾ ಉಗ್ರರು, ನಾಗರಿಕರು ಮತ್ತು ಲೆಬನಾನ್‌ನಲ್ಲಿನ ಇರಾನ್ ರಾಯಭಾರಿ ಮೊಜಬಾ ಅಮಾನಿ ಕೂಡಾ ಸೇರಿದ್ದಾರೆ. ಮೊದಲ ಸ್ಫೋಟ ಸಂಭವಿಸಿದ ನಂತರ 30 ನಿಮಿಷಗಳವರೆಗೆ ಸತತವಾಗಿ ಪೇಜರ್‌ಗಳು ಏಕಾಏಕಿ ಬಿಸಿ ಆಗಿ ಸೋಟಗೊಂಡಿವೆ. 

Explosive pager bombers in Conflict between Israel and Hamas militants grg
Author
First Published Sep 18, 2024, 8:56 AM IST | Last Updated Sep 18, 2024, 11:51 AM IST

ಬೈರೂತ್(ಸೆ.18):  ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಸಂಘರ್ಷ ಕೊನೆಗಾಣಿಸಲು ಜಾಗತಿಕ ಪ್ರಯತ್ನ ನಡೆದಿರುವಾಗಲೇ, ಇಡೀ ವಿಶ್ವವೇ ಬೆಚ್ಚಿಬೀಳುವಂಥ ಘಟನೆಯೊಂದು ಮಂಗಳವಾರ ಸಂಭವಿಸಿದೆ. ಹಮಾಸ್ ಉಗ್ರರಿಗೆ ಬೆಂಬಲವಾಗಿ ನಿಂತಿರುವ ಸಾವಿರಾರು ಹಿಜ್ಜುಲ್ಲಾ ಉಗ್ರರು ಬಳಸುತ್ತಿದ್ದ ಪೇಜರ್‌ಗಳನ್ನು ಮಂಗಳವಾರ ಏಕಕಾಲಕ್ಕೆ ಸ್ಫೋಟಿಸಲಾಗಿದೆ. 

ಲೆಬನಾನ್ ಮತ್ತು ಸಿರಿಯಾದಲ್ಲಿ ಈ ಸಾಮೂಹಿಕ ಸ್ಪೋಟ ಸಂಭವಿಸಿದೆ. ಈ ಪೇಜರ್ ಬಾಂಬ್ ಸ್ಪೋಟದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 3000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹಿಜ್ಜುಲ್ಲಾ ಉಗ್ರರು, ನಾಗರಿಕರು ಮತ್ತು ಲೆಬನಾನ್‌ನಲ್ಲಿನ ಇರಾನ್ ರಾಯಭಾರಿ ಮೊಜಬಾ ಅಮಾನಿ ಕೂಡಾ ಸೇರಿದ್ದಾರೆ. ಮೊದಲ ಸ್ಫೋಟ ಸಂಭವಿಸಿದ ನಂತರ 30 ನಿಮಿಷಗಳವರೆಗೆ ಸತತವಾಗಿ ಪೇಜರ್‌ಗಳು ಏಕಾಏಕಿ ಬಿಸಿ ಆಗಿ ಸೋಟಗೊಂಡಿವೆ. 'ಪೇಜರ್‌ಗಳ ಸ್ಪೋಟವು ಇಸ್ರೇಲ್ ನೊಂದಿಗಿನ ಸುಮಾರು 1 ವರ್ಷದ ಯುದ್ಧದಲ್ಲಿ ನಾವು ಎದುರಿಸಿದ ಅತಿದೊಡ್ಡ ಭದ್ರತಾ ವೈಫಲ್ಯ' ಎಂದು ಹಿಜ್ಜುಲ್ಲಾ ಮುಖಂಡನೊಬ್ಬ ಹೇಳಿದ್ದಾನೆ. 

ಕೆಲಸದ ನಡುವೆ ಬ್ರೇಕ್‌ನಲ್ಲೂ ಮಾಡಿ: ಜನಸಂಖ್ಯಾ ಹೆಚ್ಚಳಕ್ಕೆ ಕ್ರೇಜಿ ಸಲಹೆ ನೀಡಿದ ರಸಿಕ ಪುಟಿನ್

ಮೊಬೈಲ್‌ಗೆ ಗುಡ್‌ಬೈ: 

ಕೆಲ ತಿಂಗಳ ಹಿಂದಷ್ಟೇ ಹಿಜ್ಜುಲ್ಲಾ ಉಗ್ರ ಸಂಘಟನೆಯು, ಸಂವಹನದಲ್ಲಿನ ಗೌಪ್ಯತೆ ಕಾಪಾಡಲು ತನ್ನ ಉಗ್ರರಿಗೆಮೊಬೈಲ್ ತ್ಯಜಿಸಲು ಸೂಚಿಸಿತ್ತು. ಮೊಬೈಲ್ ಬಳಸಿದರೆ ಅದರ ಆಧಾರದಲ್ಲಿ ಇಸ್ರೇಲಿ ಸೇನೆ ನಮ್ಮ ಚಲನವಲನದ ಮೇಲೆ ಕಣ್ಣಿಡಬಹುದು ಮತ್ತು ಮೊಬೈಲ್ ಗುರಿಯಾಗಿಸಿ ದಾಳಿ ನಡೆಸಬಹುದು ಎಂದು ಎಚ್ಚರಿಸಿ ಪೇಜರ್ ಬಳಕೆಗೆ ಸೂಚಿಸಿತ್ತು. ಆದರೆ ಇದೀಗ ಪೇಜರ್ ಗಳನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿದೆ. 2 ತಿಂಗಳ ಹಿಂದಷ್ಟೇ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೇ ಇರಾನ್‌ ಗೆ ಭೇಟಿ ನೀಡಿದಾಗ ಅಲ್ಲಿ ನಡೆದ ನಿಗೂಢ ದಾಳಿಯಲ್ಲಿ ಸಾವನ್ನಪ್ಪಿದರು. ಆದರಲ್ಲೂ ಇಸ್ರೇಲ್ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಈ ಸಾಮೂಹಿಕ ಪೇಜರ್ ಸೋಟ ಸಂಭವಿಸಿದೆ. 

ಸೇಡಿಗಾಗಿ ಕ್ರಮ?:

ಈ ಸ್ಪೋಟಕ್ಕೆ ಕಾರಣ ಏನು ಎಂದು ತಿಳಿದುಬಂದಿಲ್ಲವಾದರೂ, ಸೇಡಿಗಾಗಿ ಇಸ್ರೇಲ್, ಬಹುಶಃ ಪೇಜರ್‌ಗಳನ್ನು ಹ್ಯಾಕ್ ಮಾಡಿ, ಬ್ಯಾಟರಿ ಬಿಸಿ ಮಾಡಿ ಸ್ಪೋಟಿಸಿರಬಹುದು ಎನ್ನಲಾಗಿದೆ. ಇಂಥ ನಿಗೂಢ ದಾಳಿಗೆ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ ಕುಖ್ಯಾತವಾಗಿದ್ದು, ಈ ಘಟನೆಯ ಹಿಂದೆಯೂ ಅದರ ಕೈವಾಡ ರಸ್ತೆಯಲ್ಲಿ ಸಾಗುವ ವ್ಯಕ್ತಿಯ ಬಳಿಯ ಪೇಜರ್, ಅಂಗಡಿ ಯಲ್ಲಿ ವ್ಯಕ್ತಿಗಳು ಇಟ್ಟುಕೊಂಡಿದ್ದಪೇಜರ್‌ಗಳು ಸ್ಪೋಟವಾಗಿ ರಸ್ತೆ ಹಾಗೂ ಅಂಗಡಿಗಳಲ್ಲಿನ ಜನರು ಕಕ್ಕಾಬಿಕ್ಕಿಯಾಗಿ ಓಡುವ ವಿಡಿಯೋ ವೈರಲ್ ಆಗಿವೆ. ರಸ್ತೆಯಲ್ಲಿ ಪೇಜರ್ ಸ್ಫೋಟ ಗೊಂಡು ರಕ್ತಸಿಕ್ತನಾದ ವ್ಯಕ್ತಿಯ ಚಿತ್ರಗಳೂ ಲಭ್ಯವಾಗಿವೆ. ಜೊತೆಗೆ ಆಸ್ಪತ್ರೆಗಳಲ್ಲಿ ಸಾವಿರಾರು ಜನರು ಚಿಕಿತ್ಸೆ ಪಡೆಯು ತ್ತಿರುವ ಫೋಟೋಗಳನ್ನು ಲೆಬನಾನ್ ಬಿಡುಗಡೆ ಮಾಡಿದೆ.

ಏನಿದು ಪೇಜರ್? 

ಮೊಬೈಲ್‌ಗಿಂತ ಮೊದಲು ಪೇಜರ್ ಗಳು ಸಂವಹನಕ್ಕೆಂದು ಬಂದಿದ್ದವು. ವ್ಯಕ್ತಿಗಳು ಮೊಬೈಲ್ ರೀತಿಯೇ ಇವನ್ನು ಇಟ್ಟುಕೊಂಡ ಸಂಚರಿಸಬಹುದು. ಆದರೆ ಇವುಗಳ ಮೂಲಕ ಸಂದೇಶ ಮಾತ್ರ ಕಳಿಸ ಬಹುದು. ಮೊಬೈಲ್ ರೀತಿ ಮಾತನಾಡಲು ಆಗದು. ವಿಶ್ವಾದ್ಯಂತ ಇವು ಔಟ್‌ ಡೇಟೆಡ್ ಆದರೂ ಹಿಜ್ಜುಲ್ಲಾ ಉಗ್ರರು ಈಗಲೂ ಇವನ್ನು ಸಂವಹನದಲ್ಲಿ ಗೌಪ್ಯತೆ ಕಾಪಾಡಲು ಬಳಸುತ್ತಿದ್ದರು.

ಭಾರತದ ಮುಸ್ಲಿಮರ ಬಗ್ಗೆ ಇರಾನ್ ಅಧ್ಯಕ್ಷನ ಹೇಳಿಕೆಗೆ ಭಾರತದ ವಿದೇಶಾಂಗ ಇಲಾಖೆ ತೀವ್ರ ಖಂಡನೆ

ಸ್ಫೋಟ ನಡೆಸಿದ್ದು ಹೀಗಿರಬಹುದು? 

ಪೇಜರ್‌ಗಳು ಹಳೆಯ ಸಾಫ್ಟ್‌ವೇರ್ ಬಳಸುತ್ತವೆ. ಇದನ್ನು ಹ್ಯಾಕ್ ಮಾಡುವುದು ಸುಲಭ. ಇದನ್ನು ಗಮನಿಸಿ, ಸಾಫ್ಟ್‌ವೇ‌ರ್ ಹ್ಯಾಕ್ ಮಾಡಿ ಪೇಜರ್‌ಗಳಲ್ಲಿ ಬಳಸುವ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಅಗತ್ಯಕ್ಕಿಂತ ಹೆಚ್ಚು ಚಾರ್ಜ್ ಆಗುವಂತೆ ಮಾಡಲಾಗಿದೆ. ಹೀಗಾಗಿ ಭಾರೀ ಹೀಟ್ ಆದ ಬಳಿಕ ಬ್ಯಾಟರಿ ಸ್ಫೋಟಗೊಳ್ಳುವಂತೆ ಮಾಡಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಸಾಂಪ್ರದಾಯಿಕ ದಾಳಿಗಿಂತ ಭೀಕರ 

ನವದೆಹಲಿ: ಗ್ರೆನೇಡ್, ಬಾಂಬ್, ಗುಂಡಿನ ದಾಳಿ ನಡೆಸುವುದು ಸಾಂಪ್ರದಾಯಿಕ ಮಾದರಿಯ ದಾಳಿಗೆ ಉದಾಹರಣೆ. ಇವು ಸೀಮಿತ ಪ್ರದೇಶ, ಸೀಮಿತ ಜನಸಂಖ್ಯೆಗೆ ಸೀಮಿತ. ಆದರೆ ತಂತ್ರಜ್ಞಾನ ಬಳಸಿ ನಡೆಸುವಂಥ ಪೇಜರ್ ಬಾಂಬ್‌ನಂಥ ಘಟನೆಗಳು ತಂತ್ರಜ್ಞಾನದ ದುರ್ಬಳಕೆಗೊಂದು ದೊಡ್ಡ ಸಾಕ್ಷಿ. ಜೊತೆಗೆ ಭವಿಷ್ಯದಲ್ಲಿ ಯಾವುದೇ ವ್ಯಕ್ತಿ, ಯಾವುದೇ ಉಗ್ರ ಸಂಘಟನೆ ಅಥವಾ ಯಾವುದೇ ದೇಶವೊಂದು ತನ್ನ ಶತ್ರುಗಳನ್ನು ಗುರಿಯಾಗಿಸಿ ಏಕಕಾಲಕ್ಕೆ ದಾಳಿ ನಡೆಸಿ ಭೀಕರ ಅನಾಹುತಕ್ಕೆ ಕಾರಣವಾಗಬಲ್ಲ ಸಂಭವನೀಯತೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.

Latest Videos
Follow Us:
Download App:
  • android
  • ios